ಹತ್ಯೆಗೀಡಾದವರ ಸಮಾಧಿ ತೋರಿಸಲು ಸಿದ್ಧ: ಧರ್ಮಸ್ಥಳ ಗ್ರಾಮಸ್ಥರಿಂದ SITಗೆ ಪತ್ರ
ಮಾಧ್ಯಮಗಳಲ್ಲಿ ತೋರಿಸಲಾಗಿರುವ ವ್ಯಕ್ತಿಯನ್ನು ನಾವು ಗುರ್ತಿಸಿದ್ದೇವೆ. ಆತ ವಿವಿಧ ಸ್ಥಳಗಳಿಗೆ ಶವಗಳನ್ನು ಸಾಗಿಸುತ್ತಿರುವುದು ಹಾಗೂ ಹೂಳುತ್ತಿರುವುದನ್ನು ನೋಡಿದ್ದೇವೆ.

ಮಂಗಳೂರು: ಧರ್ಮಸ್ಥಳ ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುತ್ತಿದ್ದು, ಹತ್ಯೆಗೀಡಾದವರ ಸಮಾಧಿ ತೋರಿಸಲು ಸಿದ್ಧ ಎಂದು ಧರ್ಮಸ್ಥಳ ಗ್ರಾಮಸ್ಥರ ಗುಂಪೊಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕೆ ಪತ್ರ ಬರೆದಿದೆ.
ಗ್ರಾಮಸ್ಥರ ಪರವಾಗಿ ಧರ್ಮಸ್ಥಳ ನಿವಾಸಿ ತುಕಾರಾಮ ಗೌಡ ಎಂಬುವವರು ಎಸ್ಐಟಿಗೆ ಪತ್ರ ಸಲ್ಲಿಸಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ನಾವು ಭಯದಲ್ಲಿ ಬದುಕುವಂತಾಗಿದೆ. ಆದರೆ, ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎಸ್ಐಟಿ ರಚಿಸಿರುವುದು ನಮ್ಮ ವಿಶ್ವಾಸ ಹೆಚ್ಚಾಗುವಂತೆ ಮಾಡಿದೆ. ಮಾಧ್ಯಮಗಳಲ್ಲಿ ತೋರಿಸಲಾಗಿರುವ ವ್ಯಕ್ತಿಯನ್ನು ನಾವು ಗುರ್ತಿಸಿದ್ದೇವೆ. ಆತ ವಿವಿಧ ಸ್ಥಳಗಳಿಗೆ ಶವಗಳನ್ನು ಸಾಗಿಸುತ್ತಿರುವುದು ಹಾಗೂ ಹೂಳುತ್ತಿರುವುದನ್ನು ನೋಡಿದ್ದೇವೆಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಕಾರ್ಯಗಳು ರಹಸ್ಯವಾಗಿ ನಡೆದರೂ, ಹಳ್ಳಿ ಪರಿಸರದಲ್ಲಿ ಈ ವಿಷಯಗಳು ಬಹಿರಂಗವಾಗುವುದು ಸಾಮಾನ್ಯ. ಅಸ್ಥಿಪಂಜರಗಳನ್ನು ಹೂಳಿರುವುದಾಗಿ ದೂರು-ಸಾಕ್ಷಿದಾರ ವ್ಯಕ್ತಿ ಹೇಳಿದ್ದ. ಆದರೆ, ನಂತರ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾನೆಂದು ಮಾಧ್ಯಮಗಳು ವರದಿ ಮಾಡಿದವು. ಆತ ತನ್ನ ಹೇಳಿಕೆಯನ್ನೇಕೆ ಹಿಂತೆಗೆದುಕೊಂಡ ಎಂಬುದು ಗೊಂದಲ ಸೃಷ್ಟಿಸುತ್ತಿದೆ.
ಆ ವ್ಯಕ್ತಿ ಜನಸಂಚಾರ ಕಡಿಮೆ ಇರುವ ಜಾಗಗಳನ್ನು ಆರಿಸಿಕೊಂಡು ಶವಗಳನ್ನು ಹೂಳುತ್ತಿದ್ದ. ಅವನು ಹೇಳಿದ ಸ್ಥಳಗಳಿಗೆ ಹೋಗಿ ಶೋಧ ಕಾರ್ಯ ನಡೆಸಲು ಎಸ್ಐಟಿ ನಾವು ಸಹಕರಿಸುತ್ಯೇವೆ. ಸಮಾಧಿ ಮಾಡಿದ ಸ್ಥಳಗಳನ್ನು ಎಸ್ಐಟಿಗೆ ತೋರಿಸಲು ನಾವು ಸಿದ್ಧರಿದ್ದೇವೆ. ಸತ್ಯ ಮತ್ತು ನ್ಯಾಯಕ್ಕಾಗಿ ಎಸ್ಐಟಿಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧರಿದ್ದೇವೆಂದು ಪತ್ರದಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



