ರಾಯಚೂರು: ಪತ್ನಿಗೆ ಕೈಕೊಟ್ಟು ಸುಂದರಿ ಹಿಂದೆ ಬಿದ್ದು 2ನೇ ಮದ್ವೆ; ಜೀವನಾಂಶ ಕೇಳಿದ್ದಕ್ಕೆ ಮೊದಲ ಹೆಂಡ್ತಿಗೆ ಮಚ್ಚಿನೇಟು!
ಮೊದಲ ಪತ್ನಿಗೆ ಕೈಕೊಟ್ಟು ಎರಡನೇ ಮದುವೆಯಾಗಿದ್ದ ವ್ಯಕ್ತಿಯೋರ್ವ ಇದೀಗ ಮೊದಲ ಪತ್ನಿಗೆ ಮೇಲೆ ಮಚ್ಚಿನಿಂದ ದಾಳಿ ಮಾಡಿರುವ ಘಟನೆ ರಾಯಚೂರಿನ ಏಗನೂರು ಗ್ರಾಮದಲ್ಲಿ ನಡೆದಿದೆ.

ರಾಯಚೂರು: ಮೊದಲ ಪತ್ನಿಗೆ ಕೈಕೊಟ್ಟು ಎರಡನೇ ಮದುವೆಯಾಗಿದ್ದ ವ್ಯಕ್ತಿಯೋರ್ವ ಇದೀಗ ಮೊದಲ ಪತ್ನಿಗೆ ಮೇಲೆ ಮಚ್ಚಿನಿಂದ ದಾಳಿ ಮಾಡಿರುವ ಘಟನೆ ರಾಯಚೂರಿನ ಏಗನೂರು ಗ್ರಾಮದಲ್ಲಿ ನಡೆದಿದೆ. ಬೈಕ್ನಲ್ಲಿ ಬಂದ ತಿಮ್ಮಪ್ಪ ಪತ್ನಿ ಪದ್ಮಾವತಿ ಹಾಗೂ ನಾದಿನಿ ಭೂದೇವಿ ಮೇಲೆ ಮಚ್ಚಿನಿಂದ ಮನಬಂದಂತೆ ದಾಳಿ ಮಾಡಿದ್ದಾನೆ. ಈ ದಾಳಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋವನ್ನು ಜನ ಬೆಚ್ಚಿಬಿದ್ದಿದ್ದಾರೆ. ತಿಮ್ಮಪ್ಪ ಎರಡನೇ ಮದುವೆಯಾಗಿದ್ದ ಹೀಗಾಗಿ ಪದ್ಮಾವತಿ ಕೋರ್ಟ್ ಮೊರೆ ಹೋಗಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಳು. ಜೀವನಾಂಶ ನೀಡುವಂತೆ ಕೋರ್ಟ್ ಸಹ ತಿಮ್ಮಪ್ಪಗೆ ಸೂಚಿಸಿತ್ತು. ಆದರೆ ಜೀವನಾಂಶ ಕೊಡದಿದ್ದರಿಂದ ಜೈಲು ಸೇರಿದ್ದನು. ಅಲ್ಲದೆ ಜೈಲಿನಿಂದ ಹೊರ ಬಂದ ಬಳಿಕ ಪತ್ನಿಗೆ ಹಿಂಸೆ ಕೊಡಲಾರಂಭಿಸಿದ್ದಾನೆ. ಅಲ್ಲದೆ ಪತ್ನಿ ಮತ್ತು ನಾದಿನಿ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದರಿಂದ ಪದ್ಮಾವತಿಯ ಕೈ ಬೆರಳುಗಳು ತುಂಡಾಗಿವೆ. ಭೂದೇವಿಯ ಮುಂಗೈ ತುಂಡಾಗಿದ್ದು ಸದ್ಯ ರಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



