ರಾಜ್ಯ

ಬಾಲಕಿ ಶ್ರೀನಂದಾ ಸಾವಿಗೆ ಕಾರಣವೇನು..? ಮರಣೋತ್ತರ ವರದಿಯಲ್ಲಿ ಬಯಲಾಯ್ತು ಸತ್ಯ..!

40 ಜನರ ಗುಂಪು ಕಳೆದ ಶನಿವಾರ ಪ್ರವಾಸಕ್ಕಾಗಿ ತಮ್ಮ ಊರಿನಿಂದ ಕರ್ನಾಟಕಕ್ಕೆ ಆಗಮಿಸಿತ್ತು. ಮಂಗಳವಾರ (ಏ.07) ಸಂಜೆ 5:35ರ ಸುಮಾರಿಗೆ ಶ್ರೀನಂದಾ ದಿಢೀರ್​ ಕಣ್ಮರೆಯಾಗಿದ್ದರು.

ಬಾಲಕಿ ಶ್ರೀನಂದಾ ಸಾವಿಗೆ ಕಾರಣವೇನು..? ಮರಣೋತ್ತರ ವರದಿಯಲ್ಲಿ ಬಯಲಾಯ್ತು ಸತ್ಯ..!
ಶ್ರೀನಂದಾ
Published On :

ಚಿಕ್ಕಮಗಳೂರು: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಪ್ರವಾಸಕ್ಕೆ ಬಂದು ನಿಗೂಢವಾಗಿ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ (15) ಶವವಾಗಿ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಶ್ರೀನಂದಾ ಸಾವಿನಲ್ಲಿ ಯಾವುದೇ ಅಸಹಜತೆ ಇಲ್ಲ ಎಂದು ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿದುಬಂದಿದೆ.

ವರದಿಯ ಪ್ರಕಾರ, ತಲೆಯ ಬಲಭಾಗಕ್ಕೆ ಗಂಭೀರವಾದ ಗಾಯವಾಗಿರುವುದೇ ಸಾವಿಗೆ ಕಾರಣ ಎಂದು ಉಲ್ಲೇಖಿಸಲಾಗಿದೆ.

ಶ್ರೀನಂದಾ ಅವರ ದೇಹದಾದ್ಯಂತ ಗಾಯಗಳು ಪತ್ತೆಯಾಗಿದ್ದು, ಹಲವು ಸ್ಥಳಗಳಲ್ಲಿ ಮೂಳೆಗಳು ಮುರಿದಿದ್ದು, ಇದೆಲ್ಲವೂ ಮೇಲಿಂದ ಬಿದ್ದಿರುವುದರಿಂದ ಸಂಭವಿಸಿವೆ ಎಂದು ಮರಣೋತ್ತರ ವರದಿ ಹೇಳಿದೆ.

ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ಎರಡು ಶಸ್ತ್ರಚಿಕಿತ್ಸಕರ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ದಾಖಲಿಸಲಾಗಿದೆ. ಈ ಪರೀಕ್ಷೆಯನ್ನು ವೈದ್ಯರಾದ ಲೋಹಿತ್ ಮತ್ತು ಜಯಲಕ್ಷ್ಮಿ ನಡೆಸಿದ್ದಾರೆ.

ಮೃತ ಬಾಲಕಿ ಶ್ರೀನಂದಾ, ಪಾಲಕ್ಕಾಡ್‌ನ ಕದಂಬಜಿಪುರಂ ಮೂಲದ ರಮೇಶ್ ಗೋಪಾಲನ್ ಮತ್ತು ರೋಹಿಣಿ ದಂಪತಿಯ ಪುತ್ರಿ.

40 ಜನರ ಗುಂಪು ಕಳೆದ ಶನಿವಾರ ಪ್ರವಾಸಕ್ಕಾಗಿ ತಮ್ಮ ಊರಿನಿಂದ ಕರ್ನಾಟಕಕ್ಕೆ ಆಗಮಿಸಿತ್ತು. ಮಂಗಳವಾರ (ಏ.07) ಸಂಜೆ 5:35ರ ಸುಮಾರಿಗೆ ಶ್ರೀನಂದಾ ದಿಢೀರ್​ ಕಣ್ಮರೆಯಾಗಿದ್ದರು. ಸಂಜೆ 5.20ಕ್ಕೆ ಕುಟುಂಬದೊಂದಿಗೆ ತೆಗೆದ ಫೋಟೋದಲ್ಲಿದ್ದ ಬಾಲಕಿ, 5.35ಕ್ಕೆ ನಾಪತ್ತೆ ಆದಳು. ಇದು ಹೆತ್ತವರಲ್ಲಿ ಭಾರೀ ಆತಂಕ ಹಾಗೂ ಅನುಮಾನ ಮೂಡಿಸಿತು.

ತೀವ್ರ ಹುಡುಕಾಟದ ಮೂರನೇ ದಿನದಂದು ಬಾಬಾ ಬುಧನ್‌ಗಿರಿ ಬಳಿ 2000 ಅಡಿ ಆಳದಲ್ಲಿ ಶ್ರೀನಂದಾ ಶವ ಪತ್ತೆಯಾಗಿದ್ದು, ಆಕೆಯ ಕುಟುಂಬದಲ್ಲಿ ಆಕ್ರದಂನ ಮುಗಿಲು ಮುಟ್ಟಿದೆ.

ಈ ನಡುವೆ ಪೊಲೀಸರು ಇದನ್ನು ಪ್ರಪಾತದಿಂದ ಬಿದ್ದಿರುವುದರಿಂದ ಸಂಭವಿಸಿರುವ ಸಾವು ಎಂದು ಪರಿಗಣಿಸುತ್ತಿದ್ದರೂ, ಕುಟುಂಬವು ಅನುಮಾನ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಎಲ್ಲಾ ಆಯಾಮಗಳಿಂದಲೂ ತನಿಖೆ ಮುಂದುವರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನಿಖೆಯ ವೇಳೆ, ಕಾಣೆಯಾಗುವ ಮೊದಲು ಶ್ರೀನಂದಾ ಸುಮಾರು 17 ನಿಮಿಷಗಳ ಕಾಲ ಫೋನ್‌ನಲ್ಲಿ ಮಾತನಾಡಿದ್ದಾಳೆಂದು ತಿಳಿದುಬಂದಿದೆ. ಅದರಲ್ಲಿ 15 ನಿಮಿಷಗಳ ಕಾಲ ಸ್ನೇಹಿತೆಯೊಬ್ಬರೊಂದಿಗೆ ಮಾತುಕತೆ ನಡೆದಿದ್ದು, ಈ ವೇಳೆ ನಡೆದಿರುವ ಚರ್ಚೆ ಅಥವಾ ಮನಸ್ತಾಪವೇ ಸಾವಿಗೆ ಕಾರಣವಾಗಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.