ರಾಜ್ಯಾದ್ಯಂತ ಆಟೋ ಎಲ್‌ಪಿಜಿ ಕೊರತೆ; ಕಿಲೋಮೀಟರ್‌ಗಟ್ಟಲೇ ಕ್ಯೂ: ಸಚಿವ ಮುನಿಯಪ್ಪ ಹೇಳಿದ್ದೇನು? Video
ಆದರೆ ಈ ಸಮಸ್ಯೆ ಖಾಸಗಿ ತೈಲ ಕಂಪನಿಗಳ ಎಲ್‌ಪಿಜಿ ಸ್ಟೇಷನ್‌ಗಳಲ್ಲಿ ಮಾತ್ರ ಇದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಎಲ್‌ಪಿಜಿ ಸ್ಟೇಷನ್‌ಗಳಲ್ಲಿ ಯಾವುದೇ ಕೊರತೆ ಇಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.

ಬೆಂಗಳೂರು: ಪೂರೈಕೆಯ ಕೊರತೆಯಿಂದಾಗಿ ಬುಧವಾರ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಆಟೋ ಎಲ್‌ಪಿಜಿ ಕೊರತೆ ತೀವ್ರಗೊಂಡಿದ್ದು, ಹಲವು ಎಲ್‌ಪಿಜಿ ಬಂಕ್‌ಗಳಲ್ಲಿ ಕಿಲೋಮೀಟರ್‌ಗಟ್ಟಲೇ ಆಟೋಗಳು ಕ್ಯೂ ನಿಂತಿರುವ ದೃಶ್ಯಗಳು ಕಂಡುಬರುತ್ತಿವೆ.
ಆದರೆ ಈ ಸಮಸ್ಯೆ ಖಾಸಗಿ ತೈಲ ಕಂಪನಿಗಳ ಎಲ್‌ಪಿಜಿ ಸ್ಟೇಷನ್‌ಗಳಲ್ಲಿ ಮಾತ್ರ ಇದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಎಲ್‌ಪಿಜಿ ಸ್ಟೇಷನ್‌ಗಳಲ್ಲಿ ಯಾವುದೇ ಕೊರತೆ ಇಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.
"ನಾನು ಕಳೆದ ನಾಲ್ಕು ಗಂಟೆಗಳಿಂದ ನನ್ನ ಆಟೋರಿಕ್ಷಾಗೆ ಎಲ್‌ಪಿಜಿ ತುಂಬಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಎಲ್ಲಿಯೂ ಸಿಗುತ್ತಿಲ್ಲ. ನನ್ನ ಆಟೋದಲ್ಲಿ ಎಪ್ ಪಿಜಿ ಖಾಲಿಯಾಗುತ್ತಿದೆ" ಎಂದು ಆರ್‌ಟಿ ನಗರದ ಎಲ್‌ಪಿಜಿ ಸ್ಟೇಷನ್‌ನಲ್ಲಿದ್ದ ಆಟೋ ಚಾಲಕ ಅಬ್ದುಲ್ ಕರೀಮ್ ಹೇಳಿದ್ದಾರೆ.
ಮತ್ತೊಬ್ಬ ಆಟೋರಿಕ್ಷಾ ಚಾಲಕ ಮತೀನ್, ತನ್ನ ವಾಹನವನ್ನು ಆರ್‌ಟಿ ನಗರದ ಎಲ್‌ಪಿಜಿ ಸ್ಟೇಷನ್‌ಗೆ ತಳ್ಳಿಕೊಂಡು ಬಂದೆ. ಆದರೆ ಎಲ್ ಪಿಜಿ ಸಿಗದೆ ನಿರಾಶೆಗೊಂಡಿರುವುದಾಗಿ ತಿಳಿಸಿದರು.
ಚಿತ್ರದುರ್ಗದಲ್ಲಿ, ಗ್ಯಾಸ್ ಕೊರತೆಯಿಂದಾಗಿ ಪೆಟ್ರೋಲ್ ಬಂಕ್ ವೊಂದು ತನ್ನ ಗೇಟ್ ಬಂದ್ ಮಾಡಿದೆ.
ಮೈಸೂರಿನಲ್ಲಿಯೂ ಸಹ, ಖಾಸಗಿ ಪೆಟ್ರೋಲ್ ಮತ್ತು ಡೀಸೆಲ್ ಸೇವಾ ಕೇಂದ್ರವು ಬ್ಯಾರಿಕೇಡ್ ಹಾಕಿ ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ನಿರ್ಬಂಧಿಸಿತ್ತು.
ಪೂರೈಕೆ ಸ್ಥಗಿತಗೊಂಡ ನಂತರ ಬಳ್ಳಾರಿಯ ಎಲ್‌ಪಿಜಿ ಸೇವಾ ಕೇಂದ್ರದ ಮುಂದೆ ಆಟೋರಿಕ್ಷಾ ಚಾಲಕರು ಪ್ರತಿಭಟನೆ ನಡೆಸಿದರು.
ಸಚಿವ ಮುನಿಯಪ್ಪ ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಅವರು, ಆಟೋ ಎಲ್ ಪಿಜಿ ಸಮಸ್ಯೆ ಕೇವಲ ಖಾಸಗಿ ತೈಲ ಕಂಪನಿಗಳ ಸೇವಾ ಕೇಂದ್ರಗಳಲ್ಲಿ ಮಾತ್ರ ಇದೆ ಮತ್ತು ಸರ್ಕಾರಿ ಪಿಎಸ್‌ಯುಗಳಲ್ಲಿ ಇಲ್ಲ ಎಂದು ಹೇಳಿದರು.
ಅವರ ಪ್ರಕಾರ, ಖಾಸಗಿ ಕಂಪನಿಗಳು ಬೆಲೆಯನ್ನು ಹೆಚ್ಚಿಸಿವೆ, ಇದು ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ಖಾಸಗಿ ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರು ಕೇಂದ್ರಕ್ಕೆ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



