ರಾಜ್ಯ

ಬಂಧನದ ಮೂಲಕ ತಂದೆಯನ್ನು ಮೌನಗೊಳಿಸುವ ಯತ್ನ, ಅವರಿಗೇನಾದರೂ ಆಗಿದ್ದರೆ ಸರ್ಕಾರವೇ ಹೊಣೆ: ಸ್ನೇಹಮಯಿ ಕೃಷ್ಣ ಪುತ್ರ

ಮುಡಾ ಮಾಜಿ ಆಯುಕ್ತ ಡಿಬಿ ನಟೇಶ್ (DB Natesh) ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ನಟೇಶ್ ನೀಡಿದ ದೂರಿನ ಅನ್ವಯ ಸೈಬರ್ ಕ್ರೈಮ್ ಪೊಲೀಸರು ಸ್ನೇಹಮಯಿ ಕೃಷ್ಣರನ್ನು ಬಂಧನಕ್ಕೊಳಪಡಿಸಿದ್ದಾರೆ.

ಬಂಧನದ ಮೂಲಕ ತಂದೆಯನ್ನು ಮೌನಗೊಳಿಸುವ ಯತ್ನ, ಅವರಿಗೇನಾದರೂ ಆಗಿದ್ದರೆ ಸರ್ಕಾರವೇ ಹೊಣೆ: ಸ್ನೇಹಮಯಿ ಕೃಷ್ಣ ಪುತ್ರ
ಸ್ನೇಹಮಯಿ ಕೃಷ್ಣ
Published On :

ಮೈಸೂರು: ಮುಡಾ ಹಗರಣ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಾದ ಮಂಡಿಸಲು ಕೆಲವೇ ಗಂಟೆಗಳ ಮುನ್ನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದು, ಇದರ ಬೆನ್ನಲ್ಲೇ ಸರ್ಕಾರದ ವಿರುದ್ಧ ಸ್ನೇಹಮಯಿ ಕೃಷ್ಣ ಪುತ್ರ ಕಿಡಿಕಾರಿದ್ದಾರೆ.

ಮುಡಾ ಮಾಜಿ ಆಯುಕ್ತ ಡಿಬಿ ನಟೇಶ್ (DB Natesh) ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ನಟೇಶ್ ನೀಡಿದ ದೂರಿನ ಅನ್ವಯ ಸೈಬರ್ ಕ್ರೈಮ್ ಪೊಲೀಸರು ಸ್ನೇಹಮಯಿ ಕೃಷ್ಣರನ್ನು ಬಂಧನಕ್ಕೊಳಪಡಿಸಿದ್ದಾರೆ.

ಈ ನಡುವೆ ಮುಡಾ ಕೇಸ್ ವಿಚಾರಣೆ ಸಂಬಂಧ ಸ್ನೇಹಮಯಿ ಕೃಷ್ಣ ಅವರು ಶುಕ್ರವಾರ ಕೋರ್ಟ್‌ಗೆ ಹಾಜರಾಗಬೇಕಿತ್ತು. ಆದರೆ, ಪೊಲೀಸರಿಂದ ಬಂಧನಕ್ಕೊಳಗಾದ ಹಿನ್ನೆಲೆಯಲ್ಲಿ ಸ್ನೇಹಮಯಿ ಕೃಷ್ಣ ಬದಲು ಅವರ ಮಗ ಕೋರ್ಟ್‌ಗೆ ಹಾಜರಾಗಿದ್ದರು.

ಕೋರ್ಟ್ ಕಲಾಪದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸ್ನೇಹಮಯಿ ಕೃಷ್ಣ ಅವರ ಪುತ್ರ ವಿವೇಕ್ ಅವರು, ಸಿಸಿಬಿ ಅಧಿಕಾರಿಗಳು ಕರೆದುಕೊಂಡು ಹೋಗಿದ್ದಾರೆ ಎಂದು ನಮಗೆ ತಿಳಿಸಲಾಯಿತು. ಆದರೆ,ಸಿಸಿಬಿ ಕಚೇರಿಗೆ ಹೋದಾಗ ಅವರು ಅಲ್ಲಿಲ್ಲ ಎಂದು ಹೇಳಿದರು. ಅವರನ್ನು ಅನಾಮಧೇಯ ಸ್ಥಳಕ್ಕೆ ಕರೆದೊಯ್ಯಲಾಗುತ್ತಿದೆಯೆಂಬ ಆತಂಕವಿದೆ. ನನ್ನ ತಂದೆಗೆ ಏನಾದರೂ ಆಗಿದ್ದರೆ ರಾಜ್ಯ ಸರ್ಕಾರವೇ ಹೊಣೆ ಎಂದು ಹೇಳಿದರು.

ನ್ಯಾಯಾಲಯದಲ್ಲಿ ಸಾಕ್ಷ್ಯ ಮತ್ತು ವಾದ ಮಂಡಿಸದಂತೆ ತಡೆಯಲು ಬಂಧನಕ್ಕೊಳಪಡಿಸಿದ್ದಾರೆ. ಸಾಕ್ಷ್ಯ ನೀಡಬಹುದು ಎಂಬ ಭಯದಿಂದ ಮಧ್ಯಾಹ್ನದ ವಿಚಾರಣೆಗೂ ಮೊದಲು ಬಂಧಿಸಿದ್ದಾರೆ. ಇದು ಅವರನ್ನು ಮೌನಗೊಳಿಸುವ ಪ್ರಯತ್ನ, ಬಂಧನ ಸಂಬಂಧ ಎಫ್‌ಐಆರ್ ಪ್ರತಿ ಅಥವಾ ಪ್ರಕರಣದ ವಿವರವನ್ನು ಕುಟುಂಬಕ್ಕೆ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ ಹಗರಣ ಪ್ರಕರಣ ಸಂಬಂಧ ಆಡಿಯೋ ಕ್ಲಿಪ್ ಮತ್ತು ಸಾಕ್ಷ್ಯ ಬಿಡುಗಡೆ ಮಾಡಿದ್ದರು. ಮುಡಾ ಪ್ರಕರಣ ಹಿಂಬಾಲಿಸಿದ್ದಕ್ಕಾಗಿ ಮತ್ತು ಮಾಜಿ ಮುಡಾ ಆಯುಕ್ತ ಡಿ.ಬಿ. ನಟೇಶ್ ವಿರುದ್ಧ ಆರೋಪ ಮಾಡಿದ್ದರಿಂದ ತಂದೆಗೆ ಒತ್ತಡವಿತ್ತು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.