ರಾಜ್ಯ

KGF​ ಚಾಪ್ಟರ್​ 2 ಸಹ-ನಿರ್ದೇಶಕ ಕೀರ್ತನ್ ನಾಡಗೌಡ ಮಗ ಲಿಫ್ಟ್‌ನಲ್ಲಿ ಸಿಲುಕಿ ದಾರುಣ ಸಾವು..!

ಪುತ್ರನನ್ನು ಕಳೆದುಕೊಂಡ ನಿರ್ದೇಶಕರ ಕುಟುಂಬ ತೀವ್ರ ದುಃಖದಲ್ಲಿದೆ. ಈ ವಿಷಯ ತಿಳಿದ ನಂತರ, ಅನೇಕ ಚಲನಚಿತ್ರ ಮತ್ತು ರಾಜಕೀಯ ವ್ಯಕ್ತಿಗಳು ಕೀರ್ತನ್ ನಾಡಗೌಡ ಕುಟುಂಬಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

KGF​ ಚಾಪ್ಟರ್​ 2 ಸಹ-ನಿರ್ದೇಶಕ ಕೀರ್ತನ್ ನಾಡಗೌಡ ಮಗ ಲಿಫ್ಟ್‌ನಲ್ಲಿ ಸಿಲುಕಿ ದಾರುಣ ಸಾವು..!
ಕೀರ್ತನ್ ನಾಡಗೌಡ
Published On :

ಹೈದರಾಬಾದ್​​: ಕೆಜಿಎಫ್​ ಚಾಪ್ಟರ್​ 2 ಸಹ-ನಿರ್ದೇಶಕರಾದ ಕೀರ್ತನ್ ನಾಡಗೌಡ ಅವರ ನಾಲ್ಕು ವರ್ಷದ ಪುತ್ರ ಆಕಸ್ಮಿಕವಾಗಿ ಲಿಫ್ಟ್‌ನಲ್ಲಿ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ಸೋಮವಾರ ನಡೆದಿದೆ.

ಕೀರ್ತನ್ ನಾಡಗೌಡ ಮತ್ತು ಅವರ ಪತ್ನಿ ಸಮೃದ್ಧಿ ಪಟೇಲ್ ಅವರ ಪುತ್ರ ನಾಲ್ಕೂವರೆ ವರ್ಷದ ಚಿರಂಜೀವಿ ಸೋನಾರ್ಷ್ ಕೆ. ನಾಡಗೌಡ ಲಿಫ್ಟ್‌ನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.

ಪುತ್ರನನ್ನು ಕಳೆದುಕೊಂಡ ನಿರ್ದೇಶಕರ ಕುಟುಂಬ ತೀವ್ರ ದುಃಖದಲ್ಲಿದೆ. ಈ ವಿಷಯ ತಿಳಿದ ನಂತರ, ಅನೇಕ ಚಲನಚಿತ್ರ ಮತ್ತು ರಾಜಕೀಯ ವ್ಯಕ್ತಿಗಳು ಕೀರ್ತನ್ ನಾಡಗೌಡ ಕುಟುಂಬಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕೂಡ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಕೀರ್ತನ್ ನಾಡಗೌಡ ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಪ್ಯಾನ್ ಇಂಡಿಯಾ ದಾಖಲೆ ಬರೆದ ಕೆಜಿಎಫ್ ಚಿತ್ರಕ್ಕೆ ಎರಡನೇ ಸಹ-ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.