ಲೆಕ್ಕ ಕೊಡ್ತೀವಿ.. ಕೂಡಲೇ ಮಠ ಖಾಲಿ ಮಾಡಿ: ವಚನಾನಂದ ಶ್ರೀಗಳಿಗೆ ಟ್ರಸ್ಟ್ ತಾಕೀತು
ಲೆಕ್ಕ ಪಡೆದು ಮಠ ಖಾಲಿ ಮಾಡುವಂತೆ ಸ್ವಾಮೀಜಿಗೆ ಟ್ರಸ್ಟಿನವರು ತಾಕೀತು ಮಾಡಿದ್ದಾರೆ. ಆ ಮೂಲಕ ಹರಿಹರದ ಪಂಚಮಸಾಲಿ ಮಠದ ಆಡಳಿತ ಮಂಡಳಿ (ಟ್ರಸ್ಟ್) ಹಾಗೂ ವಚನಾನಂದ ಸ್ವಾಮೀಜಿ ನಡುವಿನ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ.

ದಾವಣಗೆರೆ: ಪಂಚಮಸಾಲಿ ಟ್ರಸ್ಟ್ ಮತ್ತು ವಚನಾನಂದ ಸ್ವಾಮೀಜಿ ನಡುವಿನ ಸಂಘರ್ಷ ತೀವ್ರಗೊಂಡಿದ್ದು ಮಠ ವ್ಯವಹಾರಗಳ ಲೆಕ್ಕ ಕೊಡ್ತೀವಿ ಕೂಡಲೇ ಮಠ ಖಾಲಿ ಮಾಡಿ ಎಂದು ಟ್ರಸ್ಟಿನವರು ಶ್ರೀಗಳಿಗೆ ತಾಕೀತು ಮಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಂಚಮಸಾಲಿ ಟ್ರಸ್ಟಿನವರು, ಏಪ್ರಿಲ್ 27ರಂದು ಲೆಕ್ಕಾ ಕೊಡಲು ಸಿದ್ಧರಿದ್ದೇವೆ. ಲೆಕ್ಕ ಪಡೆದು ಮಠ ಖಾಲಿ ಮಾಡುವಂತೆ ಸ್ವಾಮೀಜಿಗೆ ಟ್ರಸ್ಟಿನವರು ತಾಕೀತು ಮಾಡಿದ್ದಾರೆ. ಆ ಮೂಲಕ ಹರಿಹರದ ಪಂಚಮಸಾಲಿ ಮಠದ ಆಡಳಿತ ಮಂಡಳಿ (ಟ್ರಸ್ಟ್) ಹಾಗೂ ವಚನಾನಂದ ಸ್ವಾಮೀಜಿ ನಡುವಿನ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ.
ಧರ್ಮದರ್ಶಿ ಸಮಿತಿಯ ಮುಖಂಡರು ಸ್ವಾಮೀಜಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಲೆಕ್ಕ ಕೊಡುತ್ತೇವೆ. ಲೆಕ್ಕ ಪಡೆದು ಮಠ ಖಾಲಿ ಮಾಡುವಂತೆ ಸ್ವಾಮೀಜಿಗೆ ಟ್ರಸ್ಟಿ ಹೆಚ್.ಎಸ್.ನಾಗರಾಜ್ ತಾಕೀತು ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿಯ ಪಂಚಮಸಾಲಿ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿದ ಪಂಚಮಸಾಲಿ ಟ್ರಸ್ಟಿ ಹೆಚ್.ಎಸ್.ನಾಗರಾಜ್, ನಮಗೆ ಲೆಕ್ಕ ಕೊಡಿ ಎಂದು ಕೇಳಿದ್ದಾರೆ, ನಾಳೆ ಲೆಕ್ಕ ಕೊಡುತ್ತೇವೆ. ಈಗಾಗಲೇ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಲೆಕ್ಕ ಪಡೆದು ಮಠ ಖಾಲಿ ಮಾಡುವಂತೆ ವಚನಾನಂದ ಸ್ವಾಮೀಜಿಗೆ ತಾಕೀತು ಮಾಡಿದರು.
ಕೂಡಲಸಂಗಮ ಪೀಠ ಮುಗಿಸಿದ್ದಾಯ್ತು ಈಗ ಪಂಚಮಸಾಲಿ ಪೀಠ
ಈಗಾಗಲೇ ಕೂಡಲಸಂಗಮ ಪಂಚಮಸಾಲಿ ಪೀಠ ಮುಗಿಸಲಾಗಿದೆ. ಈಗ ಹರಿಹರ ಪೀಠಕ್ಕೆ ಬಂದಿದ್ದಾರೆ, ನಾಳೆ ಲೆಕ್ಕ ಕೊಡುತ್ತೇವೆ. ಲೆಕ್ಕ ಕೊಡುವುದಕ್ಕಾಗಿಯೇ ವೇದಿಕೆ ಸಿದ್ಧ ಮಾಡಿದ್ದೇವೆ. ಎಲ್ಲರ ಸಮ್ಮುಖದಲ್ಲಿಯೇ ಲೆಕ್ಕ ಕೊಡುತ್ತೇವೆ ಎಂದು ಹೇಳಿದ್ದಾರೆ.
ಪಂಚಮಸಾಲಿ ಮಠಕ್ಕೆ ಇನ್ನೊಬ್ಬರ ಪ್ರವೇಶ: 25 ಕೋಟಿ ರೂ ಅವ್ಯವಹಾರ
ಇನ್ನು ಇಷ್ಟು ದಿನ ಸುಮ್ಮನಿದ್ದ ಪಂಚಮಸಾಲಿ ರಾಜ್ಯ ಸಂಘದ ಅಧ್ಯಕ್ಷ ಸೋಮನಗೌಡ ಮಾಲಿ ಪಾಟೀಲ್ ಇದೀಗ ರಂಗ ಪ್ರವೇಶ ಮಾಡಿದ್ದು, ಮಠದ ವ್ಯವಹಾರದಲ್ಲಿ ಅವ್ಯವಹಾರ ನಡೆದರೆ, ಸ್ವಾಮೀಜಿ ವಿಚಾರಕ್ಕೆ ಬಂದಾಗ ಪಂಚಮಸಾಲಿ ರಾಜ್ಯ ಸಂಘ ಪ್ರವೇಶ ಮಾಡಬಹುದು ಎಂದು ನಿಯಮವಿದೆ. ಅದೇ ಅಧಿಕಾರ ಬಳಸಿಕೊಂಡು ಮೂವರನ್ನು ಉಚ್ಚಾಟನೆ ಮಾಡಿದ್ದೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




