ರಾಜ್ಯ

ನಿರ್ವಹಣಾ ವೆಚ್ಚ ಹೆಚ್ಚಳ ಕಾರಣ ಬೆಂಗಳೂರು ಮೆಟ್ರೋ ರೈಲು ಪ್ರಯಾಣ ದರದಲ್ಲಿ ಭಾರಿ ಏರಿಕೆ ಸಾಧ್ಯತೆ!

ಅಧಿಕಾರಿಗಳ ಪ್ರಕಾರ, ಕಾರ್ಯಾಚರಣೆ ವೆಚ್ಚ ಘಾತೀಯವಾಗಿ ಹೆಚ್ಚಾಗಿದೆ, ಈ ಕಾರಣದಿಂದಾಗಿ ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ.

ನಿರ್ವಹಣಾ ವೆಚ್ಚ ಹೆಚ್ಚಳ ಕಾರಣ ಬೆಂಗಳೂರು ಮೆಟ್ರೋ ರೈಲು ಪ್ರಯಾಣ ದರದಲ್ಲಿ ಭಾರಿ ಏರಿಕೆ ಸಾಧ್ಯತೆ!
ನಮ್ಮ ಮೆಟ್ರೋ — online desk
Published On :

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಗಣನೀಯ ದರ ಏರಿಕೆಗೆ ಸಜ್ಜಾಗಿದ್ದು, ಕಾರ್ಯಾಚರಣೆ ವೆಚ್ಚ ಹೆಚ್ಚಾಗುತ್ತಿರುವುದರಿಂದ ಶುಲ್ಕ ಹೆಚ್ಚಳಕ್ಕೆ ಸಿದ್ಧತೆ ನಡೆಸಿದೆ ಎಂದು ಮೂಲಗಳು ಭಾನುವಾರ ತಿಳಿಸಿವೆ.

ಬಿಎಂಆರ್‌ಸಿಎಲ್ ಮೂಲಗಳ ಪ್ರಕಾರ, ಈ ಹೆಚ್ಚಳ ಶೇಕಡಾ 30 ರಿಂದ 40 ರವರೆಗೆ ಇರುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ಯ ಸಾರಿಗೆ ಇಲಾಖೆಯು ಎಲ್ಲಾ ವಿಭಾಗಗಳಲ್ಲಿ ಬಸ್ ದರವನ್ನು ಶೇಕಡಾ 15 ರಷ್ಟು ಹೆಚ್ಚಿಸಿದ ಬೆನ್ನಲ್ಲೇ ಬಿಎಂಆರ್ ಸಿಎಲ್ ದರ ಏರಿಕೆಯ ಪ್ರಸ್ತಾಪವೂ ಬಂದಿದೆ.

"ಬಿಎಂಆರ್‌ಸಿಎಲ್ ಮಂಡಳಿಯು ಪ್ರಯಾಣ ದರ ಹೆಚ್ಚಳವನ್ನು ಬಹುತೇಕ ಅನುಮೋದಿಸಿದೆ ಮತ್ತು ಪರಿಷ್ಕೃತ ದರ ಈ ತಿಂಗಳಲ್ಲೇ ಜಾರಿಗೆ ಬರುವ ಸಾಧ್ಯತೆಯಿದೆ" ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಕಾರ್ಯಾಚರಣೆ ವೆಚ್ಚ ಘಾತೀಯವಾಗಿ ಹೆಚ್ಚಾಗಿದೆ, ಈ ಕಾರಣದಿಂದಾಗಿ ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ.

"ನಮಗೆ ವಿವಿಧ ಏಜೆನ್ಸಿಗಳು ಮತ್ತು ಹಣಕಾಸು ಸಂಸ್ಥೆಗಳು ಹಣಕಾಸು ಒದಗಿಸುತ್ತಿವೆ ಮತ್ತು ನಾವು ಆ ಸಾಲಗಳನ್ನು ತೆರವುಗೊಳಿಸಬೇಕಾಗಿದೆ. ಆದ್ದರಿಂದ, ಹೆಚ್ಚಳ ಅನಿವಾರ್ಯ" ಎಂದು ಅಧಿಕಾರಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.