ಮಾದಕ ವ್ಯಸನ ಮುಕ್ತವಾದ ಕಥೆ ಹಂಚಿಕೊಂಡ ಬೀನಾ; ಮಂಗಳೂರಿನಲ್ಲಿ ಮಹಿಳೆಯರ ವ್ಯಸನ ಮುಕ್ತ ಕೇಂದ್ರಗಳ ಕೊರತೆ!
"ಡ್ರಗ್ಸ್ ಬಿಡುವುದು ಸುಲಭದ ಮಾತಾಗಿರಲಿಲ್ಲ. ನಾನು ಸಂಪ್ರದಾಯವಾದಿ ಕುಟುಂಬದಿಂದ ಬಂದಿದ್ದೇನೆ. ನಾನು ಆರಂಭದಲ್ಲಿ ಸಿಗರೇಟ್ ಮತ್ತು ಬಿಯರ್....

ಮಂಗಳೂರು: ಮಾದಕ ವ್ಯಸನದಿಂದ ಬಳಲುತ್ತಿದ್ದ ಬೀನಾ, ಈಗ ವ್ಯಸನ ಮುಕ್ತವಾಗಿ ಮಾದಕ ವ್ಯಸನ ಮುಕ್ತ ಕೇಂದ್ರವನ್ನು ನಡೆಸುತ್ತಿದ್ದಾರೆ. ಅಲ್ಲದೆ ಪ್ರಮಾಣೀಕೃತ ಕೌನ್ಸಿಲರ್ ಆಗಿರುವ ಬೀನಾ ಅವರು ಗುರುವಾರ ತಮ್ಮ ಸ್ಪೂರ್ತಿದಾಯಕ ಕಥೆಯನ್ನು ಹಂಚಿಕೊಂಡಿದ್ದಾರೆ.
ಮಂಗಳೂರು ನಗರ ಪೊಲೀಸರು ಆಯೋಜಿಸಿದ್ದ ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ 2025ರಲ್ಲಿ ಮಾತನಾಡಿದ ಬೀನಾ, "ಡ್ರಗ್ಸ್ ಬಿಡುವುದು ಸುಲಭದ ಮಾತಾಗಿರಲಿಲ್ಲ. ನಾನು ಸಂಪ್ರದಾಯವಾದಿ ಕುಟುಂಬದಿಂದ ಬಂದಿದ್ದೇನೆ. ನಾನು ಆರಂಭದಲ್ಲಿ ಸಿಗರೇಟ್ ಸೇದುತ್ತಿದ್ದೆ ಮತ್ತು ಬಿಯರ್ ಕುಡಿಯುತ್ತಿದ್ದೆ. ನಂತರ ಗಾಂಜಾಗೆ ಅಂಟಿಕೊಂಡೆ ಎಂದರು.
ನಾನು ಸ್ವತಂತ್ರವಾಗಿ ಬದುಕಲು ಬಯಸಿದ್ದೆ ಮತ್ತು ನಾನು ನನ್ನ ತಾಯಿಗೆ ಹೇಳಿ ಮನೆಯಿಂದ ಹೊರಬಂದೆ. ನಾನು 12 ವರ್ಷಗಳ ಕಾಲ ನನ್ನ ಮನೆಯಿಂದ ಹೊರಗಿದ್ದೆ. ನಾನು ಹಣ ಸಂಪಾದಿಸಿದೆ ಮತ್ತು ಉನ್ನತ ಸಂಸ್ಥೆಗಳಲ್ಲಿ ಕೆಲಸ ಮಾಡಿದೆ. ಇದರ ಮಧ್ಯೆ ನಾನು ಹಲವು ಮಾದಕ ವಸ್ತುಗಳ ಸೇವನೆ ಕಲಿತೆ ಮತ್ತು ಅದು ನನ್ನನ್ನು ನಿಯಂತ್ರಿಸುತ್ತಿತ್ತು. ನಾನು ಮಾದಕ ವಸ್ತು ತೆಗೆದುಕೊಳ್ಳದಿದ್ದಾಗ, ನನ್ನ ದೇಹವು ಕಾರ್ಯನಿರ್ವಹಿಸುತ್ತಿರಲಿಲ್ಲ. ನಾನು ಕೆಲಸ ಮಾಡಿ ಮಾದಕ ವಸ್ತು ಖರೀದಿಸಲು ಹಣ ಸಂಪಾದಿಸುತ್ತಿದ್ದೆ. ನಾನು ಡ್ರಗ್ಸ್ ಗಾಗಿ ತಿಂಗಳಿಗೆ 35,000 ರೂ.ವರೆಗೆ ಖರ್ಚು ಮಾಡುತ್ತಿದ್ದೆ" ಎಂದು ಬಾರ್ನ್ ಎಗೇನ್ ರಿಕವರಿ ಸೆಂಟರ್(BARC)ನ ಸಂಸ್ಥಾಪಕಿ ಬೀನಾ ಹೇಳಿದ್ದಾರೆ.
ಕೊನೆಗೂ ನಾನು ಡ್ರಗ್ಸ್ ಸೇವನೆಯಿಂದ ಹೊರಬರಲು ನಿರ್ಧರಿಸಿದೆ ಮತ್ತು ಒಂದು ಹಂತದಲ್ಲಿ ನಾನು ನನ್ನ ಜೀವನವನ್ನೇ ಕೊನೆಗೊಳಿಸಲು ಸಹ ನಿರ್ಧರಿಸಿದ್ದೆ. ಈ ವೇಳೆ ಅಸಹಾಯಕಳಾಗಿ, ಒಂದು ದಿನ ನನ್ನ ತಾಯಿಗೆ ಕರೆ ಮಾಡಿದೆ ಮತ್ತು ಅವರು ವಾಪಸ್ ಬರಲು ಮಾತ್ರ ಹೇಳಿದರು. ನಾನು ನನ್ನ ಮನೆಗೆ ಹಿಂತಿರುಗಿದೆ. ನನ್ನ ದೇಹವು ನಡುಗುತ್ತಿತ್ತು ಮತ್ತು ನನಗೆ ಹಲವು ಭ್ರಮೆಗಳು ಇದ್ದವು. ಹೀಗಾಗಿ ನನ್ನ ತಾಯಿ ನನ್ನನ್ನು ಮನೋವೈದ್ಯಕೀಯ ವಾರ್ಡ್ಗೆ ಸೇರಿಸಿದರು. ನಾನು ಈ ಅಪರಾಧದ ಬಲಿಪಶು ಮತ್ತು ನನ್ನಂತೆ ಮಾದಕ ವ್ಯಸನದಿಂದ ಬಳಲುತ್ತಿರುವ ಅನೇಕ ಮಹಿಳೆಯರಿಗೆ ಸಹಾಯದ ಅಗತ್ಯವಿದೆ. ಮಂಗಳೂರಿನಲ್ಲಿ ಮಹಿಳೆಯರಿಗೆ ವ್ಯಸನ ಮುಕ್ತ ಕೇಂದ್ರ(ಡಿ-ಅಡಿಕ್ಷನ್ ಸೆಂಟರ್)ಗಳ ಕೊರತೆಯಿದೆ. ಮಾದಕ ದ್ರವ್ಯಗಳಿಗೆ ಸಂಬಂಧಿಸಿದ ಕಳಂಕವನ್ನು ಪರಿಹರಿಸಬೇಕು” ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



