ರಾಜ್ಯ

ಕಲಬುರಗಿ: ಕೋರ್ಟ್ ಹಾಲ್ ಗೆ ಬರುವ ಮುನ್ನ ಹೃದಯಾಘಾತ; ನ್ಯಾಯಾಧೀಶ ಸಾವು

ಕಳೆದ ವಾರವೇ ಕಲಬುರಗಿ ಕೋರ್ಟ್‌ಗೆ ವಿಶ್ವನಾಥ್ ಅವರು ವರ್ಗಾವಣೆಯಾಗಿದ್ದರು. ಇಂದು ಬೆಳಗ್ಗೆ ಎಂದಿನಂತೆ ಕೋರ್ಟ್‌ಗೆ ಬಂದಿದ್ದರು.

ಕಲಬುರಗಿ: ಕೋರ್ಟ್ ಹಾಲ್ ಗೆ ಬರುವ ಮುನ್ನ ಹೃದಯಾಘಾತ; ನ್ಯಾಯಾಧೀಶ ಸಾವು
ವಿಶ್ವನಾಥ್ ವಿ ಮೂಗತಿ
Published On :

ಕಲಬುರಗಿ: ಕೋರ್ಟ್ ಹಾಲ್‌ಗೆ ತೆರಳುವ ಕೆಲವೇ ನಿಮಿಷಗಳಿಗೂ ಮುನ್ನ ಹೃದಯಾಘಾತದಿಂದ ಹಿರಿಯ ನ್ಯಾಯಾಧೀಶರು ಸಾವನಪ್ಪಿರುವ ಘಟನೆ, ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ.

ಕಲಬುರಗಿ ಜಿಲ್ಲಾ 3ನೇ ಹಿರಿಯ ಶ್ರೇಣಿ ನ್ಯಾಯಾಧೀಶರಾದ ವಿಶ್ವನಾಥ್ ವಿ ಮೂಗತಿ (44) ಸಾವನ್ನಪ್ಪಿದ ದುರ್ದೈವಿ. ಕಳೆದ ವಾರವೇ ಕಲಬುರಗಿ ಕೋರ್ಟ್‌ಗೆ ವಿಶ್ವನಾಥ್ ಅವರು ವರ್ಗಾವಣೆಯಾಗಿದ್ದರು. ಇಂದು ಬೆಳಗ್ಗೆ ಎಂದಿನಂತೆ ಕೋರ್ಟ್‌ಗೆ ಬಂದಿದ್ದರು.

ಆದರೆ ಕೋರ್ಟ್ ಹಾಲ್‌ಗೆ ಬರುವುದಕ್ಕಿಂತ ಮುಂಚೆ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಲಾಗಿದೆ. ಆದರೆ ಆಸ್ಪತ್ರೆ ಕರೆತರುವ ಮುನ್ನವೇ ನ್ಯಾಯಧೀಶರು ಕೊನೆ ಉಸಿರೆಳೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.