ಇಂಡಿಗೋ ವಿಮಾನಗಳ ರದ್ದು: ಸಂಕಷ್ಟಕ್ಕೆ ಸಿಲುಕಿದ ಪ್ರಯಾಣಿಕರಿಗಾಗಿ ನೈರುತ್ಯ ರೈಲ್ವೆ ವಿಶೇಷ ರೈಲುಗಳ ವ್ಯವಸ್ಥೆ!
ಪ್ರಯಾಣಿಕರು ರೈಲುಗಳ ಹೊಸ ವೇಳಾಪಟ್ಟಿಯನ್ನು ಪರಿಶೀಲಿಸಲು ಹಾಗೂ ನಿಲ್ದಾಣಗಳಿಗೆ ಮುಂಚಿತವಾಗಿ ಬರಲು ನೈರುತ್ಯ ರೈಲ್ವೆ ಸೂಚಿಸಿದೆ.

ಬೆಂಗಳೂರು: ದೇಶಾದ್ಯಂತ ಇಂಡಿಗೋ ವಿಮಾನಗಳ ರದ್ದತಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಶನಿವಾರ ಕೇಂದ್ರ, ಆಗ್ನೇಯ ಮತ್ತು ದಕ್ಷಿಣ ರೈಲ್ವೆಗಳ ಸಹಯೋಗದೊಂದಿಗೆ ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಿದೆ.
ಬೆಂಗಳೂರು- ಚೆನ್ನೈ, ಬೆಂಗಳೂರು- ಪುಣೆ, ಯಶವಂತಪುರ-ಹಜರತ್ ನಿಜಾಮುದ್ದೀನ್, ಶಾಲಿಮಾರ್-ಯಲಹಂಕ ಮತ್ತು ಎರ್ನಾಕುಲಂ- ಯಲಹಂಕ ಸೇರಿದಂತೆ ಹೆಚ್ಚಿನ ಬೇಡಿಕೆಯಲ್ಲಿರುವ ಮಾರ್ಗಗಳಲ್ಲಿ ಡಿಸೆಂಬರ್ 6 ಮತ್ತು 10 ರ ನಡುವೆ ವಿಶೇಷ ರೈಲುಗಳು ಕಾರ್ಯನಿರ್ವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕೃತ ಹೇಳಿಕೆಯ ಪ್ರಕಾರ, ಚೆನ್ನೈ ಎಗ್ಮೋರ್ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ರೈಲು ಸಂಖ್ಯೆ 06257/06258, ಬೆಂಗಳೂರು ಮತ್ತು ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ 06259/06260 ರೈಲು ಮತ್ತು ಬೆಂಗಳೂರು ಮತ್ತು ಪುಣೆ ನಡುವೆ 06263/06264 ರೈಲುಗಳನ್ನು ನೈರುತ್ಯ ರೈಲ್ವೆ ಓಡಿಸಲಿದೆ.
ಕೇಂದ್ರ ರೈಲ್ವೆ ಪುಣೆ ಮತ್ತು ಬೆಂಗಳೂರು ನಡುವೆ ರೈಲು ಸಂಖ್ಯೆ 01413/01414 ಓಡಿಸಲಿದ್ದು, ಆಗ್ನೇಯ ರೈಲ್ವೆ ಶಾಲಿಮಾರ್ ಮತ್ತು ಯಲಹಂಕ ನಡುವೆ ರೈಲು ಸಂಖ್ಯೆ 08073/08074 ಮತ್ತು ದಕ್ಷಿಣ ರೈಲ್ವೆ ಎರ್ನಾಕುಲಂ ಮತ್ತು ಯಲಹಂಕ ನಡುವೆ ರೈಲು ಸಂಖ್ಯೆ 06147/06148 ಅನ್ನು ಓಡಿಸಲಿದೆ ಎಂದು ಹೇಳಿಕೆ ತಿಳಿಸಿದೆ.
ಪ್ರಯಾಣಿಕರು ರೈಲುಗಳ ಹೊಸ ವೇಳಾಪಟ್ಟಿಯನ್ನು ಪರಿಶೀಲಿಸಲು ಹಾಗೂ ನಿಲ್ದಾಣಗಳಿಗೆ ಮುಂಚಿತವಾಗಿ ಬರಲು ನೈರುತ್ಯ ರೈಲ್ವೆ ಸೂಚಿಸಿದೆ.ಸತತ ಐದು ದಿನಗಳಿಂದ ಇಂಡಿಗೋ ವಿಮಾನ ರದ್ದತಿಯಿಂದ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಅನೇಕ ಸಂದರ್ಭಗಳಲ್ಲಿ ಲಗ್ಗೇಜುಗಳು ಕಳೆದುಹೋಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



