ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ 15 ಮಂದಿ Dysp ಗಳ ವರ್ಗಾವಣೆ
16 ಮಂದಿ ಇನ್‌ಸ್ಪೆಕ್ಟರ್ ಹಾಗೂ 15 ಮಂದಿ ಡಿವೈಎಸ್ ಪಿ (ಸಿವಿಲ್) ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಬೆಂಗಳೂರು: ರಾಜ್ಯ ಪೋಲಿಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳಾಗಿವೆ. 16 ಮಂದಿ ಇನ್‌ಸ್ಪೆಕ್ಟರ್ ಹಾಗೂ 15 ಮಂದಿ ಡಿವೈಎಸ್ ಪಿ (ಸಿವಿಲ್) ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ವರ್ಗಾವಣೆಯಾದ ಇನ್‌ಸ್ಪೆಕ್ಟರ್ ಗಳು
ದಿನೇಶ್‌ಕುಮಾರ್ ಅವರನ್ನು ತುಮಕೂರಿನಿಂದ ಕೊಡಗಿನ ಕುಶಾಲನಗರ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಮೋಹನ್‌ರೆಡ್ಡಿ-ಕರ್ನಾಟಕ ಲೋಕಾಯುಕ್ತದಿಂದ ಹಾಸನ ಆಲೂರು ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದ್ದರೆ, ಲಕ್ಷ್ಮೀಕಾಂತ್ ಅವರನ್ನು ಮೈಸೂರು ಹೆಬ್ಬಾಳ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಚಾಮರಾಜನಗರ ಗ್ರಾಮಾಂತರದ ಇನ್ ಸ್ಪೆಕ್ಟರ್ ಚಿಕ್ಕರಾಜಶೆಟ್ಟಿ ಅವರನ್ನು ರಾಮಾಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಶೇಷಾದ್ರಿ- ಚಾಮರಾಜನಗರ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯಿಂದ ಗ್ರಾಮಾಂತರ ಠಾಣೆಗೆ, ಸತೀಶ-ಚಿಕ್ಕಮಗಳೂರು ಬಸವನಹಳ್ಳಿ ವೃತ್ತದಿಂದ ಮಹಿಳಾ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಶ್ರೀಕಾಂತ್-ಮಂಡ್ಯ ಡಿಸಿಆರ್‌ಬಿ, ಲಕ್ಷಯ್ಯ, ರಾಮಚಂದ್ರಪ್ಪ, ಸತೀಶ್, ಪ್ರಕಾಶ್, ಬಿ.ಜೆ ಸತೀಶ್, ಕುಮಾರ್, ಸಂತೋಷ್ ಎಂ ಪಾಟೀಲ್, ಸಂಜೀವ ರಾಯಪ್ಪ ಹಾಗೂ ಮಂಜುನಾಥ್ ಅವರುಗಳನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.
ಡಿವೈಎಸ್‌ಪಿ: ಶಾಂತವೀರ-ರಾಯಚೂರು ಉಪವಿಭಾಗ, ರವಿನಾಥ ಡಿ. ಹರಿಜನ -ಸಿಐಡಿ, ಸುರೇಶ್ -ಬಳ್ಳಾರಿ ಗ್ರಾಮಾಂತರ ಸಿರಗುಪ್ಪ ಉಪ ವಿಭಾಗ, ನವೀನ್ ಕುಲಕರ್ಣಿ-ಬೆಂಗಳೂರು ನಗರ ಟಿಟಿಐ, ಶ್ರೀನಿವಾಸ ರೆಡ್ಡಿ-ಪ್ರಧಾನ ಕಚೇರಿ, ಮಾದಪ್ಪ-ಸಿಐಡಿಯಿಂದ ರಾಜ್ಯ ಗುಪ್ತವಾರ್ತೆ, ಲಕ್ಷ್ಮಿನಾರಾಯಣ-ಪ್ರಧಾನ ಕಚೇರಿ, ಗಿರಿಮಲ್ಲ ತಳಕಟ್ಟಿ-ಪ್ರಧಾನ ಕಚೇರಿ ಹಾಗೂ ಬಸವರಾಜ್ ಅವರನ್ನು ಆಂತರಿಕ ಭದ್ರತಾ ವಿಭಾಗದಲ್ಲಿಯೇ ಮುಂದುವರೆಸಲಾಗಿದೆ.
ಸುಧಾಕರ್, ರವಿಕುಮಾರ್-ಬೆಂಗಳೂರುನಗರ ಸಿಟಿಎಸ್‌ಬಿ, ಪರಶುರಾಮಪ್ಪ, ಗಜೇಂದ್ರ ಪ್ರಸಾದ್-ವಿವಿಐಪಿ ಭದ್ರತೆ, ಶರಣಪ್ಪ-ಟಿಟಿಐ ನಿಂದ ರಾಜ್ಯ ಗುಪ್ತವಾರ್ತೆ ಮತ್ತು ವೆಂಕಟೇಶ್ ಅವರನ್ನು ಬಳ್ಳಾರಿ ಜಿಲ್ಲೆ ಸಿರಗುಪ್ಪ ಉಪ ವಿಭಾಗದಿಂದ ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



