President's Medals 2026: ಕರ್ನಾಟಕದ 17 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಘೋಷಣೆ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಒಟ್ಟು 17 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಬಾರಿಯ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಬೆಂಗಳೂರು: ಆಗಸ್ಟ್ 15ರಂದು ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ ಶುಭಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯವು ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಲಾಗುವ ಪ್ರತಿಷ್ಠಿತ ‘ರಾಷ್ಟ್ರಪತಿ ಪದಕ-2026’ ಪ್ರಶಸ್ತಿಯನ್ನು ಘೋಷಿಸಿದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಒಟ್ಟು 17 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಬಾರಿಯ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಪೊಲೀಸ್ ಪಡೆಯಲ್ಲಿ ಅತ್ಯಂತ ವಿಶಿಷ್ಟ ಹಾಗೂ ಸುದೀರ್ಘ ಸೇವೆ ಸಲ್ಲಿಸಿದ ಸಿಸಿಬಿಯ (CCB) ಸಹಾಯಕ ಪೊಲೀಸ್ ಕಮಿಷನರ್ (ACP) ಹೆಚ್.ಎನ್. ಧರ್ಮೇಂದ್ರ ಅವರಿಗೆ ಪ್ರತಿಷ್ಠಿತ ‘ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ’ ಗೌರವಕ್ಕೆ ಪಾತ್ರರಾಗಿದ್ದಾರೆ.
ಕರ್ನಾಟಕದ ಪೊಲೀಸ್ ಸೇವೆಯಲ್ಲಿ ಒಬ್ಬರಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ (President’s Medal for Distinguished Service) ಹಾಗೂ 17 ಮಂದಿಗೆ ಪೊಲೀಸ್ ಪದಕ ಫಾರ್ ಮೆರಿಟೋರಿಯಸ್ ಸರ್ವಿಸ್ (Medal for Meritorious Service) ಲಭಿಸಿದೆ.
ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿರುವ ಪಟ್ಟಿಯ ಪ್ರಕಾರ, ಕರ್ನಾಟಕದ ಪರವಾಗಿ ಧರ್ಮೇಂದ್ರ ಹುಚ್ಚ ನಂಜಪ್ಪ ಕಲ್ಲೇಗೌಡನಕೊಪ್ಪಲು, ಸಹಾಯಕ ಪೊಲೀಸ್ ಆಯುಕ್ತರಿಗೆ ವಿಶಿಷ್ಟ ಸೇವಾ ಪದಕ ದೊರೆತಿದೆ.
ಅದೇ ರೀತಿ ಸಾರಾ ಫಾತಿಮಾ, ಮಹದೇವ ಟಿ., ಶಣ್ಮುಘ ವರ್ಮ ಕೆ., ಬಾವುದ್ದೀನ್ ರುಕ್ಮುದ್ದೀನ್ ಗಡ್ಡೇಕರ್, ಪ್ರಮಾಣದ್ ಪಿ. ಘೋಡಕೆ ಮತ್ತು ಥಾಮಸ್ ಮ್ಯಾಥ್ಯೂ ಪಿ.ಎಂ. ಸೇರಿದಂತೆ 17 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ಲಾಘನೀಯ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಶ್ಲಾಘನೀಯ ಸೇವಾ ಪದಕ ಪುರಸ್ಕೃತರ ಪಟ್ಟಿ ಇಂತಿದೆ
ಸಾರಾ ಫಾತಿಮಾ – ಎಸ್ಪಿ (SP), ರೈಲ್ವೇಸ್, ಬೆಂಗಳೂರು
ಥಾಮಸ್ ಮ್ಯಾಥ್ಯೂ – ಕಮಾಂಡೆಂಟ್, ಕೆ.ಎಸ್.ಆರ್.ಪಿ (KSRP)
ಮಹಾದೇವ್ – ಎಸಿಪಿ (ACP), ಆಗ್ನೇಯ ಸಂಚಾರ ವಿಭಾಗ, ಬೆಂಗಳೂರು
ಪರಮಾನಂದ್ – ಡಿವೈಎಸ್ಪಿ (DySP), ಡಿ.ಎ.ಆರ್ (DAR), ರಾಯಚೂರು
ಷಣ್ಮುಗವರ್ಮಾ – ಪೊಲೀಸ್ ಇನ್ಸ್‌ಪೆಕ್ಟರ್, ಪೊಲೀಸ್ ತರಬೇತಿ ಶಾಲೆ, ಮೈಸೂರು
ಭಾವುದ್ದೀನ್ ರುಕ್ಮುದ್ದೀನ್ – ಪೊಲೀಸ್ ಇನ್ಸ್‌ಪೆಕ್ಟರ್, ಮಾಳಮಾರುತಿ ಠಾಣೆ, ಬೆಳಗಾವಿ
ಗುರುಪ್ರಸಾದ್ ಗೋಪಾಲ್ ನಾಯಕ್ – ಇನ್ಸ್‌ಪೆಕ್ಟರ್, ಸಿಐಡಿ (CID)
ನಯೀಂ – ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್ (RPI), ರಾಜಭವನ
ಶ್ರೀನಿವಾಸ – ಪಿ.ಎಸ್.ಐ (PSI), ಕೆ.ಪಿ. ಅಗ್ರಹಾರ ಠಾಣೆ, ಬೆಂಗಳೂರು
ಜ್ಞಾನದೇವ್ ನವಲ ತರಾಸೆ – ಎ.ಆರ್.ಎಸ್.ಐ (ARSI), ಕೆ.ಎಸ್.ಆರ್.ಪಿ
ಮಹದೇವಸ್ವಾಮಿ – ಹೆಡ್ ಕಾನ್ಸ್‌ಟೇಬಲ್, ವಿಧಾನಸೌಧ ಭದ್ರತೆ
ಮಾರಿಯಾ ಜೋಸೆಫ್ ದಿನೇಶ್ ಕುಮಾರ್ – ಹೆಡ್ ಕಾನ್ಸ್‌ಟೇಬಲ್, ಡಿ.ಸಿ.ಆರ್.ಇ (DCRE), ಕೆಜಿಎಫ್
ಚಂದ್ರಶೇಖರ ಚಿಕ್ಕಣ್ಣನವರ್ – ಹೆಡ್ ಕಾನ್ಸ್‌ಟೇಬಲ್, ಕೆ.ಎಸ್.ಆರ್.ಪಿ
ಅಬ್ದುಲ್ ಕಮಾಲ್ – ಹೆಡ್ ಕಾನ್ಸ್‌ಟೇಬಲ್, ತರೀಕೆರೆ ಠಾಣೆ
ನಾಗೇಶ್ ಮಚ್ಚಯ್ಯ – ಹೆಡ್ ಕಾನ್ಸ್‌ಟೇಬಲ್, ಸಿಐಡಿ (CID)
ಮನೋಹರ್ – ಪೊಲೀಸ್ ಕಾನ್ಸ್‌ಟೇಬಲ್, ಹುಣಸೂರು ಠಾಣೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



