ಶಿವಮೊಗ್ಗ: ಮೃಗಾಲಯದಲ್ಲಿ ನೀರಾನೆ ದಾಳಿಗೆ ವೈದ್ಯೆ ಬಲಿ; ನ್ಯಾಯಕ್ಕಾಗಿ ಪೋಷಕರ ಒತ್ತಾಯ
ಡಾ.ಸಮೀಕ್ಷಾ ರೆಡ್ಡಿ ಅವರ ಸಾವಿನ ಕುರಿತು ತನಿಖೆ ನಡೆಸುತ್ತಿರುವ ತುಂಗಾ ನಗರ ಪೊಲೀಸ್ ಠಾಣೆಗೆ ಬುಧವಾರ ವಿಚಾರಣೆಗೆ ಬನ್ನೇರುಘಟ್ಟದಿಂದ ಬಂದು ಹಾಜರಾಗಿದ್ದರು. ಈ ವೇಳೆ ತಮ್ಮ ಹೇಳಿಕೆಗಳನ್ನು ನೀಡಿ ವಾಪಸ್ ಆಗಿದ್ದಾರೆ.

ಶಿವಮೊಗ್ಗ: ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಮಗಳ ಸಾವಿನಲ್ಲಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರ ನಿರ್ಲಕ್ಷ್ಯ ಕಂಡು ಬಂದಿದೆ ಎಂದು ಶಿವಮೊಗ್ಗ ಹುಲಿ ಮತ್ತು ಸಿಂಹಧಾಮದಲ್ಲಿ ನೀರಾನೆ ದಾಳಿಯಿಂದ ಸಾವನ್ನಪ್ಪಿದ ಪಶು ವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಅವರ ತಾಯಿ ಶೈಲಜಾ ರೆಡ್ಡಿ ಆರೋಪಿಸಿದ್ದಾರೆ.
ಡಾ.ಸಮೀಕ್ಷಾ ರೆಡ್ಡಿ ಅವರ ಸಾವಿನ ಕುರಿತು ತನಿಖೆ ನಡೆಸುತ್ತಿರುವ ತುಂಗಾ ನಗರ ಪೊಲೀಸ್ ಠಾಣೆಗೆ ಬುಧವಾರ ವಿಚಾರಣೆಗೆ ಬನ್ನೇರುಘಟ್ಟದಿಂದ ಬಂದು ಹಾಜರಾಗಿದ್ದರು. ಈ ವೇಳೆ ತಮ್ಮ ಹೇಳಿಕೆಗಳನ್ನು ನೀಡಿ ವಾಪಸ್ ಆಗಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಗಳ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದರು. ಅಂದು ನಮಗೆ ಮಾತಾಡುವ ಶಕ್ತಿ ಇರಲಿಲ್ಲ. ಇಂದು ಪ್ರಕರಣ ಸಂಬಂಧ ಸ್ಟೇಟ್ಮೆಂಟ್ ತೆಗೆದುಕೊಳ್ಳಲು ಕರೆದಿದ್ದಾರೆ. ತನಿಖೆ ನಡೆಯುತ್ತಿರುವುದರಿಂದ ನಾನು ಏನನ್ನೂ ಹೇಳಲ್ಲ ಎಂದರು.
ನಮ್ಮ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಅವರು ಹೇಳಿದರು. ಯಾವುದೇ ಭದ್ರತೆಯಿಲ್ಲದೆ ತಡರಾತ್ರಿ ಆಕೆಯನ್ನು ಅಲ್ಲಿಗೆ ಏಕೆ ಕಳುಹಿಸಲಾಗಿದೆ ಎಂದು ತಿಳಿಯಬೇಕು. "ನಮ್ಮ ಮಗಳನ್ನು ಮರಳಿ ಕರೆತರಲು ಸಾಧ್ಯವಿಲ್ಲ. ಆದರೆ ಅಂತಹ ಅನ್ಯಾಯವನ್ನು ಇತರ ಪಶುವೈದ್ಯರಿಗೆ ಮಾಡಬಾರದು. ಭವಿಷ್ಯದಲ್ಲಿ ಪಶುವೈದ್ಯರು ಧೈರ್ಯದಿಂದ ಕೆಲಸ ಮಾಡಲು ಅವಕಾಶ ನೀಡಬೇಕು." ನಿಯಮಗಳನ್ನು ಬದಲಾಯಿಸಿ. ಮೃಗಾಲಯಗಳಲ್ಲಿ ಎಸ್ಒಪಿ ಸರಿಯಾಗಿ ಪಾಲನೆ ಆಗಬೇಕು' ಎಂದು ಅವರು ಹೇಳಿದರು.
'ಅಲ್ಲಿನ ಲೋಪದೋಷಗಳ ಬಗ್ಗೆ ಹೇಳುತ್ತಿದ್ದಳು. ಆದರೆ ತನಿಖೆ ನಡೆಯುತ್ತಿರುವುದರಿಂದ ಏನೂ ಹೇಳುವುದಕ್ಕೆ ಆಗಲ್ಲ. ಆದರೆ, ಅಲ್ಲಿನ ಲೋಪದೋಷಗಳ ಬಗ್ಗೆ ಹೇಳುತ್ತಿದ್ದಳು. ಓರ್ವ ಹೆಣ್ಣು ಮಗಳನ್ನು ಅಲ್ಲಿ ಕಳುಹಿಸುವ ಅವಶ್ಯತೆ ಇತ್ತೇ? ಸಾಯುವ ಹಿಂದಿನ ಮೂರು ದಿನಗಳಿಂದ ಅವಳು ಅಲ್ಲಿಗೆ ಹೋಗಿದ್ದಳು. ಅವಳ ಸಾವನ್ನು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಡೆಯಬಹುದಾಗಿತ್ತು. ಅವಳನ್ನು ಮೃಗಾಲಯದ ಜೀಪ್ನಲ್ಲಿಯೇ ಕಳುಹಿಸಿದ್ದರು.
ಸಮೀಕ್ಷಾ ಅವರ ತಂದೆ ಧ್ರುವ ಕುಮಾರ್ ಮಾತನಾಡಿ "ನನ್ನ ಮಗಳು ಯುಕೆಜಿ ಓದುತ್ತಿದ್ದಾಗಿನಿಂದ ಪಶುವೈದ್ಯೆಯಾಗುತ್ತೇನೆ ಎಂದು ಹೇಳುತ್ತಿದ್ದರು. ಅವಳು ಬಾಲ್ಯದಿಂದಲೂ ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದಳು. ಉನ್ನತ ಶಿಕ್ಷಣ ಮತ್ತು ಕೆಲಸಕ್ಕಾಗಿ ವಿದೇಶಕ್ಕೆ ಹೋಗಲು ಅವಕಾಶ ಸಿಕ್ಕಿದ್ದರೂ, ಅವಳು ಹೋಗಲಿಲ್ಲ. ಅವಳು ಯಾವಾಗಲೂ ಪ್ರಾಣಿಗಳಿಗಾಗಿ ಕೆಲಸ ಮಾಡಲು ಬಯಸುತ್ತಿದ್ದಳು," ಎಂದು ಸಮೀಕ್ಷಾಳ ಪೋಷಕರು ನೆನಪಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



