ಉದಯಗಿರಿ ಗಲಭೆ ಪ್ರಕರಣ: ಸತೀಶ್ ಗಡಿಪಾರು ಮಾಡಿದ್ರೆ ಸಹಿಸೋದಿಲ್ಲ; ಸರ್ಕಾರಕ್ಕೆ ಪ್ರಮೋದ್ ಮುತಾಲಿಕ್ ಎಚ್ಚರಿಕೆ
ಮುಸ್ಲಿಮರು ಸೆಕ್ಸ್ ಸ್ಕ್ಯಾಂಡಲ್, ಡ್ರಗ್ ಮಾಫಿಯಾ, ಗಾಂಜಾ, ಗ್ಯಾಸ್ ಫಿಲ್ಲಿಂಗ್, ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಮೌಲ್ವಿಯನ್ನು ಗಡಿಪಾರು ಮಾಡಬೇಕು. ಅದನ್ನ ಬಿಟ್ಟು ಸತೀಶ್ ಗಡಿಪಾರು ಮಾಡಿದ್ರೆ ನಾವು ಸಹಿಸೋದಿಲ್ಲ.

ಮೈಸೂರು: ಉದಯಗಿರಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಗಡಿಪಾರು ಮಾಡಲು ಪೊಲೀಸರು ಚಿಂತನೆ ನಡೆಸುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮರು ಸೆಕ್ಸ್ ಸ್ಕ್ಯಾಂಡಲ್, ಡ್ರಗ್ ಮಾಫಿಯಾ, ಗಾಂಜಾ, ಗ್ಯಾಸ್ ಫಿಲ್ಲಿಂಗ್, ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಮೌಲ್ವಿಯನ್ನು ಗಡಿಪಾರು ಮಾಡಬೇಕು. ಅದನ್ನ ಬಿಟ್ಟು ಸತೀಶ್ ಗಡಿಪಾರು ಮಾಡಿದ್ರೆ ನಾವು ಸಹಿಸೋದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಗುಂಡಾ ಪ್ರವೃತ್ತಿ ಕಿಡಿಗೇಡಿಗಳ ಪ್ರೋತ್ಸಾಹಕ್ಕೆ ಕಾಂಗ್ರೆಸ್ ಕಾರಣ. ಶ್ರೀರಾಮಸೇನಾ ಸಂಘಟನೆ ಇದನ್ನು ಖಂಡಿಸುತ್ತದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಘಟನೆಗಳ ನಂತರ ಉದಯಗಿರಿಯಲ್ಲಿ ಇಂತಹದ್ದೇ ಘಟನೆ ನಡೆದಿದೆ. ತಮ್ಮ ಏರಿಯಾದಲ್ಲಿ ಇರುವ ಹಿಂದೂಗಳನ್ನು ಓಡಿಸುವುದು. ಕಳ್ಳದಂಧೆ ಕಾನೂನು ಬಾಹಿರ ಕಾರ್ಯ ಮುಂದುವರೆಸುವುದು. ಪೊಲೀಸರಿಗೆ ಭಯ ಹುಟ್ಟಿಸುವ ಕೆಲಸ ಮುಸ್ಲಿಮರಿಂದ ನಡೆಯುತ್ತಿದೆ. ಕಾನೂನು ಬಾಹಿರ ಪಿಸ್ತೂಲ್ ಮಾರಾಟ, ಗಾಂಜಾ ಅಫೀಮು ಮಾರಾಟ, ಹೆಲ್ಮೆಟ್ ಇಲ್ಲದೆ ಮೂರು ಜನರು ವಾಹನ ಸವಾರಿ ಮಾಡುವುದು, ಉದಯಗಿರಿಯಲ್ಲಿ ಕಾನೂನು ಇಲ್ಲವೆ? ಕಾನೂನು ಮುಸ್ಲಿಮರಿಗೆ ಇಲ್ಲವೇ? ಅವರಿಗೆ ಗೊತ್ತು ಏನು ಮಾಡಿದರೂ ಕೇಸ್ ವಾಪಸ್ ತೆಗೆದುಕೊಳ್ಳುತ್ತಾರೆ ಎಂದು. ಹಾಗಾಗಿ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಎಫ್‌ಐಆರ್ ನಲ್ಲಿ ಸಾವಿರ ಜನರು ಇದ್ದಾರೆ ಆದರೆ ಎಷ್ಟು ಜನರನ್ನು ಬಂಧನಕ್ಕೊಳಪಡಿಸಿದ್ದೀರಿ? ಏಕೆ ತಡ ಮಾಡುತ್ತಿದ್ದಾರೆ? ಮುಸ್ಲಿಮರ ತುಷ್ಠೀಕರಣ ಕಾಂಗ್ರೆಸ್ ನಿಂದ ನಡೆಯುತ್ತಿದೆ. ಕಾಂಗ್ರೆಸ್ ನವರು ಕಲ್ಲು ಹೊಡೆದವರ ಬಗ್ಗೆ ಮಾತನಾಡಲ್ಲ. ಸತೀಶ್ ಬಗ್ಗೆ ಮಾತನಾಡುತ್ತಾರೆ. ಸತೀಶ್ ಡ್ರೈ ಫ್ರೂಟ್ ಫ್ಯಾಕ್ಟರಿ ಯಲ್ಲಿ 150 ಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರಿಗೆ ಕೆಲಸವನ್ನು ಕೊಟ್ಟಿದ್ದಾನೆ. ಈ ಸ್ಟೇಟಸ್ ಅವರು ಹಾಕೇ ಇಲ್ಲ. ಪೊಲೀಸರಿಗೆ ಭಯ ಹುಟ್ಟಿಸುವ ಷಡ್ಯಂತ್ರ ನಡೆಯುತ್ತಿದೆ. ಮೌಲ್ವಿ ಗಡಿಪಾರು ಮಾಡದೇ, ಸತೀಶ್ ರನ್ನು ಗಡಿಪಾರು ಮಾಡುತ್ತೀರಾ? ಈ ಬಗ್ಗೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಹಿಂದೂ ವಿರೋಧಿ ಸರ್ಕಾರ, ಕೂಡಲೇ ತಿದ್ದುಕೊಳ್ಳಿ ಇಲ್ಲದಿದ್ದರೆ ಕಾಂಗ್ರೆಸ್ ಅನ್ನು ಓಡಿಸಬೇಕಾಗುತ್ತದೆ. ಕಾಂಗ್ರೆಸ್‌ನವರು ಮುಸ್ಲಿಂ ರಕ್ಷಕರು ಅವರು ಏನೇ ಮಾಡಿದರು ತಡೆಯಲ್ಲ. ನೀವು ತಡೆಯದಿದ್ದರೆ ನಾವು ಬೀದಿಯಲ್ಲಿ ನಿಲ್ಲಬೇಕಾಗುತ್ತದೆ. ಲಕ್ಷ್ಮಣ್ ತಮ್ಮ ಹೇಳಿಕೆಯನ್ನು ಗಮನವನ್ನು ಇಟ್ಟು ಮಾತನಾಡಲಿ, ಬಾಯಿಗೆ ಬಂದದ್ದನ್ನು ಬೊಗಳುವುದಲ್ಲ. ಆರ್‌ಎಸ್‌ಎಸ್‌ನವರು ಅಲ್ಲೇಕೆ ಬರುತ್ತಾರೆ. ಸಿಸಿಟಿವಿಯಲ್ಲಿ ಇದ್ದರೆ ತೋರಿಸಿ. ವಾಸ್ತವಿಕವಾಗಿ ಮಾತನಾಡಿ ಎಂದು ವಾಗ್ದಾಳಿ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



