KGF ಬಾಬುಗೆ ಆರ್ಟಿಓ ಶಾಕ್: ಬಿಗ್ ಬಿ, ಆಮೀರ್ ಖಾನ್ರಿಂದ ಖರೀದಿಸಿದ್ದ ಐಷಾರಾಮಿ ಕಾರು ಜಪ್ತಿ!
ಕೆಜಿಎಫ್ ಬಾಬುಗೆ ಸೆಲೆಬ್ರಿಟಿಗಳು ಬಳಕೆ ಮಾಡಿದ ಕಾರುಗಳನ್ನು ಖರೀದಿ ಮಾಡುವ ಕ್ರೇಜ್ ಇದೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳ ಕಾರು ಎಂದರೆ ಅವರು ಖರೀದಿಸಿ ತರುತ್ತಾರೆ.

ಬೆಂಗಳೂರು: ಕೆಜಿಎಫ್ ಬಾಬು ನಿವಾಸದ ಮೇಲೆ ಆರ್ ಟಿಒ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. kgf ಬಾಬು ಅವರ ಬಳಿಯಿದ್ದ ಐಷಾರಾಮಿ ಕಾರುಗಳನ್ನು ಸೀಜ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ವಸಂತ ನಗರದಲ್ಲಿರುವ ಕೆಜಿ ಎಫ್ ಬಾಬು ಅವರ ರುಕ್ಸಾನಾ ಪ್ಯಾಲೇಸ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಐಷಾರಾಮಿ ಕಾರುಗಳಿಗೆ ತೆರಿಗೆ ಕಟ್ಟದ ಹಿನ್ನೆಲೆಯಲ್ಲಿ ಆರ್ ಟಿಓ ಅಧಿಕಾರಿಗಳು ಕೆಜಿಎಫ್ ಬಾಬು ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಕೆಜಿಎಫ್ ಬಾಬುಗೆ ಸೆಲೆಬ್ರಿಟಿಗಳು ಬಳಕೆ ಮಾಡಿದ ಕಾರುಗಳನ್ನು ಖರೀದಿ ಮಾಡುವ ಕ್ರೇಜ್ ಇದೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳ ಕಾರು ಎಂದರೆ ಅವರು ಖರೀದಿಸಿ ತರುತ್ತಾರೆ. ಕೆಜಿಎಫ್ ಬಾಬು ಬಳಿ ಎರಡು ರೋಲ್ಸ್ ರಾಯ್ಸ್ ಕಾರಿದೆ. ಅಮಿತಾಭ್ ಬಚ್ಚನ್ ಬಳಸುತ್ತಿದ್ದ MH 11 AX 1 ಹಾಗೂ ಆಮಿರ್ ಖಾನ್ ಒಂದು ವರ್ಷ ಮಾತ್ರ ಬಳಸಿದ್ದ MH 02 BB 2 ಸಂಖ್ಯೆಯ ಕಾರನ್ನು ಕೆಜಿಎಫ್ ಬಾಬು ಖರೀದಿಸಿ ತಂದಿದ್ದರು.
ಈಗ ಬಾಬು ತೆರಿಗೆ ಕಟ್ಟದ ಕಾರಣ ಆರ್ಟಿಒ ಜಂಟಿ ಆಯುಕ್ತೆ ಶೋಭಾ ನೇತೃತ್ವದ ತಂಡ ಬಾಬು ಮನೆಯ ಮೇಲೆ ದಾಳಿ ನಡೆಸಿತು. ಈ ವೇಳೆ ಗೇಟ್ ತೆಗೆಯದೆ ಕೆಜಿಎಫ್ ಬಾಬು ಮೊಂಡಾಟ ಪ್ರದರ್ಶಿಸಿದರು.
ನಾನು ಟ್ಯಾಕ್ಸ್ ಕಟ್ಟಲು ಸಿದ್ಧನಿದ್ದೇನೆ. ನನ್ನ ಎರಡು ಕಾರುಗಳಿಗೆ ಮಹಾರಾಷ್ಟ್ರದಲ್ಲಿ ನೋಂದಣಿ ಆಗಿದೆ. 2 ಕಾರುಗಳಿಗೆ ಮಹಾರಾಷ್ಟ್ರದಲ್ಲಿ ಲೈಫ್ಟೈಮ್ ಟ್ಯಾಕ್ಸ್ ಕಟ್ಟಿದ್ದೇನೆ. ಈಗ RTO ಅಧಿಕಾರಿಗಳು ಕರ್ನಾಟಕ ತೆರಿಗೆ ಕಟ್ಟಿ ಎನ್ನುತ್ತಿದ್ದಾರೆ. ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಟ್ಯಾಕ್ಸ್ ಕಟ್ಟದೇ ಇರಲ್ಲ. ಆರ್ಟಿಒ ಈಗ ಅವಕಾಶ ಕೊಟ್ಟರೆ ಈಗಲೇ ತೆರಿಗೆ ಕಟ್ಟುತ್ತೇನೆ’ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



