ರಾಜ್ಯ

ವೀರ್‌ ಸಾವರ್ಕರ್‌ಗೆ ದೇಶದ ಅತ್ಯುನ್ನತ 'ಭಾರತ ರತ್ನ' ಪ್ರಶಸ್ತಿ ಏಕೆ: ದಿನೇಶ್ ಗುಂಡೂರಾವ್ ತೀವ್ರ ಪ್ರಶ್ನೆ

ಭಾರತ ರತ್ನ ಗೌರವವು ದೇಶದ ಸಂಪೂರ್ಣ ಜನತೆಯನ್ನು ಪ್ರತಿನಿಧಿಸುವ ಮಹಾನ್ ನಾಯಕರಿಗೆ ಮಾತ್ರ ನೀಡಬೇಕು.

ವೀರ್‌ ಸಾವರ್ಕರ್‌ಗೆ ದೇಶದ ಅತ್ಯುನ್ನತ 'ಭಾರತ ರತ್ನ' ಪ್ರಶಸ್ತಿ ಏಕೆ: ದಿನೇಶ್ ಗುಂಡೂರಾವ್ ತೀವ್ರ ಪ್ರಶ್ನೆ
ದಿನೇಶ್ ಗುಂಡೂರಾವ್
Published On :

ಬೆಂಗಳೂರು: ಹಿಂದೂತ್ವ ಚಿಂತಕ ವಿನಾಯಕ ದಾಮೋದರ್ ಸಾವರ್ಕರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ನೀಡಬೇಕೆಂಬ ಬೇಡಿಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ರತ್ನ ಗೌರವವು ದೇಶದ ಸಂಪೂರ್ಣ ಜನತೆಯನ್ನು ಪ್ರತಿನಿಧಿಸುವ ಮಹಾನ್ ನಾಯಕರಿಗೆ ಮಾತ್ರ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾವರ್ಕರ್ ಕೆಲವೇ ವರ್ಗಗಳಿಗೆಷ್ಟೇ ನಾಯರಾಗಿದ್ದರು, ಅವರು ಎಲ್ಲರಿಗೂ ಒಪ್ಪಿಗೆಯಾದ ನಾಯಕನಲ್ಲ ಎಂದು ಹೇಳಿದರು.

ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಸಾವರ್ಕರ್ ಪಾತ್ರದ ಕುರಿತು ವಿವಾದವಿದೆ, ಈ ಕಾರಣದಿಂದಾಗಿ ಅವರನ್ನು ರಾಷ್ಟ್ರದ ಮಹಾನ್ ನಾಯಕ ಎಂದು ಪರಿಗಣಿಸಲಾಗದು ಎಂದು ಟೀಕಿಸಿದರು. ಅಲ್ಲದೇ, ಅಂಡಮಾನ್ ಜೈಲಿನಿಂದ ಬಿಡುಗಡೆಯಾದ ಬಳಿಕ ಅವರು ಸ್ವಾತಂತ್ರ್ಯ ಹೋರಾಟದಿಂದ ಹಿಂದೆ ಸರಿದರು ಎಂಬ ತಮ್ಮ ಆರೋಪವನ್ನು ಪುನರುಚ್ಚರಿಸಿದರು.

ಇತಿಹಾಸದ ದಾಖಲೆಗಳ ಪ್ರಕಾರ, 1948ರಲ್ಲಿ ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಸಾವರ್ಕರ್ ಬಂಧಿತರಾಗಿದ್ದರೂ ಸಾಕ್ಷ್ಯಗಳ ಕೊರತೆಯಿಂದ ನ್ಯಾಯಾಲಯದಿಂದ ನಿರ್ದೋಷಿಯಾಗಿ ಬಿಡುಗಡೆಗೊಂಡಿದ್ದರು. ಬ್ರಿಟಿಷ್ ಸರ್ಕಾರಕ್ಕೆ ಸಲ್ಲಿಸಿದ ಕ್ಷಮಾ ಅರ್ಜಿಗಳು ಮತ್ತು ಅವರ ನಂತರದ ರಾಜಕೀಯ ಚಟುವಟಿಕೆಗಳು ಇಂದಿಗೂ ಸಾರ್ವಜನಿಕ ಚರ್ಚೆಯ ವಿಷಯವಾಗಿವೆ.

ಈ ವಿಚಾರದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಾವರ್ಕರ್ ಅವರನ್ನು ಕ್ರಾಂತಿಕಾರಿ ನಾಯಕ ಎಂದು ಗೌರವಿಸುತ್ತಿದ್ದರೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಅವರನ್ನು ಭಾರತದ ಸ್ವಾತಂತ್ರ್ಯಕ್ಕಾಗಿ ಜೈಲು ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿ ಎಂದು ಶ್ಲಾಘಿಸಿದರೂ, ಕಾಂಗ್ರೆಸ್ ನಾಯಕರು ಈ ಬಗ್ಗೆ ಆಗಾಗ್ಗೆ ಪ್ರಶ್ನೆ ಎತ್ತುತ್ತಲೇ ಬಂದಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.