ರಾಜ್ಯ

ದಾವಣಗೆರೆ: ಮದುವೆಯಾಗಿ ಎರಡು ಮಕ್ಕಳಿದ್ದರೂ ಪ್ರಿಯಕರನ ಜೊತೆ ಪತ್ನಿ ಅನೈತಿಕ ಸಂಬಂಧ; ನೊಂದು ಪತಿ ನೇಣಿಗೆ ಶರಣು!

ಬಸವರಾಜ್ ಮತ್ತು ಉಮಾ ಮದುವೆಯಾಗಿ ಆರು ವರ್ಷಗಳಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈಗಿದ್ದರೂ ಉಮಾ ಪ್ರಿಯಕರನ ಸಹವಾಸ ಮುಂದುವರೆಸಿದ್ದಳು.

ದಾವಣಗೆರೆ: ಮದುವೆಯಾಗಿ ಎರಡು ಮಕ್ಕಳಿದ್ದರೂ ಪ್ರಿಯಕರನ ಜೊತೆ ಪತ್ನಿ ಅನೈತಿಕ ಸಂಬಂಧ; ನೊಂದು ಪತಿ ನೇಣಿಗೆ ಶರಣು!
ಸಂಗ್ರಹ ಚಿತ್ರ
Published On :

ದಾವಣಗೆರೆ: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ದಾವಣೆಗರೆಯ ಜಗಳೂರು ಪಟ್ಟಣದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು 37 ವರ್ಷದ ಬಸವರಾಜ್ ಎಂದು ಗುರುತಿಸಲಾಗಿದೆ. ಡೆಟ್ ನೋಟ್ ಬರೆದಿಟ್ಟು ಬಸವರಾಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆಟ್ ನೋಟ್ ನಲ್ಲಿ ನನ್ನ ಸಾವಿಗೆ ನನ್ನ ಪತ್ನಿ ಉಮಾ ಹಾಗೂ ಆಕೆಯ ಪ್ರಿಯಕರ ಕಾರಣ. ಇಬ್ಬರು ಕಠಿಣ ಶಿಕ್ಷೆಯಾಗಲಿದೆ. ನನ್ನಿಬ್ಬರು ಮಕ್ಕಳನ್ನು ನನ್ನ ಸಹೋದರಿಗೆ ನೀಡಿ ಎಂದು ಬರೆದಿದ್ದಾರೆ.

ಬಸವರಾಜ್ ಮತ್ತು ಉಮಾ ಮದುವೆಯಾಗಿ ಆರು ವರ್ಷಗಳಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈಗಿದ್ದರೂ ಉಮಾ ಪ್ರಿಯಕರನ ಸಹವಾಸ ಮುಂದುವರೆಸಿದ್ದಳು. ಅವನ ಸಹವಾಸ ಬಿಟ್ಟುಬಿಡು ಎಂದು ಎಷ್ಟೇ ಹೇಳಿದರೂ ಕೇಳದೆ ಅವನ ಜೊತೆ ಅನೈತಿಕ ಸಂಬಂಧ ಮುಂದುವರೆಸಿದ್ದಳು. ಹೀಗಾಗಿ ಮನನೊಂದು ಬಸವರಾಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ಪ್ರಕರಣ ಸಂಬಂಧ ಪೊಲೀಸರು ಉಮಾಳನ್ನು ಬಂಧಿಸಿದ್ದು ಆಕೆಯ ಪ್ರಿಯಕರನಿಗಾಗಿ ಶೋಧ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.