ಟಿಪ್ಪು KRS ಡ್ಯಾಂ ಕಟ್ಟಿದ್ದ ಅಂತ ನಾನು ಎಲ್ಲಿಯೂ ಹೇಳಿಲ್ಲ: HC ಮಹಾದೇವಪ್ಪ
1911ರಲ್ಲಿ ಕೆಆರ್‌ಎಸ್ ಕಟ್ಟೋದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅಡಿಗಲ್ಲು ಹಾಕಿದರು. ಅವರು ಡ್ಯಾಂ ಕಟ್ಟಲು ಪ್ರಾರಂಭಿಸಿದಾಗ ಅಲ್ಲೊಂದು ಶಿಲಾ ಶಾಸನ ಸಿಕ್ಕಿತ್ತು. 1794ರಲ್ಲಿ ಟಿಪ್ಪು ಕಾಲದಲ್ಲಿ ಬರೆದ ಪರ್ಷಿಯನ್ ಭಾಷೆಯ ಶಿಲಾ ಶಾಸನ.

ಮೈಸೂರು: KRS ಅಣೆಕಟ್ಟು ನಿರ್ಮಾಣಕ್ಕೆ ಸಂಬಂಧಿಸಿದಂತೆ ನೀಡಿದ್ದ ತಮ್ಮ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಲೋಕೋಪಯೋಗಿ ಸಚಿವ ಎಚ್.ಸಿ ಮಹಾದೇವಪ್ಪ ಯೂ ಟರ್ನ್ ಹೊಡೆದಿದ್ದಾರೆ.
1911ರಲ್ಲಿ ಕೆಆರ್‌ಎಸ್ ಕಟ್ಟೋದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅಡಿಗಲ್ಲು ಹಾಕಿದರು. ಅವರು ಡ್ಯಾಂ ಕಟ್ಟಲು ಪ್ರಾರಂಭಿಸಿದಾಗ ಅಲ್ಲೊಂದು ಶಿಲಾ ಶಾಸನ ಸಿಕ್ಕಿತ್ತು. 1794ರಲ್ಲಿ ಟಿಪ್ಪು ಕಾಲದಲ್ಲಿ ಬರೆದ ಪರ್ಷಿಯನ್ ಭಾಷೆಯ ಶಿಲಾ ಶಾಸನ. ಅದರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಬೇಕು ಎಂಬ ಪ್ರಸ್ತಾಪ ಇದೆ. ಅದನ್ನೂ ಕೂಡ ಕೆಆರ್‌ಎಸ್‌ನಲ್ಲಿಯೇ ಇಡಲಾಗಿದೆ. ನಾನು ಎಲ್ಲಿಯೂ ಕೂಡ ಟಿಪ್ಪು ಡ್ಯಾಂ ಕಟ್ಟಿದ್ದ ಅಂತ ಹೇಳಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೆಆರ್ ಎಸ್ ಜಲಾಶಯವನ್ನು ಟಿಪ್ಪು ಕಟ್ಟಿದ್ದು ಅಲ್ಲವೇ ಅಲ್ಲ, ಆದರೆ ಟಿಪ್ಪುಗೂ ಕೂಡ ಅದೇ ರೀತಿಯ ಕನಸು ಇತ್ತು ಎಂಬುದಷ್ಟೇ ಹೇಳಿದ್ದು. ಇದರ ನೈಜತೆಯ ಬಗ್ಗೆ ಇತಿಹಾಸಕಾರರು ಹೇಳಬೇಕು. ಕೆಆರ್‌ಎಸ್ ಡ್ಯಾಂ ಕಟ್ಟಿದ್ದು ನಮ್ಮ ಇಂಜಿನಿಯರ್‌ಗಳು ಎಂದಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಡ್ಯಾಂನ ಎಸ್ಟಿಮೇಟ್ ಹಾಕಿ ಎಷ್ಟು ಜಮೀನು ಬೇಕು ಎಂದು ತೀರ್ಮಾನಿಸಿ ಕಟ್ಟಿದ್ದು. ಆದರೆ ನಾನು ಅಲ್ಲಿ ಇಟ್ಟಿರುವ ಶಿಲಾ ಶಾಸನದ ಬಗ್ಗೆ ಮಾತ್ರ ಹೇಳಿದ್ದೇನೆ. ಬಿಜೆಪಿಯವರು ಏನು ಬೇಕಾದರೂ ಟೀಕೆ ಮಾಡಿಕೊಳ್ಳಲಿ. ನಾನು ಅನಗತ್ಯ ಗೊಂದಲ ಇರಬಾರದು ಎಂದು ಮಾತ್ರ ಹೇಳಿದ್ದೇನೆ. ಯಾರನ್ನೋ ಓಲೈಸಲು ಸಮಾಧಾನಪಡಿಸಲು ಹೇಳಿಲ್ಲ ಎಂದು ಬಿಜೆಪಿಗರು, ರಾಜವಂಶಸ್ಥ ಯದುವೀರ್‌ಗೆ ಮಹದೇವಪ್ಪ ಟಾಂಗ್ ಕೊಟ್ಟಿದ್ದಾರೆ. ಕನ್ನಂಬಾಡಿ ಅಣೆಕಟ್ಟೆಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಸಚಿವ ಮಹದೇವಪ್ಪ ಹೇಳಿದ್ದರು, ಅವರ ಹೇಳಿಕೆಗೆ ವ್ಯಾಪಕ ಟೀಕೆ ಬಳಿಕ ಯೂಟರ್ನ್ ಹೊಡೆದಿದ್ದಾರೆ.

KRS: ಇತಿಹಾಸದ ಪುಟಗಳನ್ನು ಗಲೀಜು ಮಾಡಲು ಹೋಗ್ಬೇಡಿ; ಸಿಎಂ ಸಿದ್ದರಾಮಯ್ಯ, ಮಹಾದೇವಪ್ಪ ವಿರುದ್ಧ ವಿಜಯೇಂದ್ರ ಕಿಡಿ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


