ಕಾಮಗಾರಿ ವೀಕ್ಷಣೆಗೆ ಬಂದ ಕೆಂಗಲ್ ಹನುಮಂತಯ್ಯ ಮೇಲೆ ಖೈದಿಗಳು ಚಪ್ಪಲಿ ಎಸೆದಿದ್ದರು; ವಿಧಾನಸೌಧ ಕಟ್ಟಿಸಿದವರು ಅದರಲ್ಲಿ ಕೂರಲಿಲ್ಲ: ಸಿಎಂ ಡಿಕೆಶಿ
ವಿಧಾನಸೌಧ ಕಟ್ಟಿಸಿದ ಕೆಂಗಲ್ ಹನುಮಂತಯ್ಯ ಅವರಿಗೇ ಇಲ್ಲಿ ಕುಳಿತುಕೊಳ್ಳಲು ಅವಕಾಶ ಸಿಗಲಿಲ್ಲ. ಕೆಂಪೇಗೌಡರು ಬೆಂಗಳೂರು ಕಟ್ಟಿದರು, ಹನುಮಂತಯ್ಯನವರು ವಿಧಾನಸೌಧ ಕಟ್ಟಿದರು, ನೀವು ಅವರಂತೆಯ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು ಎಂದು ಎಸ್ ಎಂ ಕೃಷ್ಣ ಅವರಲ್ಲಿ ಚರ್ಚೆ ನಡೆಸಿದೆ.

ಬೆಂಗಳೂರು: ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿಸಿದರು. ಆಗ ಇದನ್ನು ಖೈದಿಗಳು ಕಟ್ಟಿದರು. ಒಂದು ದಿನ ಕಟ್ಟಡ ಕಾಮಗಾರಿ ವೀಕ್ಷಣೆಗೆ ಬಂದ ಕೆಂಗಲ್ ಹನುಮಂತಯ್ಯ ಅವರ ಮೇಲೆ ಖೈದಿಗಳು ಸಿಟ್ಟಿನಿಂದ ಚಪ್ಪಲಿ ಎಸೆದಿದ್ದರು. ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಅವರಿಗೇ ಈ ಇಲ್ಲಿ ಕುಳಿತುಕೊಳ್ಳಲು ಅವಕಾಶ ಸಿಗಲಿಲ್ಲ" ಎಂದರು.
ವಿಧಾನ ಪರಿಷತ್ ನಲ್ಲಿ ಮಾತನಾಡಿದ ಅವರು , ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕಾಗ ಬಳಸಿಕೊಳ್ಳಬೇಕು. ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿಸಿದರು. ಆಗ ಇದನ್ನು ಖೈದಿಗಳು ಕಟ್ಟಿದರು. ಒಂದು ದಿನ ಕಟ್ಟಡ ಕಾಮಗಾರಿ ವೀಕ್ಷಣೆಗೆ ಬಂದ ಕೆಂಗಲ್ ಹನುಮಂತಯ್ಯ ಅವರ ಮೇಲೆ ಖೈದಿಗಳು ಸಿಟ್ಟಿನಿಂದ ಚಪ್ಪಲಿ ಎಸೆದಿದ್ದು ಇತಿಹಾಸ.
ಇಷ್ಟೆಲ್ಲ ಆಗಿ, ವಿಧಾನಸೌಧ ಕಟ್ಟಿಸಿದ ಕೆಂಗಲ್ ಹನುಮಂತಯ್ಯ ಅವರಿಗೇ ಇಲ್ಲಿ ಕುಳಿತುಕೊಳ್ಳಲು ಅವಕಾಶ ಸಿಗಲಿಲ್ಲ. ಕೆಂಪೇಗೌಡರು ಬೆಂಗಳೂರು ಕಟ್ಟಿದರು, ಹನುಮಂತಯ್ಯನವರು ವಿಧಾನಸೌಧ ಕಟ್ಟಿದರು, ನೀವು ಅವರಂತೆಯ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು ಎಂದು ಎಸ್ ಎಂ ಕೃಷ್ಣ ಅವರಲ್ಲಿ ಚರ್ಚೆ ನಡೆಸಿದೆ.
ಅದರ ಫಲವೇ ಈ ವಿಕಾಸಸೌಧ. ವಿಕಾಸಸೌಧದ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಅವರಿಗೆ ಕುರ್ಚಿ ಮೀಸಲಿಡಲಾಗಿತ್ತು. ಆ ಕುರ್ಚಿ ಮೇಲೆ ಲೋಕೋಪಯೋಗಿ ಸಚಿವರಾಗಿದ್ದ ಧರಂಸಿಂಗ್ ಅವರನ್ನು ಕೂರಿಸಿದರು. ಆಗ ನನಗೆ ಭವಿಷ್ಯ ಕಣ್ಣ ಮುಂದೆ ಬಂದಿತು. ನಂತರ ಧರ್ಮಸಿಂಗ್ ಅವರೇ ಮುಖ್ಯಮಂತ್ರಿಯಾದರು ಎಂದು ಇತಿಹಾಸ ನೆನಪಿಸಿಕೊಂಡರು.
"8 ಸಲ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಬಂಗಾರಪ್ಪ, ಎಸ್ ಎಂ ಕೃಷ್ಣ, ಸಿದ್ದರಾಮಯ್ಯ ಅವರುಗಳ ಜೊತೆ ಕೆಲಸ ಮಾಡಿದ್ದೇನೆ. ಆದರೆ, ಜೆ.ಎಚ್ ಪಟೇಲ್ ಅವರಷ್ಟು ಅತ್ಯಂತ ಹೃದಯ ವೈಶಾಲ್ಯತೆಯಿದ್ದ ನಾಯಕರನ್ನು ಇಂದಿಗೂ ನೋಡಿಲ್ಲ. ಬೊಮ್ಮಾಯಿ ಅವರ ಆಡಳಿತ ಹಾಗೂ ಅವರನ್ನು ಅಧಿಕಾರದ ಕುರ್ಚಿಯಿಂದ ಇಳಿಸಿದ್ದನ್ನು ಕಣ್ಣಾರೆ ನೋಡಿದ್ದೇನೆ.
ಬಂಗಾರಪ್ಪ ಅವರ ಕಾಲದಲ್ಲಿ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿ ಬಂತು. ಈಗಲೂ ಅಂದು ಮುಂದುವರಿದಿದೆ. ಆಗ 1 ಸಾವಿರ ಕೋಟಿ ಮೀಸಲಿಡಲಾಗಿತ್ತು. ಈಗ ಅದು 20 ಸಾವಿರ ಕೋಟಿಯಾಗಿದೆ. ಬಂಗಾರಪ್ಪ ಅವರು ಇಂದು ಬದುಕಿಲ್ಲ. ಅವರು ಜಾರಿ ಮಾಡಿದ ಯೋಜನೆ ಜೀವಂತವಾಗಿದೆ.
ವೀರಪ್ಪ ಮೊಯ್ಲಿ ಅವರು ಸಿಇಟಿ ಪ್ರಾರಂಭ ಮಾಡಿದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತಂದರು. ಇಂದು ಕರ್ನಾಟಕ ಈ ದೇಶಕ್ಕೆ ಎಂಜಿನಿಯರ್, ಡಾಕ್ಟರ್ ಗಳನ್ನು ನೀಡಿದ ರಾಜ್ಯವಾಗಿದೆ’ ಎಂದು ಬಣ್ಣಿಸಿದರು.
ಇತಿಹಾಸಗಳು ಬೇಕಾದಷ್ಟು ಸಂದರ್ಭಗಳನ್ನು ಸೃಷ್ಟಿಸುತ್ತವೆ. ವೀರೇಂದ್ರ ಪಾಟೀಲರ ಆಡಳಿತ, ದೇವರಾಜ ಅರಸು ಅವರು ಹೊಸ ನಾಯಕರನ್ನು ಹುಟ್ಟು ಹಾಕಿದರು. ಯುವಕರಿಗೆ ಪ್ರೋತ್ಸಾಹ ನೀಡಿದರು. ಆ ರೀತಿಯ ಅವಕಾಶ ಸೃಷ್ಟಿ ಮಾಡಿದ ನಾಯಕರನ್ನು ನಾನು ನೋಡಿಲ್ಲ. ಗುಂಡೂರಾವ್ ಅವರ ಆಡಳಿತ ದಿಟ್ಟ ನಿರ್ಧಾರಗಳು ಮಾದರಿ. ರಾಮಕೃಷ್ಣ ಹೆಗಡೆ ಅವರದ್ದು ಪರಿಶುದ್ದ ಆಡಳಿತಗಾರರು. ಬೊಮ್ಮಾಯಿ ಅವರ ಆಡಳಿತ ಹಾಗೂ ಅವರನ್ನು ಅಧಿಕಾರದ ಕುರ್ಚಿಯಿಂದ ಇಳಿಸಿದ್ದನ್ನು ಕಣ್ಣಾರೆ ನೋಡಿದ್ದೇನೆ" ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



