ಹುಬ್ಬಳ್ಳಿ Love Jihad ಕೇಸ್‌ಗೆ ಟ್ವಿಸ್ಟ್: Gym ಟ್ರೈನರ್ Sameer Mulla ಮೊಬೈಲ್‌ನಲ್ಲಿ ಯುವತಿಯರ ಫೋಟೋಗಳು ಪತ್ತೆ!
ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. Gym ಟ್ರೈನರ್ Sameer Mulla ಮೊಬೈಲ್‌ನಲ್ಲಿ ಯುವತಿಯರ ಫೋಟೋಗಳು ಪತ್ತೆಯಾಗಿದ್ದು ಆತನ ಕಾಮಕಾಂಡ ಬಯಲಿಗೆ ಬಂದಿದೆ. ಪೊಲೀಸರು ಆತನ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ...

ಹುಬ್ಬಳ್ಳಿ: ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. Gym ಟ್ರೈನರ್ Sameer Mulla ಮೊಬೈಲ್‌ನಲ್ಲಿ ಯುವತಿಯರ ಫೋಟೋಗಳು ಪತ್ತೆಯಾಗಿದ್ದು ಆತನ ಕಾಮಕಾಂಡ ಬಯಲಿಗೆ ಬಂದಿದೆ. ಪೊಲೀಸರು ಆತನ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಸಮೀರ್ ಬೇರೆ ಬೇರೆ ಯುವತಿಯ ಜತೆ ಇದ್ದ ಫೋಟೋಗಳು ಪತ್ತೆಯಾಗಿವೆ. ಅಲ್ಲದೇ ಸ್ಕಾನಿಂಗ್ ವರದಿ ಹಾಗೂ ಗರ್ಭನಿರೋಧಕ ಮಾತ್ರೆ ಫೋಟೋ ಸಹ ಸಿಕ್ಕಿದೆ. ಇನ್ನು ಸಮೀರ್ ತನ್ನ ಅರೆಬೆತ್ತಲೆ ಫೋಟೋಗಳನ್ನ ಯುವತಿಯರಿಗೆ ಕಳುಹಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಹುಬ್ಬಳ್ಳಿಯಲ್ಲಿ ಜಿಮ್ ತರಬೇತುದಾರನ ಮೇಲಿನ ಹಲ್ಲೆ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ದೊರೆತಿದ್ದು, ಈ ಪ್ರಕರಣದ ಸಂತ್ರಸ್ತ ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡುವ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಳು. ಅಜ್ಞಾತ ಸ್ಥಳದಿಂದ ಸಂತ್ರಸ್ತ ಯುವತಿ ವಿಡಿಯೋವೊಂದನ್ನ ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಸಮೀರ್ ಮುಲ್ಲಾ ಮತ್ತು ಬರಿಸುವ ಪಾನೀಯ ನೀಡಿ ತನ್ನ ಮೇಲೆ ಅತ್ಯಾಚಾರವೆಸಗಿದ ಎಂದು ಆರೋಪಿಸಿದ್ದಾರೆ. ಜಿಮ್ ಗೆ ಬರುವ ಯುವತಿಯ ತಲೆ ಕಡೆಸಿ ಅವರ ಜೊತೆ ಖಾಸಗಿ ಕ್ಷಣಗಳನ್ನು ಕಳೆದು, ಅದನ್ನು ವಿಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಸಂತ್ರಸ್ತೆ ದೂರಿದ್ದಾರೆ.
ಲವ್ ಜಿಹಾದ್ ಪ್ರಕರಣ ತೀವ್ರಗೊಳ್ಳುತ್ತಿದ್ದಂತೆ 2 ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಒಂದೆಡೆ ಯುವಕನನ್ನ ಕಿಡ್ನ್ಯಾಪ್ ಮಾಡಲಾಗಿದೆ ಎಂದು ಯುವಕನ ಕುಟುಂಬಸ್ಥರು ಯುವತಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಮತ್ತೊಂದು ಗುಂಪು ಹುಬ್ಬಳ್ಳಿ ನಗರದ ವಿಕಾಸ ನಗರದಲ್ಲಿರೋ ಯುವತಿ ಮನೆ ಬಳಿ ಗಲಾಟೆ ಮಾಡಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಎರಡು ಕಡೆಯವರು ಕಿಮ್ಸ್‌ಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



