ರಾಜ್ಯ

ನಾಯಕತ್ವ ಚರ್ಚೆ ಮುಗಿದ ಅಧ್ಯಾಯ ಅಲ್ಲ; ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ; ಜಮೀರ್ ವಿರುದ್ಧ ಕ್ರಮಕ್ಕೆ MLA ಹೆಚ್.ಸಿ ಬಾಲಕೃಷ್ಣ ಒತ್ತಾಯ

ನಮ್ಮಂತಹವರ ಬಳಿ ಇದನ್ನ ಕೇಳೋದು ಅಲ್ಲ. ಸೂಕ್ತ ವ್ಯಕ್ತಿಗಳ ಬಳಿ ಇದನ್ನ ಕೇಳಬೇಕು. ನಾಯಕತ್ವ ಚರ್ಚೆ ಮುಗಿದ ಅಧ್ಯಾಯ ಅಲ್ಲ. ಅದಕ್ಕೆ ಅಂತಿಮ ರೂಪ ಹೈಕಮಾಂಡ್ ಕೊಡಬೇಕು ಎಂದು ಹೆಚ್.ಸಿ. ಬಾಲಕೃಷ್ಣ ಹೇಳಿದರು.

ನಾಯಕತ್ವ ಚರ್ಚೆ ಮುಗಿದ ಅಧ್ಯಾಯ ಅಲ್ಲ; ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ; ಜಮೀರ್ ವಿರುದ್ಧ ಕ್ರಮಕ್ಕೆ MLA ಹೆಚ್.ಸಿ ಬಾಲಕೃಷ್ಣ ಒತ್ತಾಯ
MLA HC Balakrishna
Published On :

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮುಗಿದ ಅಧ್ಯಾಯ ಅಲ್ಲ .ಹೈಕಮಾಂಡ್ ಗೊಂದಲ ಪರಿಹಾರ ಮಾಡದೇ ಹೋದ್ರೆ ಪಕ್ಷಕ್ಕೆ ತೊಂದರೆಯಾಗಲಿದೆ ಎಂದು ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಗುರುವಾರ ಹೇಳಿದ್ದಾರೆ.

ಬೈ ಎಲೆಕ್ಷನ್ ಫಲಿತಾಂಶ ಬಂದ ನಂತರ ನಾಯಕತ್ವ ಚರ್ಚೆ ಆಗುತ್ತಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮಂತಹವರ ಬಳಿ ಇದನ್ನ ಕೇಳೋದು ಅಲ್ಲ. ಸೂಕ್ತ ವ್ಯಕ್ತಿಗಳ ಬಳಿ ಇದನ್ನ ಕೇಳಬೇಕು. ನಾಯಕತ್ವ ಚರ್ಚೆ ಮುಗಿದ ಅಧ್ಯಾಯ ಅಲ್ಲ. ಅದಕ್ಕೆ ಅಂತಿಮ ರೂಪ ಹೈಕಮಾಂಡ್ ಕೊಡಬೇಕು. ನಾವು ಯಾರು ಕೊಡೋಕೆ ಆಗಲ್ಲ ಎಂದಿದ್ದಾರೆ.

ದಾವಣಗೆರೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಜಮೀರ್ ವಿರುದ್ಧ ಕ್ರಮಕ್ಕೆ ಮುಸ್ಲಿಂ ನಾಯಕರ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಯಾಕೆ ಕ್ರಮ ಆಗಬೇಕು? ಏನು? ಅಂತ ನನಗೇನು ಸಂಪೂರ್ಣ ಗೊತ್ತಿಲ್ಲ. ಪಕ್ಷಕ್ಕಿಂತ ಯಾರು ದೊಡ್ಡವರು ಅಲ್ಲ. ಪಕ್ಷದ ವಿರುದ್ಧ ಯಾರೇ ನಡೆದರೂ ತಪ್ಪು. ಸಿದ್ದರಾಮಯ್ಯ ಆಗಲಿ, ಡಿ.ಕೆ ಶಿವಕುಮಾರ್ ಆಗಲಿ, ಜಮೀರ್ ಆಗಲಿ, ಬಾಲಕೃಷ್ಣ ಆಗಲಿ ಯಾರೇ ಪಕ್ಷದ ವಿರುದ್ಧ, ಪಕ್ಷದ ಬೆಳವಣಿಗೆಗೆ ಅಡಚಣೆ ಮಾಡಿದ್ರೆ ಎಲ್ಲರ ಮೇಲೆ ಕ್ರಮ ಆಗಬೇಕು ಎಂದರು.

ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಬಾಲಕೃಷ್ಣ, ನಾವು ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು ಇರೋ ಕಡೆ ಪ್ರಚಾರ ಮಾಡಿರಲಿಲ್ಲ. ಇಲ್ಲಿ ಅಲ್ಪಸಂಖ್ಯಾತರಿಂದ ಗೊಂದಲ ಆಗಿದೆ. ಆದರೆ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿಲ್ಲ, ಸಮಸ್ಯೆ ಬಂದಿದೆ ಅದಕ್ಕೆ ಪರಿಹಾರ ಹುಡುಕಬೇಕು ಅಷ್ಟೇ ಎಂದು ಹೇಳಿದ್ದಾರೆ.

ಇನ್ನೂ ದೊರೆ ಮೇಲೆ ಕ್ರಮ ಇಲ್ಲ ಎಂಬ ಮಾಜಿ ಸಚಿವ ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ಡಿಕೆ ಶಿವಕುಮಾರ್ ಸದ್ಗುರು ಜೊತೆ ವೇದಿಕೆ ಹಂಚಿಕೊಂಡಿದ್ದು ಧಾರ್ಮಿಕ ಕಾರ್ಯಕ್ರಮ. ಧಾರ್ಮಿಕ ಕಾರ್ಯಕ್ರಮಕ್ಕೆ ಕರೆದಿದ್ದರು, ಅದಕ್ಕೆ ಡಿಕೆಶಿ ಹೋಗಿದ್ರು. ಅಲ್ಲಿಗೆ ಹೋಗಿ ರಾಹುಲ್ ಗಾಂಧಿ ಯಾರು ಅಂತ ಡಿಕೆಶಿ ಸದ್ಗುರುಗೆ ಪಾಠ ಹೇಳಿ ಬಂದಿದ್ದಾರೆ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ಅವರನ್ನು ಸಮರ್ಥಿಸಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.