ದಾವಣಗೆರೆ: ಮದುವೆಯಾಗಿ 15 ದಿನಕ್ಕೆ 55 ವರ್ಷದ ಅತ್ತೆ ಜೊತೆ ಅಳಿಯನ ಚಕ್ಕಂದ; ಮೊಬೈಲ್ನಲ್ಲಿ ಸರಸದ Video ನೋಡಿ ಪತ್ನಿ ಶಾಕ್!
ಎರಡು ತಿಂಗಳ ಹಿಂದೆ ಮದುವೆಯಾಗಿ ದಾಂಪತ್ಯ ಜೀವನದ ಕನಸು ಕಾಣುತ್ತಿದ್ದ ಯುವತಿಗೆ ಹೆತ್ತ ತಾಯಿಯೇ ಕಂಟಕಳಾಗಿದ್ದಾಳೆ.

ದಾವಣಗೆರೆ: ಎರಡು ತಿಂಗಳ ಹಿಂದೆ ಮದುವೆಯಾಗಿ ದಾಂಪತ್ಯ ಜೀವನದ ಕನಸು ಕಾಣುತ್ತಿದ್ದ ಯುವತಿಗೆ ಹೆತ್ತ ತಾಯಿಯೇ ಕಂಟಕಳಾಗಿದ್ದಾಳೆ. ಹೌದು... ಮಗಳ ಗಂಡನ ಜೊತೆ ತಾಯಿ ಪರಾರಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಮದುವೆ ನಡೆದ 15 ದಿನಕ್ಕೆ 55 ವರ್ಷದ ಅತ್ತೆ ಶಾಂತ ಜೊತೆ 25 ವರ್ಷದ ಗಣೇಶ್ ಅಕ್ರಮ ಸಂಬಂಧ ಬೆಳೆಸಿದ್ದಾನೆ.
ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದ ನಿವಾಸಿ ಶಾಂತ, ನಾಗರಾಜ್ ಎಂಬಾತನನ್ನು 13 ವರ್ಷಗಳ ಹಿಂದೆ 2ನೇ ಮದುವೆಯಾಗಿದ್ದಳು. ನಾಗರಾಜ್ ಗೆ ಅದಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದರು. ಆ ಪೈಕಿ ಹೇಮಾಳಿಗೆ ಶಾಂತಳೆ ಹುಡುಗನನ್ನು ಹುಡುಕಿ ಮದುವೆ ಮಾಡಿದ್ದಳು. ನಂತರ ಅಳಿಯನ ಜೊತೆ ಶಾಂತಾ ರೀಲ್ಸ್ ಮಾಡುವ ಖಯಾಳಿ ಶುರುವಾಗಿದೆ. ಬರಬರುತ್ತಾ ಇಬ್ಬರ ನಡುವೆ ಸಲುಗೆ ಬೆಳೆದು ಪರಸ್ಪರ ಹತ್ತಿರವಾಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೇ ತಮ್ಮ ಸರಸದ ದೃಶ್ಯಗಳನ್ನು ವಿಡಿಯೋ ಸಹ ಮಾಡಿದ್ದಾರೆ.
ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ, ಫೋಟೋ ನೋಡಿ ಮಗಳು ಶಾಕ್ ಆಗಿದ್ದಾಳೆ. ಗಂಡ ಹಾಗೂ ಮಲತಾಯಿಯ ಸರಸ ಕಂಡು ಮನೆಯವರು ಶಾಕ್ ಆಗಿದ್ದಾರೆ. ಇವರಿಬ್ಬರ ಬಣ್ಣ ಬಯಲಾಗುತ್ತಿದ್ದಂತೆ ಹಣ, ಆಭರಣ ಕದ್ದು ಗಣೇಶ್ ಜೊತೆ ಶಾಂತ ಪರಾರಿಯಾಗಿದ್ದಾಳೆ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯ: 4 ದಿನಗಳ ಹಿಂದೆ Instagram ನಲ್ಲಿ ಪರಿಚಯ; ಕಾರಿನಲ್ಲೇ ಕಾಮಕ್ಕಾಗಿ ಪೀಡಿಸಿದ ಗೃಹಿಣಿಯನ್ನು ಕೊಂದ ಪ್ರಿಯಕರ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


