ರಾಜ್ಯ

ಮಂಡ್ಯ: ಪುತ್ರಿಯ ಹತ್ಯೆಗೆ ಪ್ರತೀಕಾರ; ಹಂತಕನ ತಂದೆಯ ಕೊಂದು ಮಗಳ ಸಾವಿನ ಸೇಡು ತೀರಿಸಿಕೊಂಡ ಅಪ್ಪ!

ಬೆಳ್ಳಾಲೆ ಗೇಟ್ ಬಳಿಯ ಚಹಾ ಅಂಗಡಿಯಲ್ಲಿ ನರಸಿಂಹೆ ಚಹಾ ಕುಡಿಯುತ್ತಿದ್ದಾಗ ಹಿಂದಿನಿಂದ ಬಂದು ನರಸಿಂಹಗೆ ಚಾಕುವಿನಿಂದ ಹಲವು ಬಾರಿ ಇರಿದ ಘಟನೆ ನಡೆದಿದೆ.

ಮಂಡ್ಯ: ಪುತ್ರಿಯ ಹತ್ಯೆಗೆ ಪ್ರತೀಕಾರ; ಹಂತಕನ ತಂದೆಯ ಕೊಂದು ಮಗಳ ಸಾವಿನ ಸೇಡು ತೀರಿಸಿಕೊಂಡ ಅಪ್ಪ!
ಕೊಲೆ ನಡೆದ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ
Published On :

ಮಂಡ್ಯ: ಮಗಳ ಸಾವಿಗೆ ಪ್ರತೀಕಾರಕ್ಕೆ ಹತ್ಯೆ ಆರೋಪಿಯ ತಂದೆಯನ್ನೇ ಆಕೆಯ ತಂದೆ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ ನಡೆದಿದೆ.

ಮಾಣಿಕ್ಯನಹಳ್ಳಿ ಗ್ರಾಮದ ನರಸಿಂಹೇಗೌಡ ಕೊಲೆ ವ್ಯಕ್ತಿ. ಅದೇ ಗ್ರಾಮದ ವೆಂಕಟೇಶ್ ಕೊಲೆ ಆರೋಪಿ. ಬೆಳ್ಳಾಲೆ ಗೇಟ್ ಬಳಿಯ ಚಹಾ ಅಂಗಡಿಯಲ್ಲಿ ನರಸಿಂಹೆ ಚಹಾ ಕುಡಿಯುತ್ತಿದ್ದಾಗ ಹಿಂದಿನಿಂದ ಬಂದು ನರಸಿಂಹಗೆ ಚಾಕುವಿನಿಂದ ಹಲವು ಬಾರಿ ಇರಿದ ಘಟನೆ ನಡೆದಿದೆ.

ಮಾಣಿಕ್ಯಹಳ್ಳಿ ಗ್ರಾಮದ ದೀಪಿಕಾಳನ್ನು ಅದೇ ಗ್ರಾಮದ ನಿತೀಶ್ ಎಂಬಾತ 2024ರ ಜನವರಿ 22 ರಂದು ಬರ್ಬರವಾಗಿ ಕೊಲೆ ಮಾಡಿದ್ದ. ಇದೇ ಪ್ರತೀಕಾರವಾಗಿ ದೀಪಳ ತಂದೆ ವೆಂಕಟೇಶ್, ತನ್ನ ಮಗಳ ಹಂತಕನ ತಂದೆ ನರಸಿಂಹೇಗೌಡ ಹತ್ಯೆ ಮಾಡಿದ್ದಾನೆ. ನನ್ನ ಮಗಳನ್ನ ಸಾಯಿಸಿ ನಿನ್ನ ಮಗಳಿಗೆ ಮದುವೆ ಮಾಡುತ್ತಿದ್ದಿಯಾ ಎಂದು ಬರ್ಬರವಾಗಿ ಕೊಲೆ ಮಾಡಿದ್ದಾನೆ.

ದೀಪಿಕಾ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯಹಳ್ಳಿ ಗ್ರಾಮದವಳು. ಈಕೆಯನ್ನು 2024 ಜನವರಿ 22 ರಂದು ಅದೇ ಗ್ರಾಮದ ನಿತೀಶ್ ಎಂಬಾತ ಬರ್ಬರವಾಗಿ ಕೊಲೆ ಮಾಡಿದ್ದ. ಇದೀಗ ಮಗಳ ಕೊಲೆಯ ಪ್ರತೀಕಾರಕ್ಕೆ ತಂದೆ ಕೊಲೆ ಆರೋಪಿಯ ತಂದೆಯನ್ನ ಕೊಲೆ ಮಾಡಿದ್ದಾನೆ. ದೀಪಿಕಾ ಲೋಕೇಶ್ ಎಂಬುವವರನ್ನು ಅವರು ವಿವಾಹವಾಗಿದ್ದರು ಮತ್ತು ಕೊಲೆಯಾದ ಸಮಯದಲ್ಲಿ ದಂಪತಿಗೆ ಎಂಟು ತಿಂಗಳ ಮಗುವಿತ್ತು.

2024 ಜನವರಿ 19 ರಂದು ಮಾಣಿಕ್ಯನಹಳ್ಳಿ ಗ್ರಾಮದ ದೀಪಿಕಾ ಎಂಬ ಟೀಚರ್ ನಾಪತ್ತೆಯಾಗಿದ್ದಳು. ಬಳಿಕ ಆಕೆ ಜನವರಿ 23 ರಂದು ಮೇಲುಕೋಟೆಯ ಬೆಟ್ಟದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ವೇಳೆ ರಾಜ್ಯದಲ್ಲಿ ದೊಡ್ಡಮಟ್ಟದ ಸುದ್ದಿಯಾಗಿತ್ತು. ಬಳಿಕ ಮಂಡ್ಯ ಪೊಲೀಸರು ಮಾಣಿಕ್ಯನಹಳ್ಳಿ ಗ್ರಾಮದ ನಿತೀಶ್ ಎಂಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈ ಕೊಲೆ‌ ಮಾಡಿದ್ದು ಬೇರೆ ಯಾರು ಅಲ್ಲ ನಿತೀಶ್ ಎಂದು ತಿಳಿದಿತ್ತು.

ತನಿಖೆಯ ಸಮಯದಲ್ಲಿ, ದೀಪಿಕಾಳನ್ನು ಸಮಾಧಿ ಮಾಡಿದ ಸ್ಥಳದ ಬಳಿ ನಿತೀಶ್ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಭಕ್ತನೊಬ್ಬ ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದ ವೀಡಿಯೊವನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವೀಡಿಯೊ ದೃಶ್ಯಾವಳಿಗಳನ್ನು ಆಧರಿಸಿ, ಪೊಲೀಸರು ನಿತೀಶ್ ಅವರನ್ನು ಬಂಧಿಸಿ ಕೊಲೆ ಆರೋಪದ ಮೇಲೆ ಜೈಲಿಗೆ ಕಳುಹಿಸಿದರು. ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅಪರಾಧ ಸ್ಥಳಕ್ಕೆ ಭೇಟಿ ನೀಡಿ ವಿವರಗಳನ್ನು ಸಂಗ್ರಹಿಸಿದರು. ಮೇಲುಕೋಟೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.