ರಾಜ್ಯ

Mysuru Zoo: ಮೈಸೂರು ಮೃಗಾಲಯದ ಆಕರ್ಷಣೆ ಸಿಂಹಿಣಿ 'ರಕ್ಷಿತಾ' ಸಾವು!

ವಯೋ ಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಸಿಂಹಿಣಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ.

Mysuru Zoo: ಮೈಸೂರು ಮೃಗಾಲಯದ ಆಕರ್ಷಣೆ ಸಿಂಹಿಣಿ 'ರಕ್ಷಿತಾ' ಸಾವು!
ಮೈಸೂರು ಮೃಗಾಲಯದಲ್ಲಿ ಸಿಂಹಿಣಿ ಸಾವು (ಸಾಂದರ್ಭಿಕ ಚಿತ್ರ) — Reuters
Published On :

ಮೈಸೂರು: ಮೈಸೂರು ಮೃಗಾಲಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದ ಸಿಂಹಿಣಿ 'ರಕ್ಷಿತಾ' ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

ಮೈಸೂರಿನಲ್ಲಿರುವ ಶ್ರೀ ಚಾಮರಾಜೇಂದ್ರ ಮೃಗಾಲಯದ ಸುಮಾರು 21 ವರ್ಷ 4 ತಿಂಗಳು ವಯಸ್ಸಿನ ಹೆಣ್ಣು ಸಿಂಹ 'ರಕ್ಷಿತ' ಸಿಂಹಿಣಿ ಇಂದು (ಶನಿವಾರ) ಬೆಳಿಗ್ಗೆ 7 ಗಂಟೆಗೆ ಸಾವನ್ನಪ್ಪಿದೆ. ವಯೋ ಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಸಿಂಹಿಣಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ.

ಅಂತೆಯೇ ಸಿಂಹಿಣಿ ರಕ್ಷಿತಾ ಸಾವಿಗೆ ಮೈಸೂರು ಮೃಗಾಲಯವು ತೀವ್ರ ಸಂತಾಪ ಸೂಚಿಸಿದೆ. ಈ ಸಿಂಹಿಣಿಯು ದಿನಾಂಕ 01/04/2004ರಂದು ಮೈಸೂರು ಮೃಗಾಲಯದಲ್ಲಿ ನರಸಿಂಹ ಮತ್ತು ಮಾನಿನಿ ಎಂಬ ಸಿಂಹಗಳಿಗೆ ಜನಿಸಿದ್ದು, ಮೈಸೂರು ಮೃಗಾಲಯದ ಆಕರ್ಷಣೆಗಳಲ್ಲಿ ಒಂದಾಗಿತ್ತು. ವಯೋಸಹಜ ಕಾಯಿಲೆಯಿಂದಾಗಿ ಈ ಸಿಂಹಿಣಿಯು ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿತ್ತು.

ಮೈಸೂರು ಮೃಗಾಲಯಕ್ಕೆ ‘ರಕ್ಷಿತ’ ಸಿಂಹಿಣಿಯ ಸಾವು ಅಪಾರ ನಷ್ಟವನ್ನುಂಟುಮಾಡಿದೆ. ಮೃಗಾಲಯದ ಆಡಳಿತ ವರ್ಗ, ಪಶುವೈದ್ಯಕೀಯ ತಂಡ ಮತ್ತು ಪ್ರಾಣಿಪಾಲನಾ ತಂಡ ರಕ್ಷಿತಳ ಸಾವಿಗೆ ತೀವ್ರ ಸಂತಾಪ ಸೂಚಿಸುತ್ತದೆ ಹಾಗೂ ರಕ್ಷಿತಾಳ ಚಿಕಿತ್ಸೆಯ ಸಂದರ್ಭದಲ್ಲಿ ಜಾಗತೀಕ ಪಶುವೈದ್ಯಕೀಯ ಸಮೂದಾಯ ಮತ್ತು ವನ್ಯಜೀವಿ ಸಂರಕ್ಷಕರು ನೀಡಿದ ಬೆಂಬಲವನ್ನು ಶ್ಲಾಘಿಸಿದೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.