'ಕೋಮುವಾದಿಗಳ ಪ್ರಯತ್ನದಿಂದ ಭಾರತ ಹಿಂದೂ ರಾಷ್ಟ್ರವಾದರೆ ಜಾತಿ ಹೆಸರಲ್ಲಿ ಶೋಷಣೆ; ಅಹಿಂದ ವರ್ಗದ ದೊಡ್ಡ ಶತ್ರು ಮನುವಾದಿಗಳು'; Video
ಸಂವಿಧಾನ ಉಳಿದರೆ ನಾವೆಲ್ಲ ಉಳಿಯಲು ಸಾಧ್ಯವಾಗಿದ್ದು, ಜಾತಿ ವ್ಯವಸ್ಥೆ ವಿರುದ್ಧ ಬಸವಣ್ಣ, ದಾಸರು, ಶರಣರು ಹೋರಾಡಿದರೂ ಅದು ಹೋಗುತ್ತಿಲ್ಲ ಇದಕ್ಕೆ ಕಾರಣ ಹಿಂದೂ ಧರ್ಮ, ಜಾತಿ ವ್ಯವಸ್ಥೆಗೆ ಕೊಟ್ಟಿರುವ ಒಪ್ಪಿಗೆಯ ಮುದ್ರೆ ಎಂದು ಹೇಳಿದ್ದಾರೆ.

ಬೀದರ್: ಒಂದುವೇಳೆ ಕೋಮುವಾದಿಗಳ ಪ್ರಯತ್ನದಿಂದ ಭಾರತ ಹಿಂದೂ ರಾಷ್ಟ್ರವಾದರೆ ಮತ್ತೆ ಜಾತಿಯ ಹೆಸರಿನಲ್ಲಿ ಶೋಷಣೆ ಆರಂಭವಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಬೀದರ್ ನಲ್ಲಿ ಶೋಷಿತ ಸಮುದಾಯಗಳ (ಅಹಿಂದ) ಮುಖಂಡರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅಹಿಂದ ವರ್ಗದ ದೊಡ್ಡ ಶತ್ರು ಮನುವಾದಿಗಳು ಮತ್ತು ಕೋಮುವಾದಿಗಳು. ಇವರು ಈ ದೇಶದ ಸಂವಿಧಾನವನ್ನು ವಿರೋಧಿಸುತ್ತಾರೆ.
ಭಾರತ ಹಿಂದೂ ರಾಷ್ಟ್ರದ ಆದ್ರೆ ಅದಕ್ಕಿಂತ ದೊಡ್ಡ ಅಪಾಯ ಮೊತ್ತೊಂದಿಲ್ಲಾ ಎಂದು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವ್ರೇ ಹೇಳಿದ್ದಾರೆ. ಸಂವಿಧಾನ ಉಳಿದರೆ ನಾವೆಲ್ಲ ಉಳಿಯಲು ಸಾಧ್ಯವಾಗಿದ್ದು, ಜಾತಿ ವ್ಯವಸ್ಥೆ ವಿರುದ್ಧ ಬಸವಣ್ಣ, ದಾಸರು, ಶರಣರು ಹೋರಾಡಿದರೂ ಅದು ಹೋಗುತ್ತಿಲ್ಲ ಇದಕ್ಕೆ ಕಾರಣ ಹಿಂದೂ ಧರ್ಮ, ಜಾತಿ ವ್ಯವಸ್ಥೆಗೆ ಕೊಟ್ಟಿರುವ ಒಪ್ಪಿಗೆಯ ಮುದ್ರೆ ಎಂದು ಹೇಳಿದ್ದಾರೆ.
ಶತಮಾನಗಳಿಂದ ಶೋಷಿತರು ಶೋಷಣೆಗೆ ಒಳಗಾಗುತ್ತಿದ್ದೇವೆ. ಕೆಲವರು ಧರ್ಮದ ಕಟ್ಟುಪಾಡುಗಳನ್ನು ಹೇಳುತ್ತ ನಮ್ಮನ್ನು ಶೋಷಿಸುತ್ತಿದ್ದಾರೆ. ಆ ಶೋಷಣೆಯಿಂದ ನಾವು ಹೊರಬರುವ ಸಮಯ ಬಂದಿದೆ. ಬೀದರ್‌ನ ಈ ನೆಲ ಶೋಷಣೆ ವಿರುದ್ಧ ಹೋರಾಡಿದ ಮಹಾನ್ ವ್ಯಕ್ತಿ ಬಸವಣ್ಣನವರು ನಡೆದಾಡಿದ ನೆಲ. ಬಸವಣ್ಣನವರು ಇದೇ ನೆಲದಿಂದ ಜಗತ್ತಿನಲ್ಲೇ ಅತಿದೊಡ್ಡ ಕ್ರಾಂತಿ ಮಾಡಿದರು. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ಮತ್ತೆ ನಮ್ಮನ್ನು ಶೋಷಣೆಗೆ ದೂಡುತ್ತಿದ್ದಾರೆ ಎಂದು ಹೇಳಿದರು.
ಬಾಬಾಸಾಹೇಬರು ಸಂವಿಧಾನದ ಮೂಲಕ ಎಲ್ಲರಿಗೂ ಸಮಾನತೆಯನ್ನು ಕೊಟ್ಟರು. ದೇವರಾಜ ಅರಸು ಅವರು ಹಿಂದುಳಿದ ವರ್ಗಗಳಿಗಾಗಿ ತಮ್ಮ ಇಡೀ ಜೀವನವನ್ನು ಮೀಸಲಿಟ್ಟರು. ವಿ.ಪಿ. ಸಿಂಗ್ ಅವರು ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸಲು ತಮ್ಮ ಸರ್ಕಾರವನ್ನೇ ತ್ಯಾಗ ಮಾಡಿದರು.
ಸಿದ್ದರಾಮಯ್ಯನವರು ಶೋಷಿತರಿಗಾಗಿ ಅಹಿಂದ ಸಂಘಟನೆ ಕಟ್ಟಿದರು ಎಂದು ನೆನಪಿಸಿದರು. ಅಹಿಂದ ನಾಯಕರು ಹೋರಾಟ ಮಾಡಿದ್ರೆ ಮಾತ್ರ ನಾವು ನಮ್ಮ ಪ್ರಾತಿನಿಧ್ಯಗಳನ್ನ ಪಡೆಯೋಕೆ ಸಾಧ್ಯ ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



