ರಾಜ್ಯ

ಹಾಸನಕ್ಕೆ ಹೃದಯಾಘಾತ: ಮೊನ್ನೆ ವಿದ್ಯಾರ್ಥಿನಿ, ಇಂದು ಆಟೋ ಚಾಲಕ Heart Attack ಗೆ ಬಲಿ!

ಹಾಸನದಲ್ಲಿ ಹೃದಯಾಘಾತದ ಸರಣಿ ಮುಂದುವರಿದಿದ್ದು ಇಂದು Heart Attack ಗೆ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕಳೆದ 1 ತಿಂಗಳ ಅಂತರದಲ್ಲಿ ಹಾಸನದಲ್ಲೇ ಬರೋಬ್ಬರಿ 16 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಹಾಸನಕ್ಕೆ ಹೃದಯಾಘಾತ: ಮೊನ್ನೆ ವಿದ್ಯಾರ್ಥಿನಿ, ಇಂದು ಆಟೋ ಚಾಲಕ Heart Attack ಗೆ ಬಲಿ!
ಸುಪ್ರಿಯಾ-ಗೋವಿಂದ
Published On :

ಹಾಸನ: ಹಾಸನದಲ್ಲಿ ಹೃದಯಾಘಾತದ ಸರಣಿ ಮುಂದುವರಿದಿದ್ದು ಇಂದು Heart Attack ಗೆ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕಳೆದ 1 ತಿಂಗಳ ಅಂತರದಲ್ಲಿ ಹಾಸನದಲ್ಲೇ ಬರೋಬ್ಬರಿ 16 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಿದ್ದೇಶ್ವರ್ ನಗರದ ನಿವಾಸಿ 37 ವರ್ಷದ ಗೋವಿಂದನಿಗೆ ಆಟೋ ಚಲಾಯಿಸುವಾಗ ಎದೆನೋವು ಕಾಣಿಸಿಕೊಂಡಿದೆ. ತಡ ಮಾಡದೆ ಗೋವಿಂದನೆ ಆಟೋ ಚಲಾಯಿಸಿಕೊಂಡು ಜಿಲ್ಲಾಸ್ಪತ್ರೆಗೆ ತೆರಳಿದ್ದರು. ಆದರೂ ಸಾವನ್ನು ಗೋವಿಂದ ಗೆದ್ದು ಬರಲಿಲ್ಲ. ಇನ್ನು ಮೊನ್ನೆಯಷ್ಟೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ವಾಸವಿದ್ದು ಮುಕ್ತ ವಿವಿಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಕಟ್ಟಳ್ಳಿ ಗ್ರಾಮದ 22 ವರ್ಷದ ಪದವೀಧರೆ ಸುಪ್ರಿಯಾ ಹೃದಯಾಘಾತಕ್ಕೆ ಬಲಿಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.