ರಾಜ್ಯ

ಪತ್ನಿ ಹತ್ಯೆ ಮಾಡಿ ಶವ ಸೂಟ್ ಕೇಸ್ ನಲ್ಲಿ ತುಂಬಿಸಿದ್ದ ಪತಿಗೆ 14 ದಿನ ನ್ಯಾಯಾಂಗ ಬಂಧನ: ಆರೋಪಿ ಪರಪ್ಪನ ಅಗ್ರಹಾರ ಜೈಲಿಗೆ

ಕಳೆದ ರಾತ್ರಿ ಆರೋಪಿಯನ್ನು ಬೆಂಗಳೂರಿಗೆ ಕರೆತಂದಿದ್ದ ಪೊಲೀಸರು ಇಂದು ಕೋರಮಂಗಲ ಎನ್​​ಜಿವಿ ಮ್ಯಾಜಿಸ್ಟ್ರೇಟ್ ಕೋರ್ಟ್ ಜಡ್ಜ್ ನಿವಾಸಕ್ಕೆ ಹಾಜರುಪಡಿಸಿದ್ದರು.

ಪತ್ನಿ ಹತ್ಯೆ ಮಾಡಿ ಶವ ಸೂಟ್ ಕೇಸ್ ನಲ್ಲಿ ತುಂಬಿಸಿದ್ದ ಪತಿಗೆ 14 ದಿನ ನ್ಯಾಯಾಂಗ ಬಂಧನ: ಆರೋಪಿ ಪರಪ್ಪನ ಅಗ್ರಹಾರ ಜೈಲಿಗೆ
ಪತ್ನಿ ಹಾಗೂ ಪತಿಯ ಸಂಗ್ರಹ ಚಿತ್ರ
Published On :

ಬೆಂಗಳೂರು: ಪತ್ನಿ ಹತ್ಯೆ ಮಾಡಿ ಶವವನ್ನು ಸೂಟ್​ಕೇಸ್​ನಲ್ಲಿ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಕೇಶ್ ಕಡೇಕರ್​ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಲಾಗಿದೆ.

ಕಳೆದ ರಾತ್ರಿ ಆರೋಪಿಯನ್ನು ಬೆಂಗಳೂರಿಗೆ ಕರೆತಂದಿದ್ದ ಪೊಲೀಸರು ಇಂದು ಕೋರಮಂಗಲ ಎನ್​​ಜಿವಿ ಮ್ಯಾಜಿಸ್ಟ್ರೇಟ್ ಕೋರ್ಟ್ ಜಡ್ಜ್ ನಿವಾಸಕ್ಕೆ ಹಾಜರುಪಡಿಸಿದ್ದರು. ಬಳಿಕ ರಾಕೇಶ್​ನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದರು. ಸದ್ಯ ಆರೋಪಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.

ಕೊಲೆ ಮಾಡಿ ತಂದೆಗೆ ಕರೆಮಾಡಿದ್ದ ರಾಕೇಶ್‌

ಪತ್ನಿಯ ಕೊಲೆ ಮಾಡಿದ ರಾಕೇಶ್‌, ಶವದ ಕಾಲುಗಳನ್ನ ಮುರಿದು ಶವವನ್ನ ಟ್ರ್ಯಾಲಿ ಬ್ಯಾಗ್‌ಗೆ ತುಂಬಿದ್ದ. ಅದೇ ಬ್ಯಾಗ್‌ನನ್ನ ಎಳೆಯುವಾಗ ಹ್ಯಾಂಡಲ್‌ ಕಟ್ ಆಗಿದೆ. ಹೀಗಾಗಿ ಶವವನ್ನ ಅಲ್ಲೇ ಬಿಟ್ಟು ಕಾರ್‌ನಲ್ಲಿ ಎಸ್ಕೇಪ್ ಆಗಿದ್ದ. ಪತಿ ಜತೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಮಹಾರಾಷ್ಟ್ರ ಮೂಲದ ಗೌರಿ ಕಡೇಕರ್ ಅವರ ಮೃತದೇಹ ಗುರುವಾರ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿತ್ತು.

ಪತ್ನಿ ಕೊಲೆ ಮಾಡಿದ ನಂತರ ಈ ವಿಚಾರವನ್ನು ಗೌರಿ ಪೋಷಕರಿಗೆ ಕರೆ ಮಾಡಿ ತಿಳಿಸಿ ನಂತರ ಪುಣೆಗೆ ಪರಾರಿಯಾಗಿದ್ದನು. ಅಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಗೌರಿ ಕೊಲೆ ಕುರಿತಂತೆ ಮಾತನಾಡಿದ ಪೊಲೀಸ್ ಆಯುಕ್ತ ಬಿ ದಯಾನಂದ್, ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಯ ಪತಿ ಪ್ರಮುಖ ಆರೋಪಿ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.