ಗದಗ: ಬಸ್ ಕಂಡಕ್ಟರ್ ನಿಂದ ಪತ್ನಿಯ ಕೊಲೆ; ತಂದೆಗೆ ಮರಣ ದಂಡನೆ ನೀಡಿ, ಇಲ್ಲದಿದ್ದರೇ ನಾವೇ ಕೊಲ್ಲುತ್ತೇವೆ- ಮಕ್ಕಳ ಆಕ್ರೋಶ
ರಮೇಶ್ ಮತ್ತು ಸ್ವಾತಿ ಆಗಾಗ್ಗೆ ಜಗಳವಾಡುತ್ತಿದ್ದರು. ದಂಪತಿಯ ಮಕ್ಕಳು ಸಾಮಾನ್ಯವಾಗಿ ವಿವಾದಗಳಿಂದ ದೂರವಿದ್ದರು ಎಂದು ಕುಟುಂಬ ಸದಸ್ಯರು ಹೇಳುತ್ತಾರೆ.

ಗದಗ: ಗದಗ ಬಳಿಯ ಬಿಂಕದಕಟ್ಟಿ ಗ್ರಾಮದಲ್ಲಿ ಬುಧವಾರ ತನ್ನ ಪತ್ನಿಯನ್ನು ಕೊಂದ ಬಸ್ ಕಂಡಕ್ಟರ್‌ನ ಮೂವರು ಮಕ್ಕಳು, ಪೊಲೀಸರು ಆತನಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ, ತಮ್ಮ ತಂದೆಯನ್ನು ತಾವೇ ಕೊಲ್ಲುವುದಾಗಿ ಎಚ್ಚರಿಸಿದ್ದಾರೆ.
ಗದಗ NWKRTC ವಿಭಾಗದ ಕಂಡಕ್ಟರ್ ರಮೇಶ್ ನರಗುಂದ ಆರೋಪಿ. ತನ್ನ ಪತ್ನಿ ಸ್ವಾತಿಯ ಮೇಲೆ ಅನುಮಾನ ಪಟ್ಟು ಏಕಾಏಕಿ ಬೀಸುವ ಕಲ್ಲು ಎತ್ತಿಹಾಕಿ, ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ.
ರಮೇಶ್ ಮತ್ತು ಸ್ವಾತಿ ಆಗಾಗ್ಗೆ ಜಗಳವಾಡುತ್ತಿದ್ದರು. ದಂಪತಿಯ ಮಕ್ಕಳು ಸಾಮಾನ್ಯವಾಗಿ ವಿವಾದಗಳಿಂದ ದೂರವಿದ್ದರು ಎಂದು ಕುಟುಂಬ ಸದಸ್ಯರು ಹೇಳುತ್ತಾರೆ. ಹುಬ್ಬಳ್ಳಿಯಲ್ಲಿ ಹಿರಿಯ ಮಗಳು, ಗದಗದಲ್ಲಿ ಇಬ್ಬರು ಕಿರಿಯ ಪುತ್ರರು ವ್ಯಾಸಂಗ ಮಾಡುತ್ತಿದ್ದರು, ಈ ಹತ್ಯೆಯಿಂದ ಆಘಾತಕ್ಕೊಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.
ನನ್ನ ತಂದೆ ಯಾವಾಗಲೂ ನಮ್ಮ ಅಗತ್ಯಗಳನ್ನು ಪೂರೈಸುತ್ತಿದ್ದರು, ನಮ್ಮನ್ನು ನೋಡಿಕೊಂಡರು, ಆದರೆ ಅವರು ನನ್ನ ತಾಯಿಯ ಜೊತೆ ಕ್ರೂರಿಯಾಗಿ ವರ್ತಿಸುತ್ತಿದ್ದರು ಎಂದು ಕಿರಿಯ ಮಗ ಮಂಜುನಾಥ್ ಹೇಳಿದರು.
ನಮ್ಮ ತಂದೆ ತಾಯಿಯನ್ನು ಕೊಲ್ಲುತ್ತಾನೆಂದು ನಾವು ಎಂದಿಗೂ ಭಾವಿಸಿರಲಿಲ್ಲ. ಈಗ ನಾವು ಅನಾಥರಾಗಿದ್ದೇವೆ. ಪೊಲೀಸರು ನಮ್ಮ ತಂದೆಗೆ ಮರಣದಂಡನೆ ವಿಧಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಅವರು ಹಾಗೆ ಮಾಡದಿದ್ದರೆ, ನಾವೇ ಶಿಕ್ಷೆ ವಿಧಿಸುತ್ತೇವೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಯಾವುದೇ ಔಪಚಾರಿಕ ಆರೋಪಪಟ್ಟಿ ಪ್ರಕಟವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



