ಮಹಾರಾಷ್ಟ್ರದಲ್ಲಿ ಅಪಘಾತ: ಕರ್ನಾಟಕದ ನಾಲ್ವರು ಸಾವು, ಇಬ್ಬರಿಗೆ ಗಾಯ
ಮೃತರು ವಿಜಯಪುರ ಸಮೀಪದ ಪ್ರಸಿದ್ಧ ದೇವಸ್ಥಾನ ಹುಲಜಂತಿಯ ಮಾಳಿಂಗರಾಯನ ಜಾತ್ರೆಗೆ ಹೋಗಿ ಬರುವಾಗ ಅಪಘಾತ ಸಂಭವಿಸಿದೆ.

ಮಹಾರಾಷ್ಟ್ರ: ನೆರೆಯ ಮಹಾರಾಷ್ಟ್ರದ ಧಾರಶಿವ್ ಜಿಲ್ಲೆಯ ಉಮರ್ಗಾ ತಾಲೂಕಿನಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಕರ್ನಾಟಕದ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ದುರ್ಘಟನೆ ನಡೆದಿದೆ.
ಮೃತರನ್ನು ಬೀದರ್ ತಾಲೂಕಿನ ಕಾಶೆಂಪುರ್ (ಪಿ) ಗ್ರಾಮದ ಕಾರು ಚಾಲಕ ರತಿಕಾಂತ ಮಾರುತಿ ಬಸಗೊಂಡ (30) ಸದಾನಂದ ಮಾರುತಿ ಬಸಗೊಂಡ (19) ಶಿವಕುಮಾರ್ ಚಿದಾನಂದ ವಗ್ಗೆ (26) ಸಂತೋಷ ಬಜರಂಗ ಬಸಗೊಂಡ ಎಂದು ಗುರುತಿಸಲಾಗಿದೆ.
ಮೃತರು ವಿಜಯಪುರ ಸಮೀಪದ ಪ್ರಸಿದ್ಧ ದೇವಸ್ಥಾನ ಹುಲಜಂತಿಯ ಮಾಳಿಂಗರಾಯನ ಜಾತ್ರೆಗೆ ಹೋಗಿ ಬರುವಾಗ ಅಪಘಾತ ಸಂಭವಿಸಿದೆ.
ಮುರುಮ್ ಠಾಣಾ ವ್ಯಾಪ್ತಿಯ ದಾಳಿಂಬ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಯಿಯೊಂದು ಇದಕ್ಕಎರಡು ಕಾರುಗಳ ನಡುವಿನ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನ ಒಳಗಿದ್ದವರನ್ನು ಜೆಸಿಬಿಯಿಂದ ಹೊರಗೆ ತೆಗೆಯಲಾಗಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಉಮರ್ಗಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



