ರಾಜ್ಯ

ಪ್ರಯಾಣಿಕರಿಗೆ ಬಿಗ್ ಶಾಕ್!: Namma Metro ಪ್ರಯಾಣ ದರದಲ್ಲಿ ಭಾರಿ ಏರಿಕೆ; ನಾಳೆಯಿಂದಲೇ ಜಾರಿ

ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿ ದೇಶದ ಇತರ ರಾಜ್ಯಗಳು, ಸಿಂಗಪುರದ ಮೆಟ್ರೋ ಪರಿಷ್ಕರಣೆ ಕ್ರಮವನ್ನು ಅಧ್ಯಯನ ಮಾಡಿ ದರ ಪರಿಷ್ಕರಣೆ ಮಾಡಿದೆ.

ಪ್ರಯಾಣಿಕರಿಗೆ ಬಿಗ್ ಶಾಕ್!: Namma Metro ಪ್ರಯಾಣ ದರದಲ್ಲಿ ಭಾರಿ ಏರಿಕೆ; ನಾಳೆಯಿಂದಲೇ ಜಾರಿ
ನಮ್ಮ ಮೆಟ್ರೋ — online desk
Published On :

ಬೆಂಗಳೂರು: Namma Metro ಪ್ರಯಾಣ ದರ ಕೊನೆಗೂ ಏರಿಕೆಯಾಗಿದ್ದು ಈ ಬಗ್ಗೆ BMRCL ಅಧಿಕೃತ ಆದೇಶ ಪ್ರಕಟಿಸಿದೆ.

ಪ್ರಯಾಣ ದರ ಶೇ.46 ರಷ್ಟು ಏರಿಕೆ ಮಾಡಲಾಗಿದೆ. ಇನ್ಮುಂದೆ ಪ್ರಯಾಣ ದರ ಕನಿಷ್ಠ 10 ರೂ ನಿಂದ 90 ರೂಪಾಯಿ ವರೆಗೆ ಇರಲಿದೆ. ಕಳೆದ ಕೆಲವು ದಿನಗಳಿಂದ ಪ್ರಯಾಣ ದರದ ಬಗ್ಗೆ ಚರ್ಚೆ ಸಭೆಗಳು ನಡೆದಿತ್ತು. 8 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಯಾಣ ದರ ಏರಿಕೆಯಾಗಿದೆ. ಪರಿಷ್ಕೃತ ದರ ನಾಳೆ (ಫೆ.9 ರಿಂದ) ಯಿಂದ ಜಾರಿಗೆ ಬರಲಿದೆ.

ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿ ದೇಶದ ಇತರ ರಾಜ್ಯಗಳು, ಸಿಂಗಪುರದ ಮೆಟ್ರೋ ಪರಿಷ್ಕರಣೆ ಕ್ರಮವನ್ನು ಅಧ್ಯಯನ ಮಾಡಿ ದರ ಪರಿಷ್ಕರಣೆ ಮಾಡಿದೆ. 2017 ರಲ್ಲಿ 10% -15%ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಮೆಟ್ರೋ ಕಾಮಗಾರಿಗಾಗಿ ಸಾಲದ ಮೇಲಿನ ಬಡ್ಡಿ, ಕಾರ್ಯಾಚರಣೆ ವೆಚ್ಚ, ನಿರ್ವಹಣೆ ಮತ್ತು ಸಿಬ್ಬಂದಿ ವೇತನ ಮತ್ತಿತರ ವಿವಿಧ ವೆಚ್ಚ ಪ್ರತಿ ವರ್ಷ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯ ಎಂದು ಅಧಿಕಾರಿಗಳು ಹೇಳಿದ್ದರು.

Story image

ಇತ್ತೀಚೆಗೆ ಮೆಟ್ರೋ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿತ್ತು. ಈಗ ಅಂತಿಮವಾಗಿ ದರ ಏರಿಕೆ ಮಾಡಲಾಗಿದೆ. ವಿಶೇಷ ದಿನಗಳಲ್ಲಿ, ನಾನ್ ಪೀಕ್ ಅವರ್‌ಗಳಲ್ಲಿ, ಡಿಸ್ಕೌಂಟ್ ನೀಡಲು ಸಮಿತಿ ಶಿಫಾರಸು ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.