ಸಿನಿಮಾಗಳಲ್ಲಿ ಹಿಂಸೆಯನ್ನು ವೈಭವೀಕರಿಸಬಾರದು: ಕೇಂದ್ರ ಸಚಿವ ಸುರೇಶ್ ಗೋಪಿ
ನಿನ್ನೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಸಿನಿಮಾವನ್ನು ನೋಡುವುದು ಮಾತ್ರವಲ್ಲ, ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.

ಮೈಸೂರು: ಸಮಾಜದಲ್ಲಿ ನಡೆಯುವ ಹಿಂಸಾಚಾರದ ಘಟನೆಗಳನ್ನು ಆಧರಿಸಿ ಸಿನಿಮಾ ತಯಾರಾಗಬಹುದು, ಆದರೆ ಹಿಂಸಾಚಾರಗಳು ಸಿನಿಮಾದಿಂದಲೇ ಹುಟ್ಟಿಕೊಳ್ಳುತ್ತವೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ನಿನ್ನೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಸಿನಿಮಾವನ್ನು ನೋಡುವುದು ಮಾತ್ರವಲ್ಲ, ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
'ಇಡುಕ್ಕಿ ಗೋಲ್ಡ್' ಚಿತ್ರವನ್ನು ಅದರ ವಿಷಯದ ಕಾರಣದಿಂದಾಗಿ ಜನ ಟೀಕಿಸುತ್ತಿದ್ದಾರೆ. ಸಮಾಜದಲ್ಲಿ ಇರುವ ಪರಿಸ್ಥಿತಿಯನ್ನೇ ಚಿತ್ರದಲ್ಲಿ ತೋರಿಸಲಾಗಿದೆ. ಅದನ್ನು ವೈಭವೀಕರಿಸುವುದರ ಹಿಂದೆ ಯಾವ ಕಾರಣವಿದೆ ಎಂದು ನೀವು (ಸಿನೆಮಾದ ಹಿಂದಿನ) ಕಲಾವಿದರನ್ನು ಕೇಳಬೇಕು ಎಂದರು.
ಹಾಗಾದರೆ ಸಿನಿಮಾಗಳಲ್ಲಿ ಹಿಂಸೆಯನ್ನು ವೈಭವೀಕರಿಸುವುದನ್ನು ಕಡಿಮೆ ಮಾಡಬೇಕೇ ಎಂಬುದರ ಕುರಿತು ಗೋಪಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಆದಾಗ್ಯೂ, ಸಿನಿಮಾಗಳಲ್ಲಿ ಹಿಂಸೆಯನ್ನು ವೈಭವೀಕರಿಸಬಾರದು ಎಂಬುದರ ಒಪ್ಪಿಕೊಂಡರು. ಪರದೆಯ ಮೇಲೆ ಚಿತ್ರಿಸಲಾಗುತ್ತಿರುವುದು ಕೇವಲ ಮನರಂಜನೆಗಾಗಿ ಅಲ್ಲ. ನಿಜ ಜೀವನದಲ್ಲಿ ಇಂತಹ ಕೃತ್ಯಗಳು ಸರಿಯಲ್ಲ ಎಂದು ಜನರು ಅರಿತುಕೊಳ್ಳಬೇಕು ಎಂದರು.
ಸಮಾಜದಲ್ಲಿ ಮಾದಕ ವಸ್ತುಗಳ ಹರಿವನ್ನು ತಡೆಯುವ ಜವಾಬ್ದಾರಿಯನ್ನು ರಾಜಕೀಯ ಪಕ್ಷಗಳು ಮತ್ತು ಸ್ಥಳೀಯ ನಾಯಕರು ತೆಗೆದುಕೊಳ್ಳಬೇಕು. ಸ್ಥಳೀಯ ನಿವಾಸಿ ಸಂಘಗಳು ಮತ್ತು ಪಕ್ಷಗಳ ಬೂತ್ ಮಟ್ಟದ ನಾಯಕರು ಸಹ ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ಸಚಿವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


