ರಾಮನಗರ: ಪ್ರತಿಷ್ಠಿತ ಕಾರ್ಖಾನೆ ಶೌಚಾಲಯದಲ್ಲಿ ಪಾಕ್ ಪರ ಬರಹ; ಕಿಡಿಗೇಡಿಗಳಿಗಾಗಿ ಪೊಲೀಸರ ಹುಡುಕಾಟ
ಬಿಡದಿಯ ಟೊಯೋಟಾ ಬುಶೋಕುನಲ್ಲಿ ಮಾರ್ಚ್ 15 ರಂದು ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

ರಾಮನಗರ: ಬಿಡದಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಪ್ರತಿಷ್ಠಿತ ಕಾರ್ಖಾನೆಯ ಶೌಚಾಲಯದಲ್ಲಿ ಪಾಕಿಸ್ತಾನ ಪರ ಬರಹ ಪತ್ತೆಯಾಗಿದ್ದು, ಕಿಡಿಗೇಡಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಬಿಡದಿಯ ಟೊಯೋಟಾ ಬುಶೋಕುನಲ್ಲಿ ಮಾರ್ಚ್ 15 ರಂದು ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ ಕೆಲವು ಕಿಡಿಗೇಡಿಗಳು ಶಾಚಾಲಯದ ಗೋಡೆಯಲ್ಲಿ “ಪಾಕಿಸ್ತಾನ ಜೈ, ಕನ್ನಡಿಗರು ಸೂ,…. ಮಕ್ಕಳು ಎಂದು ಬರೆದಿದ್ದಾರೆಂದು ತಿಳಿದುಬಂದಿದೆ.
ಈ ಬಗ್ಗೆ ಉದ್ಯೋಗಿಗಳಿಗೆ ಕಂಪನಿಯಿಂದ ಸುತ್ತೋಲೆ ಹೊರಡಿಸಲಾಗಿದ್ದು, ಯಾರೇ ಕಿಡಿಗೇಡಿ ಇದ್ದರೂ ಕಠಿಣ ಕ್ರಮವಹಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಈ ರೀತಿಯ ಬರವಣಿಗೆಗಳು ಉದ್ಯೋಗಿಗಳ ಮನಸ್ಸಿನಲ್ಲಿ ಅಶಾಂತಿಯನ್ನು ಸೃಷ್ಟಿಸುವುದಲ್ಲದೇ ಸಂಸ್ಥೆಯಲ್ಲಿ ತೀವ್ರ ರೀತಿಯ ಅಶಿಸ್ತಿನ ಬೆಳವಣಿಗೆಗೆ ಕಾರಣವಾಗುತ್ತದೆ. ಮುಂದುವರೆದು ಈ ರೀತಿಯ ಬರವಣಿಗೆಗಳು ದೇಶದ ಕಾನೂನಿನ ಚೌಕಟ್ಟಿನಲ್ಲಿ “ದೇಶದ್ರೋಹಿ” ಅಪರಾಧಗಳಡಿಯಲ್ಲಿ ವರ್ಗೀಕೃತವಾಗಿರುತ್ತವೆ. ಈ ಕೃತ್ಯ ಇದೇ ರೀತಿ ಮುಂದುವರೆದಲ್ಲಿ ಮಾಹಿತಿಯನ್ನು ಪೊಲೀಸರ ಗಮನಕ್ಕೆ ತರುವುದರೊಂದಿಗೆ ಜೈಲು ವಾಸವಾಗುವವರೆಗೂ ಕಿಡಿಗೇಡಿಗಳನ್ನು ಬಿಡುವುದಿಲ್ಲ ಮತ್ತು ಬೆರಳಚ್ಚು ಹಾಗೂ ಬರವಣಿಗೆ ತಜ್ಞರ ಗಮನಕ್ಕೆ ತಂದು ಈ ಕೃತ್ಯ ಹೆಸಗುವವರನ್ನು ಕಂಡುಹಿಡಿದು ಹೆಚ್ಚಿನ ಮಟ್ಟದಲ್ಲಿ ಶಿಕ್ಷೆಯಾಗುವವರೆಗೂ ಆಡಳಿತ ಮಂಡಳಿಯು ಕಾಳಜಿ ವಹಿಸಲು ಸಿದ್ಧವಿರುತ್ತದೆ.
ಆದ್ದರಿಂದ ಎಲ್ಲಾ ವರ್ಗದ ಉದ್ಯೋಗಿಗಳು ಮೇಲೆ ತಿಳಿಸಿದ ವಿಷಯವನ್ನು ಸೂಕ್ಷ್ಮವಾಗಿ ಗಮನಕ್ಕೆ ತೆಗೆದುಕೊಳ್ಳಬೇಕೆಂದು ಈ ಮೂಲಕ ತಿಳಿಸಲಾಗಿದೆ. ಹಾಗೂ ಯಾವುದೇ ಉದ್ಯೋಗಿಯು ಈ ರೀತಿಯ ಕಿಡಿಗೇಡಿ ಕೃತ್ಯ ಮಾಡುವಾಗ ಸಿಕ್ಕಿಬಿದ್ದಲ್ಲಿ ಅತ್ಯಂತ ಕಠಿಣ ಶಿಸ್ತಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಈ ಮೂಲಕ ಆಡಳಿತ ಮಂಡಳಿಯು ತಿಳಿಸುತ್ತದೆ ಎಂದು ಸುತ್ತೋಲೆ ಹೊರಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



