ರಾಜ್ಯ

ಜನಗಣತಿ ಮರುಸಮೀಕ್ಷೆಯಿಂದ ಗೊಂದಲಗಳು ನಿವಾರಣೆ: ಸಚಿವ ಸತೀಶ್ ಜಾರಕಿಹೊಳಿ

ನಾವು ನಮ್ಮ ನಾವು ಅಭಿಪ್ರಾಯ ಕೊಟ್ಟಿದ್ದೇವೆ.‌ ಯಾರಿಗೂ ತೊಂದರೆಯಾಗಬಾರದು. ಈಗಿನ ವರದಿ ಕರೆಕ್ಟ್ ಆಗಿದೆ.‌ ಗೊಂದಲ ಇದ್ದರೆ ಪರಿಶೀಲನೆ ಮಾಡಬಹುದು.

ಜನಗಣತಿ ಮರುಸಮೀಕ್ಷೆಯಿಂದ ಗೊಂದಲಗಳು ನಿವಾರಣೆ: ಸಚಿವ ಸತೀಶ್ ಜಾರಕಿಹೊಳಿ
ಸಚಿವ ಸತೀಶ್ ಜಾರಕಿಹೊಳಿ
Published On :

ಬೆಂಗಳೂರು: ಜಾತಿ ಗಣತಿಯಲ್ಲಿ ಮರುಸಮೀಕ್ಷೆಯಿಂದ ಗೊಂದಲಗಳು ನಿವಾರಣೆಯಾಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಗುರುವಾರ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಇರುವ ಜಾತಿ ಗಣತಿ ವರದಿಯಲ್ಲಿ ಸಾಕಷ್ಟು ಗೊಂದಲಗಳಿವೆ. ಮರು ಸಮೀಕ್ಷೆಯಿಂದ ಈ ಗೊಂದಲಗಳು ನಿವಾರಣೆಯಾಗುವ ನಿರೀಕ್ಷೆಗಳಿವೆ ಎಂದು ಹೇಳಿದರು.

ವರದಿ ಅವೈಜ್ಞಾನಿಕ, ಹಳೆಯ ವರದಿ ಎಂದ ದೂರುಗಳು ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಲವು ಉನ್ನತ ನಾಯಕರು ಮರು ಸಮೀಕ್ಷೆಗೆ ನಿರ್ಧರಿಸಿದ್ದಾರೆ.

ನಾವು ನಮ್ಮ ನಾವು ಅಭಿಪ್ರಾಯ ಕೊಟ್ಟಿದ್ದೇವೆ.‌ ಯಾರಿಗೂ ತೊಂದರೆಯಾಗಬಾರದು. ಈಗಿನ ವರದಿ ಕರೆಕ್ಟ್ ಆಗಿದೆ.‌ ಗೊಂದಲ ಇದ್ದರೆ ಪರಿಶೀಲನೆ ಮಾಡಬಹುದು. ಮರು ಸರ್ವೇ ಇಲ್ಲ, ಕರೆಕ್ಷನ್ ಅಷ್ಟೇ. ಯಾವುದನ್ನೇ ಮಾಡಲಿ, ತೊಂದರೆ ಏನಿದೆ. ಎಲ್ಲದಕ್ಕೂ ವಿರೋಧ, ಪರ ಇದ್ದೇ ಇರುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.