ರಾಜ್ಯ

ದರ್ಶನ್ ಫ್ಯಾನ್ಸ್ ಜೊತೆ ರಮ್ಯಾ ವಾರ್: ಗೃಹ ಸಚಿವ ಪರಮೇಶ್ವರ್ ರಿಯಾಕ್ಷನ್!

ನಟ ದರ್ಶನ್ ಫ್ಯಾನ್ಸ್ ಕಮೆಂಟ್ ಬಗ್ಗೆ ನಟಿ ರಮ್ಯಾ ಅವರು ಮೊದಲು ದೂರು ನೀಡಲಿ ಬಳಿಕ ಪೊಲೀಸರು ಏನು ಕ್ರಮ‌ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತಾರೆ.

ದರ್ಶನ್ ಫ್ಯಾನ್ಸ್ ಜೊತೆ ರಮ್ಯಾ ವಾರ್: ಗೃಹ ಸಚಿವ ಪರಮೇಶ್ವರ್ ರಿಯಾಕ್ಷನ್!
ಗೃಹ ಸಚಿವ ಜಿ ಪರಮೇಶ್ವರ್
Published On :

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಮೃತನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದ ನಟಿ ರಮ್ಯಾ ವಿರುದ್ಧ ನಟ ದರ್ಶನ್ ಫ್ಯಾನ್ಸ್ ಸಿಡಿದೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್​ ಆ್ಯಂಡ್​ ನಟಿ ರಮ್ಯಾ ವಾರ್ ಜೋರಾಗಿದೆ.

ಮೃತನ ಫ್ಯಾಮಿಲಿ ಪರ ನಿಂತ ನನಗೆ ದರ್ಶನ್​ ಫ್ಯಾನ್ಸ್ ಅಶ್ಲೀಲ ಮೆಸೇಜ್​​ಗಳನ್ನ ಕಳಿಸುತ್ತಿದ್ದಾರೆ ಎಂದು ನಟಿ ರಮ್ಯಾ ಆರೋಪ ಮಾಡಿದ್ದಾರೆ. ಅಲ್ಲದೇ ದರ್ಶನ್​ ಅಭಿಮಾನಿಗಳು ಈ ಮಟ್ಟಕ್ಕೆ ಇಳಿಯಬಾರದು ಎಂದು ರಮ್ಯಾ ಕಿಡಿಕಾರಿದ್ದು, ದೂರು ಕೊಡಲು ರೆಡಿಯಾಗಿದ್ದಾರೆ. ಇತ್ತ ದರ್ಶನ್ ಫ್ಯಾನ್ಸ್ ಹಾಗೂ ರಮ್ಯಾ ನಡುವಿನ ವಾರ್ ಬಗ್ಗೆ ಗೃಹ ಸಚಿವ ಪರಮೇಶ್ವರ್​ ಕೂಡ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್, ನಟ ದರ್ಶನ್ ಫ್ಯಾನ್ಸ್ ಕಮೆಂಟ್ ಬಗ್ಗೆ ನಟಿ ರಮ್ಯಾ ಅವರು ಮೊದಲು ದೂರು ನೀಡಲಿ ಬಳಿಕ ಪೊಲೀಸರು ಏನು ಕ್ರಮ‌ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತಾರೆ. ಸೈಬರ್ ಕ್ರೈಂ ಅವರು ಯಾವುದು ಸೆನ್ಸಿಟೀವ್ ಇರುತ್ತೆ ಅಂತವರನ್ನ ಬ್ಲಾಕ್ ಮಾಡ್ತಾರೆ. ಇಲ್ಲವೇ ದೂರು ಕೊಟ್ಟರೆ ಕ್ರಮ ಕೈಗೊಳ್ಳುತ್ತಾರೆ ಎಂದು ಪರಮೇಶ್ವರ್​ ಹೇಳಿದ್ದಾರೆ.

ಈ ಬಗ್ಗೆ ದೂರು ಯಾರಾದ್ರು ಕೊಡಬೇಕು. ದೂರು ಕೊಡದಿದ್ರೂ ಕೆಲವೊಮ್ಮೆ ಸುಮೋಟೋ ದಾಖಲಿಸಸುತ್ತಾರೆ. ಆದ್ರೆ ದೂರು ಬಂದ್ರೆ ಸೀರಿಯಸ್ ಆಗಿ ಕ್ರಮ ಆಗುತ್ತದೆ. ಇದಕ್ಕೆಲ್ಲಾ ಸರ್ಕಾರ ನಿರ್ದೇಶನ ಆದೇಶ ಕೊಡಲ್ಲ. ಆ ವ್ಯಾಪ್ತಿಯ ಪೊಲೀಸರು ಕ್ರಮ ಕೈಗೊಳ್ತಾರೆ ಎಂದು ಈ ಪರಮೇಶ್ವರ್​ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.