ರಾಜ್ಯ

ಚಿಕ್ಕಮಗಳೂರು: ತಾಯಿಯನ್ನು ಕೊಂದು ಸುಟ್ಟು ಹಾಕಿ ಪಕ್ಕದಲ್ಲೇ ಮಲಗಿದ್ದ ಪುತ್ರ

ಕೂಲಿ ಕೆಲಸ ಮಾಡಿಕೊಂಡು ಅಮ್ಮನ ಜೊತೆಯಲ್ಲಿದ್ದ ಪವನ್‌ ಹಕ್ಕಿಮಕ್ಕಿ ಗ್ರಾಮದಲ್ಲಿ ವಾಸವಾಗಿದ್ದ. ಕಳೆದ ರಾತ್ರಿ ಕಂಠಪೂರ್ತಿ ಕುಡಿದುಬಂದು ತಾಯಿಯ ಜೊತೆ ವಿನಾಕಾರಣ ಜಗಳ ತೆಗೆದಿದ್ದ.

ಚಿಕ್ಕಮಗಳೂರು: ತಾಯಿಯನ್ನು ಕೊಂದು ಸುಟ್ಟು ಹಾಕಿ ಪಕ್ಕದಲ್ಲೇ ಮಲಗಿದ್ದ ಪುತ್ರ
ಬಂಧಿತ ಆರೋಪಿ ಪವನ್
Published On :

ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಪುತ್ರನೇ ತಾಯಿಯನ್ನ ಕೊಂದು, ಆಕೆ ಮೃತ ದೇಹಕ್ಕೆ ಬೆಂಕಿ ಹಾಕಿ ಪಕ್ಕದಲ್ಲೇ ಮಲಗಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ತಾಲೂಕಿನ ಅರೆನೂರು ಸಮೀಪದ ಹಕ್ಕಿಮಕ್ಕಿ ಗ್ರಾಮದಲ್ಲಿ ನಡೆದಿದೆ.

ಕೂಲಿ ಕೆಲಸ ಮಾಡಿಕೊಂಡು ಅಮ್ಮನ ಜೊತೆಯಲ್ಲಿದ್ದ ಪವನ್‌ ಹಕ್ಕಿಮಕ್ಕಿ ಗ್ರಾಮದಲ್ಲಿ ವಾಸವಾಗಿದ್ದ. ಕಳೆದ ರಾತ್ರಿ ಕಂಠಪೂರ್ತಿ ಕುಡಿದುಬಂದು ತಾಯಿಯ ಜೊತೆ ವಿನಾಕಾರಣ ಜಗಳ ತೆಗೆದಿದ್ದು, ಆಕೆಯನ್ನು ಕೊಂದು ಬೆಂಕಿ ಹಚ್ಚಿ ಸುಟ್ಟಿದ್ದಲ್ಲದೆ, ಪ್ರಜ್ಞಾಹೀನನಾಗಿ ಪಕ್ಕದಲ್ಲೇ ಮಲಗಿದ್ದನು.

ಅಕ್ಕಪಕ್ಕದವರು ದೌಡಾಯಿಸಿ ಬಂದು ನೋಡುವಷ್ಟರಲ್ಲೇ ಭವಾನಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದರು. ವಿಷಯ ತಿಳಿದ ಕೂಡಲೇ ಆಲ್ಲೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಾಯಿ ಕೊಂದ ಪಾಪಿ ಮಗನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಳೆದ 2 ತಿಂಗಳ ಹಿಂದೆ ಪವನ್ ಕುಡಿದು ಬಂದ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಗ್ರಾಮದ ಹಿರಿಯರು ಬುದ್ದಿ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.