'ನನ್ನ ಹೆಂಡತಿಯ ಕಾಟ ತಾಳಲಾರದೆ ಸತ್ತೆನು'; ಶವಪೆಟ್ಟಿಗೆ ಮೇಲೆ ಪ್ರಿಂಟ್, ವ್ಯಕ್ತಿ ಆತ್ಮಹತ್ಯೆ!
ರಾಜ್ಯದಲ್ಲಿ ಇತ್ತೀಚೆಗೆ ಪತ್ನಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನು ಪತ್ನಿ ಕಿರುಕುಳ ತಾಳಲಾರದೆ ಡೆತ್ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಚಾಮುಂಡೇಶ್ವರಿನಗರದಲ್ಲಿ ನಡೆದಿದೆ.

ಹುಬ್ಬಳ್ಳಿ: ರಾಜ್ಯದಲ್ಲಿ ಇತ್ತೀಚೆಗೆ ಪತ್ನಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನು ಪತ್ನಿ ಕಿರುಕುಳ ತಾಳಲಾರದೆ ಡೆತ್ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಚಾಮುಂಡೇಶ್ವರಿನಗರದಲ್ಲಿ ನಡೆದಿದೆ.
ಪತ್ನಿ ಕಿರುಕುಳದಿಂದ ಬೇಸತ್ತು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ 40 ವರ್ಷದ ಪೀಟರ್ ಸ್ಯಾಮುಯೆಲ್ ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಕೆಲ ದಿನಗಳಿಂದ ಪತಿ ಪೀಟರ್, ಪತ್ನಿ ಪಿಂಕಿ ನಡುವೆ ಜಗಳವಾಗುತ್ತಿತ್ತು. ಹೀಗಾಗಿ ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಪತಿಯಿಂದ ಪತ್ನಿ ಪಿಂಕಿ 20 ಲಕ್ಷ ರೂಪಾಯಿ ಜೀವನಾಂಶಕ್ಕೆ ಒತ್ತಾಯಿಸುತ್ತಿದ್ದಳು ಎಂಬುದು ವರದಿಯಾಗಿದೆ.
ವಿಪರ್ಯಾಸವೆಂದರೆ, ಪೀಟರ್ ಸಾಯುವ ಮುನ್ನ ಡೆಟ್ ನೋಟ್ ಬರೆದಿಟ್ಟಿದ್ದು ಡ್ಯಾಡಿ ಆಯಮ್ ಸಾರಿ. ಪಿಂಕಿ(ಹೆಂಡತಿ) ಇಸ್ ಕಿಲ್ಲಿಂಗ್ ಮೀ, ಸೀ ವಾಂಟ್ ಮೈ ಡೆಥ್ ಎಂದು ಡೆತ್ನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಪೀಟರ್ ಸಂಬಂಧಿಕರು, ಶವ ಸಂಸ್ಕಾರ ಪೆಟ್ಟಿಗೆ ಮೇಲೆ ಹೆಂಡತಿ ಕಾಟ ತಾಳಲಾರದೆ ಸತ್ತನು ಎಂದು ಬರೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


