ಬೆಳಗಾವಿಯಲ್ಲಿ ಮರಾಠಿ ಯುವಕನಿಗೆ ಸನ್ಮಾನ: MES ನಾಯಕ ಶುಭಂ ಶೆಲ್ಕೆ ಬಂಧನ
ಮರಾಠಿ ಭಾಷೆಯಲ್ಲಿಯೇ ಮಾತನಾಡುವಂತೆ ಕಿಣಿಯೆ ಗ್ರಾಮದ ಪಿಡಿಒಗೆ ತಿಪ್ಪಣ್ಣ ಡೋಕ್ರೆ ಎಂಬ ಮರಾಠಿ ಯುವಕ ಬೆದರಿಕೆ ಹಾಕಿದ್ದ. ಈತನಿಗೆ ಶುಭಂ ಶೆಲ್ಕೆ ಸನ್ಮಾನಿಸಿದ್ದರು.

ಬೆಳಗಾವಿ: ಮರಾಠಿ ಭಾಷೆಯಲ್ಲಿಯೇ ಮಾತನಾಡುವಂತೆ ಬೆಳಗಾವಿ ಸಮೀಪದ ಕಿಣಿಯೆ ಗ್ರಾಮದ ಪಿಡಿಒಗೆ ಬೆದರಿಕೆ ಹಾಕಿದ್ದ ಮರಾಠಿ ಯುವಕನಿಗೆ ಸನ್ಮಾನಿಸಿದ ಆರೋಪದ ಮೇಲೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಾಯಕ ಶುಭಂ ಶೆಲ್ಕೆ ಅವರನ್ನು ಬೆಳಗಾವಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಮರಾಠಿ ಭಾಷೆಯಲ್ಲಿಯೇ ಮಾತನಾಡುವಂತೆ ಕಿಣಿಯೆ ಗ್ರಾಮದ ಪಿಡಿಒಗೆ ತಿಪ್ಪಣ್ಣ ಡೋಕ್ರೆ ಎಂಬ ಮರಾಠಿ ಯುವಕ ಬೆದರಿಕೆ ಹಾಕಿದ್ದ. ಈತನಿಗೆ ಶುಭಂ ಶೆಲ್ಕೆ ಸನ್ಮಾನಿಸಿದ್ದರು. ಅಲ್ಲದೆ, ಕರ್ನಾಟಕದಲ್ಲಿರುವ ಕನ್ನಡ ಸಂಘಟನೆಗಳು ನಾಲಾಯಕ್’ ಎಂದು ವಿವಾದಾತ್ಮಕವಾಗಿ ಹೇಳಿಕೆ ಕೊಟ್ಟು, ಕನ್ನಡಿಗರು ಮತ್ತು ಮರಾಠಿಗರ ನಡುವಿನ ಸೌಹಾರ್ದತೆ ಕದಡಲು ಯತ್ನಿಸಿದ್ದರು ಎಂಬ ಆರೋಪ ಕೂಡ ಕೇಳಿ ಬಂದಿತ್ತು.
ಘಟನೆ ಬಳಿಕ ಪೊಲೀಸರು ತಿಪ್ಪಣ್ಣ ಡೋಕ್ರೆನನ್ನು ಬಂಧನಕ್ಕೊಳಪಡಿಸಿದ್ದ, ನಂತರ ಶುಭಂ ಶೆಲ್ಕೆಗಾಗಿ ಹುಡುಕಾಟ ಆರಂಭಿಸಿದ್ದರು. ಇದರಂತೆ ಸೋಮವಾರ ಮೀರಜ್ನಲ್ಲಿ ಶೆಲ್ಕೆ ಅವರನ್ನು ಬೆಳಗಾವಿ ಪೊಲೀಸರು ಬಂಧಕ್ಕೊಳಪಡಿಸಿದ್ದಾರೆ.
ಕನ್ನಡ ವಿರೋಧಿ ಹಾಗೂ ಭಾಷಾ ಸಾಮರಸ್ಯ ಕದಡುವ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಡಿ ಶುಭಂ ಶೆಲ್ಕೆ ಅವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಕಂಡಕ್ಟರ್ ಮೇಲೆ ಹಲ್ಲೆ: ಬೆಳಗಾವಿಯಲ್ಲಿ ಕರವೇ ಪ್ರತಿಭಟನೆ; ಎಂಇಎಸ್ ಪುಂಡರ ವಿರುದ್ಧ ಆಕ್ರೋಶ, ಗಡಿಪಾರು ಮಾಡಲು ಒತ್ತಾಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


