ರಾಜ್ಯ

RSS ನವರು ಬ್ರಿಟಿಷರ ಮಾತು ಕೇಳ್ತಿದ್ರು; ಈಗ BJP ಅಮೆರಿಕಾದ ಗುಲಾಮರಾಗಿದ್ದಾರೆ: ಬಿ.ಕೆ ಹರಿಪ್ರಸಾದ್

ಯುಪಿಎ ಸರ್ಕಾರ ಇದ್ದಾಗ ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ ಬೆಂಡೆಕಾಯಿ, ತೊಂಡೆಕಾಯಿ ಹಾಕಿಕೊಂಡು ಮಹಾತ್ಮ ಗಾಂಧಿ ಅವರ ಪ್ರತಿಮೆ ಎದುರು ಪ್ರತಿಭಟನೆ ಮಾಡುತ್ತಿದ್ದರು.

RSS ನವರು ಬ್ರಿಟಿಷರ ಮಾತು ಕೇಳ್ತಿದ್ರು; ಈಗ BJP ಅಮೆರಿಕಾದ ಗುಲಾಮರಾಗಿದ್ದಾರೆ: ಬಿ.ಕೆ ಹರಿಪ್ರಸಾದ್
ಬಿ.ಕೆ ಹರಿಪ್ರಸಾದ್
Published On :

ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದಿಂದಾಗಿ ಭಾರತ ಸೇರಿದಂತೆ ಇಡೀ ಜಗತ್ತೇ ಸಮಸ್ಯೆಯಲ್ಲಿದೆ. ಬಿಜೆಪಿಯವರು ಅಮೆರಿಕಾದ ಗುಲಾಮರಂತೆ ವರ್ತಿಸುತ್ತಿರುವುದು ಹಾಸ್ಯಾಸ್ಪದವೆಂದು ಕಾಂಗ್ರೆಸ್ಸಿನ ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರ ಇದ್ದಾಗ ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ ಬೆಂಡೆಕಾಯಿ, ತೊಂಡೆಕಾಯಿ ಹಾಕಿಕೊಂಡು ಮಹಾತ್ಮ ಗಾಂಧಿ ಅವರ ಪ್ರತಿಮೆ ಎದುರು ಪ್ರತಿಭಟನೆ ಮಾಡುತ್ತಿದ್ದರು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಚರಂಡಿಯಿಂದ ಗ್ಯಾಸ್ ಕಂಡು ಹಿಡಿದಿದ್ದಾರೆ.

ಆ ಗ್ಯಾಸ್ ಎಲ್ಲಿ ಹೋಗಿದೆ ಅಂತಾ ನೋಡಬೇಕಿದೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಗ್ಯಾಸ್ ಸಾವಿರ ರೂ ದಾಟಿದೆ, ಪೆಟ್ರೋಲ್ 100 ರುಪಾಯಿ ದಾಟಿದೆ. ಪೆಟ್ರೋಲ್- ಡಿಸೇಲ್ ಮೇಲಿನ ಸುಂಕ ಕಡಿಮೆ ಮಾಡಿರುವುದರಿಂದ ಜನ ಸಾಮಾನ್ಯರಿಗೆ ಯಾವುದೇ ಅನುಕೂಲ ಆಗುತ್ತಿಲ್ಲ, ಕಂಪನಿಗಳಿಗೆ ಅನುಕೂಲ ಆಗುತ್ತಿದೆ, ವಿಶೇಷವಾಗಿ ಅದಾನಿ ಕಂಪನಿಗಳಿಗೆ ಹೆಚ್ಚಿನ ಅನುಕೂಲ ಆಗುತ್ತಿದೆ ಎಂದು ದೂರಿದ್ದಾರೆ.

ಪಂಡಿತ್ ಜವಹರ್ ಲಾಲ್ ನೆಹರು 1957 ರಲ್ಲಿ ವಿದೇಶಾಂಗ ನೀತಿ ರಚಿಸಿದಾಗ, ನಾವು ಯಾರ ಪರವೂ ನಿಲ್ಲುತ್ತಿರಲಿಲ್ಲ, ಯಾವ ರಾಷ್ಟ್ರ ನಮಗೆ ಅನುಕೂಲ ಮಾಡುತ್ತಿತ್ತೋ ಅವರ ಜೊತೆ ನಾವು ನಿಲ್ಲುತ್ತಿದ್ದೇವು ಎಂದಿದ್ದಾರೆ. ಮೊದಲು ನಾವು ರಷ್ಟಾದಿಂದ ನಾವು ಪೆಟ್ರೋಲಿಯಂ ಉತ್ಪನ್ನಗಳನ್ನು ತರಿಸ್ತಾ ಇದ್ವಿ, ಅಮೆರಿಕಾದವರು ಹೇಳಿದ್ರು ಅಂತಾ ತೈಲ ಖರೀದಿ ನಿಲ್ಲಿಸಿದ್ರು, ಈಗ ಮತ್ತೆ ಅಮೆರಿಕಾ ಅನುಮತಿ ನೀಡಿದ ಮೇಲೆ ರಷ್ಯಾದಿಂದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಮೊದಲು ಆರ್ ಎಸ್ ಎಸ್ ನವರು ಬ್ರಿಟಿಷರ ಮಾತು ಕೇಳುತ್ತಿದ್ದರು, ಈಗ ಬಿಜೆಪಿಯವರು ಅಮೆರಿಕಾದ ಗುಲಾಮರಂತಾಗಿದ್ದಾರೆ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.