ರಾಜ್ಯ

ದೊಡ್ಡಬಳ್ಳಾಪುರ: ಹಳಿ ದಾಟುತ್ತಿದ್ದ ವೇಳೆ ಹರಿದ ರೈಲು; ಅಜ್ಜಿ ಇಬ್ಬರು ಮೊಮ್ಮಕ್ಕಳು ದಾರುಣ ಸಾವು; ದಿಕ್ಕಾಪಾಲಾಗಿ ಬಿದ್ದ ದೇಹಗಳು!

ರೈಲ್ವೆ ಹಳಿಗಳ ಮೇಲೆ ನಡೆದುಕೊಂಡು ಬರುತ್ತಿದ್ದರು. ಎರಡು ಹಳಿಗಳಿದ್ದು, ತಿರುವಿನಲ್ಲಿ ರೈಲು ಬರುತ್ತಿರುವುದು ಗಮನಕ್ಕೆ ಬಂದಿಲ್ಲ. ವೇಗವಾಗಿ ಬಂದ ಎಕ್ಸ್​ಪ್ರೆಸ್ ರೈಲು ಮೂವರ ಮೇಲೆ ಹರಿದಿದೆ,

ದೊಡ್ಡಬಳ್ಳಾಪುರ: ಹಳಿ ದಾಟುತ್ತಿದ್ದ ವೇಳೆ ಹರಿದ ರೈಲು; ಅಜ್ಜಿ ಇಬ್ಬರು ಮೊಮ್ಮಕ್ಕಳು ದಾರುಣ ಸಾವು; ದಿಕ್ಕಾಪಾಲಾಗಿ ಬಿದ್ದ ದೇಹಗಳು!
ಸಾಂದರ್ಭಿಕ ಚಿತ್ರ
Published On :

ದೊಡ್ಡಬಳ್ಳಾಪುರ: ರೈಲ್ವೆ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಎಕ್ಸ್​​ಪ್ರೆಸ್ ರೈಲಿಗೆ ಸಿಲುಕಿ ಮಹಿಳೆ ಹಾಗೂ ಇಬ್ಬರು ಮೊಮ್ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಸಮೀಪ ಸೋಮವಾರ ಮುಂಜಾನೆ ಸಂಭವಿಸಿದೆ.

ಮೃತರನ್ನು ಇರ್ಫಾನಾ (52) ಹಾಗೂ ಮೊಮ್ಮಕ್ಕಳಾದ ರುಕಿಯಾ (13) ಮತ್ತು ರಾಕಿಯಾ (08) ಎಂದು ಗುರುತಿಸಲಾಗಿದೆ. ಲಭ್ಯ ಮಾಹಿತಿ ಪ್ರಕಾರ, ಮೃತರು ಮುತ್ತೂರು ಕಡೆಯಿಂದ ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದ ವೇಳೆ ಘಟನೆ ಜರುಗಿದೆ.

ರೈಲ್ವೆ ಹಳಿಗಳ ಮೇಲೆ ನಡೆದುಕೊಂಡು ಬರುತ್ತಿದ್ದರು. ಎರಡು ಹಳಿಗಳಿದ್ದು, ತಿರುವಿನಲ್ಲಿ ರೈಲು ಬರುತ್ತಿರುವುದು ಗಮನಕ್ಕೆ ಬಂದಿಲ್ಲ. ವೇಗವಾಗಿ ಬಂದ ಎಕ್ಸ್​ಪ್ರೆಸ್ ರೈಲು ಮೂವರ ಮೇಲೆ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಜೆ ಇದ್ದ ಹಿನ್ನೆಲೆಯಲ್ಲಿ, ಮೊಮ್ಮಕ್ಕಳು ಹಿಂದೂಪುರದಿಂದ ಅಜ್ಜಿಯ ಮನೆಯಾದ ಮುತ್ತೂರಿಗೆ ಬಂದಿದ್ದರು. ಬೆಳಗ್ಗೆ ಹಿಂದೂಪುರಕ್ಕೆ ಹೋಗಲು ಅಜ್ಜಿಯ ಜೊತೆ ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣಕ್ಕೆ ಹೋಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಬೇಗ ಬೇಗ ಮನೆಗೆ ಸೇರಿ ಶಾಲೆಗೆ ಹೋಗ್ಬೇಕು ಅನ್ನೋ ಅವಸರದಲ್ಲೇ ರೈಲು ಹಳಿ ದಾಟುತ್ತಿದ್ದ ಅಜ್ಜಿ ಮೊಮ್ಮಕ್ಕಳಿಗೆ ಪ್ಯಾಸೆಂಜರ್​ ರೈಲು ಡಿಕ್ಕಿ ಹೊಡೆದಿದ್ದು, ಮೂವರ ದೇಹ ದಿಕ್ಕಾಪಾಲಾಗಿ ಬಿದ್ದಿದೆ. ದೊಡ್ಡಬಳ್ಳಾಪುರ ನಗರದ ರೈಲ್ವೆ ಸ್ಟೇಷನ್​​ನಲ್ಲಿ ಈ ಘಟನೆ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.