ಬೆಳಗಾವಿಯಲ್ಲಿ ಹೂಡಿಕೆದಾರರಿಗೆ ವಂಚನೆ: ಮೂವರ ವಿರುದ್ಧ ಕೇಸ್ ದಾಖಲಿಸಿದ ಇಡಿ
ಜಾರಿ ನಿರ್ದೇಶನಾಲಯದ ಮಂಗಳೂರು ಉಪ ವಲಯ ಕಚೇರಿಯು PMLA, 2002 ರ ಅಡಿಯಲ್ಲಿ ಈ ಮೂವರು ವಿರುದ್ಧ ಕೇಸ್ ದಾಖಲಿಸಿರುವುದಾಗಿ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಮಂಗಳೂರು: ಬೆಳಗಾವಿಯಲ್ಲಿ ಹಲವು ಹೂಡಿಕೆದಾರರನ್ನು ವಂಚಿಸಿದ ಆರೋಪದ ಮೇಲೆ ಯಲ್ಲಪ್ಪ ಶಾಮ್ ಮಂಗುಟ್ಕರ್, ಶಿವಾನಂದ್ ದಾದು ಕುಂಭಾರ್ ಮತ್ತು ತಾನಾಜಿ ಶಾಮ್ ಮಂಗುಟ್ಕರ್ ವಿರುದ್ಧ ಜಾರಿ ನಿರ್ದೇಶನಾಲಯ(ED) ಡಿಸೆಂಬರ್ 16 ರಂದು ಮಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಪ್ರಾಸಿಕ್ಯೂಷನ್ ದೂರು (PC) ದಾಖಲಿಸಿದೆ.
ಜಾರಿ ನಿರ್ದೇಶನಾಲಯದ ಮಂಗಳೂರು ಉಪ ವಲಯ ಕಚೇರಿಯು PMLA, 2002 ರ ಅಡಿಯಲ್ಲಿ ಈ ಮೂವರು ವಿರುದ್ಧ ಕೇಸ್ ದಾಖಲಿಸಿರುವುದಾಗಿ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಳಗಾವಿ ನಗರದ ಸೈಬರ್ ಅಪರಾಧ, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯಲ್ಲಿ ಹಿಂದಿನ ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 406 ಮತ್ತು 420 ರ ಅಡಿಯಲ್ಲಿ ಕುಂಭಾರ್ ಮತ್ತು ಮಂಗುಟ್ಕರ್ ವಿರುದ್ಧ ಇಡಿ ತನಿಖೆ ಆರಂಭಿಸಿದೆ ಎಂದು ತಿಳಿಸಿದೆ.
"ಪ್ರಮುಖ ಆರೋಪಿಗಳಾದ ಯಲ್ಲಪ್ಪ ಶಾಮ್ ಮಂಗುಟ್ಕರ್ ಮತ್ತು ಶಿವಾನಂದ್ ದಾದು ಕುಂಭಾರ್, ತಾನಾಜಿ ಶಾಮ್ ಮಂಗುಟ್ಕರ್ ಅವರ ಸಹಾಯದಿಂದ, ಬೆಳಗಾವಿ ಮೂಲದ ಹಲವು ಹೂಡಿಕೆದಾರರಿಂದ ಸುಮಾರು 31.09 ಕೋಟಿ ರೂ. ಸಂಗ್ರಹಿಸಿರುವುದು ಇಡಿ ತನಿಖೆಯಿಂದ ತಿಳಿದುಬಂದಿದೆ.
ಕುಂಬಾರ್ ಅವರ ಉಕ್ಕು ಮತ್ತು ಸಿಮೆಂಟ್ ವ್ಯವಹಾರದಲ್ಲಿ ಈ ಹಣವನ್ನು ಬಳಸಿಕೊಳ್ಳಲು, ತಿಂಗಳಿಗೆ ಶೇ. 8 ವರೆಗೆ ಬಡ್ಡಿದರದ ಭರವಸೆ ನೀಡಿ, ಆರೋಪಿಗಳು ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿದ್ದಾರೆ ಎಂದು" ಇಡಿ ಹೇಳಿದೆ.
"ಆರೋಪಿಗಳು ಹೆಚ್ಚಾಗಿ ನಗದು ವಿಧಾನದ ಮೂಲಕ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಆರೋಪಿಗಳು ಭರವಸೆ ನೀಡಿದ ಬಡ್ಡಿ ಮತ್ತು ಬಂಡವಾಳವನ್ನು ಮರುಪಾವತಿಸದೆ ಹೂಡಿಕೆದಾರರನ್ನು ವಂಚಿಸಿದ್ದಾರೆ. ಆರೋಪಿಗಳು ತಮ್ಮ ಬ್ಯಾಂಕ್ ಖಾತೆಗಳ ಮೂಲಕ ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಹೆಚ್ಚಾಗಿ ವೈಯಕ್ತಿಕ ಉದ್ದೇಶಗಳಿಗಾಗಿ ಬಳಸಿಕೊಂಡಿದ್ದಾರೆ ಎಂದು ಇಡಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



