ರಾಜ್ಯ

ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ಸೆಕ್ಷನ್ ನಡುವೆ ರೈಲ್ವೆ ವಿದ್ಯುದ್ದೀಕರಣ, ಕೆಲವು ರೈಲು ಸೇವೆಗಳ ರದ್ದತಿ ಅವಧಿ ವಿಸ್ತರಣೆ!

ಕೆಲವು ರೈಲು ಸೇವೆಗಳ ತಾತ್ಕಾಲಿಕ ರದ್ದತಿಯ ಅವಧಿಯನ್ನು ವಿಸ್ತರಿಸಲಾಗಿದೆ. ಅವುಗಳ ಅವಧಿ ಈ ಕೆಳಗಿನಂತಿವೆ

ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ಸೆಕ್ಷನ್ ನಡುವೆ ರೈಲ್ವೆ ವಿದ್ಯುದ್ದೀಕರಣ, ಕೆಲವು ರೈಲು ಸೇವೆಗಳ ರದ್ದತಿ ಅವಧಿ ವಿಸ್ತರಣೆ!
ಸಕಲೇಶಪುರ- ಸುಬ್ರಹ್ಮಣ್ಯ ಘಾಟ್ ಸೆಕ್ಷನ್ ರೈಲಿನ ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ (ಘಾಟ್ ಸೆಕ್ಷನ್) ನಡುವಿನ ರೈಲ್ವೆ ವಿದ್ಯುದ್ದೀಕರಣ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ನವೆಂಬರ್ 2, 2025 ರಿಂದ ಡಿಸೆಂಬರ್ 15, 2025 ರವರೆಗೆ ಪ್ರತಿದಿನ ನಾಲ್ಕು ಗಂಟೆಗಳ ಕಾಲ ಮಾರ್ಗವನ್ನು ಬಂದ್ ಮಾಡುತ್ತಿದೆ.

ಈ ಕಾರಣದಿಂದಾಗಿ ಈ ಕೆಳಗೆ ತಿಳಿಸಲಾದ ಕೆಲವು ರೈಲು ಸೇವೆಗಳ ತಾತ್ಕಾಲಿಕ ರದ್ದತಿಯ ಅವಧಿಯನ್ನು ವಿಸ್ತರಿಸಲಾಗಿದೆ. ಅವುಗಳ ಅವಧಿ ಈ ಕೆಳಗಿನಂತಿವೆ:

  • ರೈಲು ಸಂಖ್ಯೆ 16539 ಯಶವಂತಪುರ–ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್'ಪ್ರೆಸ್ ರೈಲು ಮೊದಲು 01.11.2025 ರವರೆಗೆ ರದ್ದುಗೊಂಡಿತ್ತು. ಈಗ 08.11.2025 ರಿಂದ 13.12.2025 ರವರೆಗೆ ರದ್ದುಗೊಳ್ಳಲಿದೆ.

  • ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್–ಯಶವಂತಪುರ ಸಾಪ್ತಾಹಿಕ ಎಕ್ಸ್'ಪ್ರೆಸ್ ರೈಲು ಮೊದಲು 02.11.2025 ರವರೆಗೆ ರದ್ದುಗೊಂಡಿತ್ತು. ಈಗ 09.11.2025 ರಿಂದ 14.12.2025 ರವರೆಗೆ ರದ್ದುಗೊಳ್ಳಲಿದೆ.

  • ರೈಲು ಸಂಖ್ಯೆ 16575 ಯಶವಂತಪುರ – ಮಂಗಳೂರು ಜಂಕ್ಷನ್ ಗೋಮಟೇಶ್ವರ ವೀಕ್ಲಿ ಎಕ್ಸ್'ಪ್ರೆಸ್ ಮೊದಲು 30.10.2025 ರವರೆಗೆ ರದ್ದುಗೊಂಡಿತ್ತು. ಈಗ 02.11.2025 ರಿಂದ 14.12.2025 ರವರೆಗೆ ರದ್ದುಗೊಳ್ಳಲಿದೆ.

  • ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್–ಯಶವಂತಪುರ ವೀಕ್ಲಿ ಎಕ್ಸ್'ಪ್ರೆಸ್ ಮೊದಲು 30.10.2025 ರವರೆಗೆ ರದ್ದುಗೊಂಡಿತ್ತು. ಈಗ 03.11.2025 ರಿಂದ 15.12.2025 ರವರೆಗೆ ರದ್ದುಗೊಳ್ಳಲಿದೆ.

  • ರೈಲು ಸಂಖ್ಯೆ 16515 ಯಶವಂತಪುರ – ಕಾರವಾರ ವೀಕ್ಲಿ ಎಕ್ಸ್'ಪ್ರೆಸ್ ಮೊದಲು 31.10.2025 ರವರೆಗೆ ರದ್ದುಗೊಂಡಿತ್ತು. ಈಗ 03.11.2025 ರಿಂದ 15.12.2025 ರವರೆಗೆ ರದ್ದುಗೊಳ್ಳಲಿದೆ.

  • ರೈಲು ಸಂಖ್ಯೆ 16516 ಕಾರವಾರ – ಯಶವಂತಪುರ ಎಕ್ಸ್'ಪ್ರೆಸ್ ಮೊದಲು 01.11.2025 ರವರೆಗೆ ರದ್ದುಗೊಂಡಿತ್ತು. ಈಗ 04.11.2025 ರಿಂದ 16.12.2025 ರವರೆಗೆ ರದ್ದುಗೊಳ್ಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.