ರಾಜ್ಯ

ಪತ್ರಕರ್ತ ಹೆಚ್. ದೇಶಾದ್ರಿ ಸೇರಿದಂತೆ ಏಳು ಮಂದಿ ರಾಜ್ಯ ಚಲನಚಿತ್ರ ಅಕಾಡೆಮಿ ಸದಸ್ಯರಾಗಿ ನೇಮಕ

ಪತ್ರಿಕೋದ್ಯಮ, ಸಿನಿಮಾ ಕ್ಷೇತ್ರದ ಪ್ರತಿನಿಧಿಗಳನ್ನು ಸಾಮಾನ್ಯ ಸಮಿತಿಗೆ ಸದಸ್ಯರನ್ನು ನೇಮಕ ಮಾಡಲಾಗಿದೆ.

ಪತ್ರಕರ್ತ ಹೆಚ್. ದೇಶಾದ್ರಿ ಸೇರಿದಂತೆ ಏಳು ಮಂದಿ ರಾಜ್ಯ ಚಲನಚಿತ್ರ ಅಕಾಡೆಮಿ ಸದಸ್ಯರಾಗಿ ನೇಮಕ
ಕರ್ನಾಟಕ ಚಲನಚಿತ್ರ ಅಕಾಡೆಮಿ ಲೊಗೊ
Published On :

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಸದಸ್ಯರಾಗಿ ಏಳು ಮಂದಿಯನ್ನು ನೇಮಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಪತ್ರಿಕೋದ್ಯಮ, ಸಿನಿಮಾ ಕ್ಷೇತ್ರದ ಪ್ರತಿನಿಧಿಗಳನ್ನು ಸಾಮಾನ್ಯ ಸಮಿತಿಗೆ ಸದಸ್ಯರನ್ನು ನೇಮಕ ಮಾಡಲಾಗಿದೆ.

ಹಿರಿಯ ಪತ್ರಕರ್ತರಾದ ಕೊಪ್ಪಳದ ಸಾವಿತ್ರಿ ಮಜುಂದಾರ್, ಶಿವಮೊಗ್ಗದ ನಮ್ಮ ನಾಡು ಕನ್ನಡ ಡೈಲಿಯ ಸಿನಿಮಾ ವಿಶ್ಲೇಷಕ ಹೆಚ್ ದೇಶಾದ್ರಿ, ಚಿದಾನಂದ ಪಟೇಲ್ ಹಾಗೂ ಸಿನಿಮಾ ಕಲಾವಿದರಾದ ನಿಖಿತಾಸ್ವಾಮಿ, ಸಿನಿಮಾ ಪ್ರಚಾರ ಡಿ.ಜಿ. ವೆಂಕಟೇಶ್, ಚಿತ್ರೋದ್ಯಮಿ ವಿಷ್ಣು ಕುಮಾರ್ ಹಾಗೂ ಸಿನಿಮಾ ತಂತ್ರಜ್ಞರಾದ ಐವಾನ್ ಡಿಸಿಲ್ವ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಚಲನಚಿತ್ರ ಅಕಾಡೆಮಿಯ ಸಾಮಾನ್ಯ ಸಮಿತಿಯ ಸದಸ್ಯರುಗಳನ್ನಾಗಿ ನೇಮಿಸಲಾಗಿದೆ.

ಸರ್ಕಾರದ ಮುಂದಿನ ಆದೇಶದವರೆಗೂ ನೂತನ ಸದಸ್ಯರು ರಾಜ್ಯ ಚಲನಚಿತ್ರ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಕನ್ನಡ ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರದ ಆದೇಶ ಪತ್ರ
ಸರ್ಕಾರದ ಆದೇಶ ಪತ್ರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.