ಆನೇಕಲ್: ಉರುಳಿಬಿದ್ದ ಮದ್ದೂರಮ್ಮ ಜಾತ್ರೆಯ ತೇರು; ಓರ್ವ ಸಾವು, ಹಲವರಿಗೆ ಗಾಯ!
ಎರಡು ಕುರ್ಜುಗಳು ಧರೆಗೆ ಉರುಳಿಬಿದ್ದಿದ್ದು, ಟ್ರ್ಯಾಕ್ಟರ್ ಹಾಗೂ ನೂರಾರು ಎತ್ತುಗಳ ಮೂಲಕ ಈ ತೇರನ್ನು ಎಳೆಯಲಾಗುತ್ತಿತ್ತು.

ಬೆಂಗಳೂರು: ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ಮದ್ದೂರಮ್ಮ ಜಾತ್ರೆಯ ತೇರು ಉರುಳಿಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಎರಡು ಕುರ್ಜುಗಳು ಧರೆಗೆ ಉರುಳಿಬಿದ್ದಿದ್ದು, ಟ್ರ್ಯಾಕ್ಟರ್ ಹಾಗೂ ನೂರಾರು ಎತ್ತುಗಳ ಮೂಲಕ ಈ ತೇರನ್ನು ಎಳೆಯಲಾಗುತ್ತಿತ್ತು.
150 ಕ್ಕೂ ಹೆಚ್ಚು ಅಡಿ ಎತ್ತರದ ಕುರ್ಜುಗಳು ಇದಾಗಿದ್ದು, . ತೇರು ಎಳೆದು ತರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮದ್ದೂರಮ್ಮ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಅತೀ ಎತ್ತರ ತೇರು ಕಟ್ಟಿ ಎಳೆದು ತರುವ ಜಾತ್ರೆ ನೋಡಲು ಲಕ್ಷಾಂತರ ಜನ ಆಗಮಿಸುತ್ತಾರೆ. ಗಾಳಿ ಸಹಿತ ಮಳೆಯ ಕಾರಣದಿಂದಾಗಿ ತೇರು ಧರೆಗೆ ಉರುಳಿದೆ.
ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುರ್ಜು ನಿಧಾನವಾಗಿ ಉರುಳಿದ್ದರಿಂದ ಅಪಾಯವನ್ನರಿತ ಭಕ್ತರು ಅವಘಡದಿಂದ ತಪ್ಪಿಸಿಕೊಂಡಿದ್ದಾರೆ. ಈ ಹಿಂದೆ ರಾಯಸಂದ್ರದ ಕುರ್ಜು ಉರುಳಿ ಬಿದ್ದಿತ್ತು, ಕಳೆದ ವರ್ಷ ಮತ್ತೊಂದು ಕುರುಜು ಉರುಳಿದ್ದನ್ನು ನೆನಪಿಸಬಹುದಾದರೂ ಆಗಲೂ ಯಾರಿಗೂ ಏನೂ ಆಗದಂತೆ ದೇವಿ ಕಾಪಾಡಿದ್ದಳು ಎನ್ನುವುದೇ ಎಲ್ಲರ ನಂಬಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



