ರಾಜ್ಯ

ಮೈಸೂರು: ಅಪ್ರಾಪ್ತ ಹೆಣ್ಣು ಮಕ್ಕಳ ಕತ್ತು ಕೊಯ್ದು ತಾಯಿ ಆತ್ಮಹತ್ಯೆ!

ಕಳೆದ 3 ವರ್ಷಗಳ ಹಿಂದೆ ರಬಿಯಾ ಭಾನುಗೆ ಸೈಯದ್ ಮುಸಾವೀರ್ ಎಂಬುವರ ಜೊತೆಗೆ ಮದುವೆಯಾಗಿತ್ತು. ಇಬ್ಬರಿಗೂ 2 ವರ್ಷದ ಒಂದು ಹೆಣ್ಣು ಮಗು ಇದ್ದು, ಕಳೆದ 8 ದಿನಗಳ ಹಿಂದೆ ಮತ್ತೊಂದು ಹೆಣ್ಣು ಮಗು ಕೂಡ ಜನಿಸಿತ್ತು.

ಮೈಸೂರು: ಅಪ್ರಾಪ್ತ ಹೆಣ್ಣು ಮಕ್ಕಳ ಕತ್ತು ಕೊಯ್ದು ತಾಯಿ ಆತ್ಮಹತ್ಯೆ!
ಸಾಂದರ್ಭಿಕ ಚಿತ್ರ
Published On :

ಮೈಸೂರು: ತಾಯಿಯೊಬ್ಭಳು ತನ್ನ ಇಬ್ಬರು ಹೆಣ್ಣು ಮಕ್ಕಳ ಕುತ್ತಿಗೆ ಕೊಯ್ದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.

ಬೆಟ್ಟದಪುರ ಗ್ರಾಮದ ರಬಿಯಾ ಭಾನು ಮಕ್ಕಳನ್ನು ಕೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಕಳೆದ 3 ವರ್ಷಗಳ ಹಿಂದೆ ರಬಿಯಾ ಭಾನುಗೆ ಸೈಯದ್ ಮುಸಾವೀರ್ ಎಂಬುವರ ಜೊತೆಗೆ ಮದುವೆಯಾಗಿದೆ. ಇಬ್ಬರಿಗೂ 2 ವರ್ಷದ ಒಂದು ಹೆಣ್ಣು ಮಗು ಇದ್ದು, ಕಳೆದ 8 ದಿನಗಳ ಹಿಂದೆ ಮತ್ತೊಂದು ಹೆಣ್ಣು ಮಗು ಕೂಡ ಜನಿಸಿತ್ತು.

ಮೊದಲ ಹೆಣ್ಣು ಮಗು ಅನಮ್ ಫಾತಿಯಾ ವಿಶೇಷ ಚೇತನ ಮಗುವಾಗಿದ್ದ ಕಾರಣ ಕೌಟುಂಬಿಕ ಕಲಹ ಇತ್ತು ಎನ್ನಲಾಗಿದೆ. ಕಳೆದ 8 ದಿನದ ಹಿಂದೆ ಇನ್ನೊಂದು ಮಗು ಕೂಡ ಜನಿಸಿದ್ದು ಅದು ಹೆಣ್ಣು ಮಗುವಾಗಿದೆ. ಹೀಗಾಗಿ ತಾಯಿ ರಬಿಯಾ ಭಾನು ಬೇಜಾರಿನಲ್ಲಿದ್ದು ತಂದೆ ಮನೆಯಲ್ಲಿ ಬಾಣಂತನಕ್ಕೆ ಹೋಗಿದ್ದಾಳೆ.

ಬೆಳಿಗ್ಗೆ ಮಕ್ಕಳ ಕತ್ತು ಕೊಯ್ದು ತಾನು ಕೂಡ ಕೊತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತಿಂಡಿಗೆ ಕರೆಯಲು ಕುಟುಂಬಸ್ಥರು ರೂಮಿನ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಹೆಣ್ಣು ಮಕ್ಕಳ ಜನನದ ಬಗ್ಗೆ ಆಕೆಯ ಪತಿ ಅಥವಾ ಅತ್ತೆ-ಮಾವರಿಂದ ಕಿರುಕುಳ ಅಥವಾ ಒತ್ತಡ ಇದ್ದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಅವರ ಮೊದಲ ಮಗು ಅಂಗವೈಕಲ್ಯದಿಂದ ಜನಿಸಿದ್ದು, ಇದು ಕುಟುಂಬದಲ್ಲಿ ಸ್ವಲ್ಪ ಮಾನಸಿಕ ಒತ್ತಡಕ್ಕೆ ಕಾರಣವಾಗಿತ್ತು, ಆಕೆ ಮತ್ತೆ ಗರ್ಭಿಣಿಯಾದಾಗ, ಬಾನು ತನ್ನ ಪೋಷಕರ ಮನೆಗೆ ಮರಳಿದರು ಮತ್ತು ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈ ಪರಿಸ್ಥಿತಿಯಿಂದ ಅವರು ತೀವ್ರವಾಗಿ ಅಸಮಾಧಾನಗೊಂಡಿದ್ದರು ಎಂದು ಶಂಕಿಸಲಾಗಿದೆ ಎಂದು ಎಎಸ್ಪಿ ಮಲ್ಲಿಕ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.