ಬಿಡದಿ: ವೃಷಭಾವತಿ ನದಿ ಸೇತುವೆ ಕೆಳಗೆ ಕಂತೆ ಕಂತೆ ನಕಲಿ ನೋಟು ಪತ್ತೆ; ಪೊಲೀಸರಿಂದ ಪರಿಶೀಲನೆ; Video
ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ಬಳಿಕ ನೋಟುಗಳು ಅಸಲಿಯಲ್ಲ, 100 ಹಾಗೂ 500 ನೋಟುಗಳ ಮಾದರಿಯ ಜೆರಾಕ್ಸ್ ಪ್ರತಿಗಳಾಗಿವೆ ಎಂಬುದು ತಿಳಿದು ಬಂದಿದೆ.

ಬಿಡದಿ: ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಬಳಿ ವೃಷಭಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕೆಳಭಾಗದಲ್ಲಿ ಕಂತೆ ಕಂತೆ ನಕಲಿ ನೋಟು ಪತ್ತೆಯಾಗಿವೆ. 100 ಮತ್ತು 500 ಮುಖಬೆಲೆಯ ನಕಲಿ ನೋಟುಗಳು ಕೊಳಚೆ ನೀರಿನಲ್ಲಿ ಬಿಸಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ವಿಷಯ ವ್ಯಾಪಕವಾಗಿ ಹರಡುತ್ತಿದ್ದಂತೆ ಸೇತುವೆ ಮೇಲೆ ವಾಹನ ಸವಾರರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡು ನೋಟುಗಳ ಕಂತೆಗಳನ್ನು ವೀಕ್ಷಿಸಿದರು. ಕೆಲವರು ನಕಲಿ ನೋಟುಗಳನ್ನು ಯಾರೋ ತಂದು ಎಸೆದಿದ್ದಾರೆ ಎಂದು ಹೇಳಿದರೆ, ಇನ್ನು ಕೆಲವರು ಅವು ಅಸಲಿ ನೋಟುಗಳಿರಬಹುದು ಎನ್ನುತ್ತಿದ್ದರು.
ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ಬಳಿಕ ನೋಟುಗಳು ಅಸಲಿಯಲ್ಲ, 100 ಹಾಗೂ 500 ನೋಟುಗಳ ಮಾದರಿಯ ಜೆರಾಕ್ಸ್ ಪ್ರತಿಗಳಾಗಿವೆ ಎಂಬುದು ತಿಳಿದು ಬಂದಿದೆ.
ನಕಲಿ ನೋಟುಗಳ ಮೇಲೆ 'ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ' ಹಾಗೂ 'ಫಾರ್ ಪ್ರಾಜೆಕ್ಟ್ ಸ್ಕೂಲ್ ಯೂಸ್ ಓನ್ಲಿ' ಎಂದು ನಮೂದಿಸಿರುವುದು ಪತ್ತೆಯಾಗಿದೆ. ಇಷ್ಟೊಂದು ಪ್ರಮಾಣದ ನಕಲಿ ನೋಟುಗಳನ್ನು ಯಾರು, ಯಾವ ಉದ್ದೇಶಕ್ಕಾಗಿ ಕೊಳಚೆ ನೀರಿನ ಬಳಿ ತಂದು ಎಸೆದು ಹೋಗಿದ್ದಾರೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ನೋಟುಗಳನ್ನು ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಬಿಡದಿ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


