ರಾಜ್ಯ

ಅಂಬೇಡ್ಕರ್‌ ಜಯಂತಿ, ಬುದ್ಧ ಪೂರ್ಣಿಮೆ: ಕಾರಾಗೃಹಗಳಲ್ಲಿ ಸಿಹಿ ವಿತರಣೆಗೆ ರಾಜ್ಯ ಸರ್ಕಾರ ಆದೇಶ

2014ರಿಂದ ವಿಶೇಷ ದಿನಗಳಲ್ಲಿ ಬಂದಿಗಳಿಗೆ ಸಿಹಿ ವಿತರಿಸುವ ಪದ್ಧತಿ ಜಾರಿಯಲ್ಲಿದೆ. ಗಣರಾಜ್ಯೋತ್ಸವ, ಯುಗಾದಿ, ರಂಜಾನ್‌, ಕ್ರಿಸ್‌ಮಸ್‌ ಸೇರಿ ರಾಷ್ಟ್ರೀಯ ಹಬ್ಬಗಳು ಹಾಗೂ ಪ್ರಮುಖ ಹಬ್ಬಗಳಂದು ಕೈದಿಗಳಿಗೆ ಸಿಹಿ ವಿತರಿಸಲಾಗುತ್ತಿದೆ.

ಅಂಬೇಡ್ಕರ್‌ ಜಯಂತಿ, ಬುದ್ಧ ಪೂರ್ಣಿಮೆ: ಕಾರಾಗೃಹಗಳಲ್ಲಿ ಸಿಹಿ ವಿತರಣೆಗೆ ರಾಜ್ಯ ಸರ್ಕಾರ ಆದೇಶ
ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳು (ಸಂಗ್ರಹ ಚಿತ್ರ)
Published On :

ಬೆಂಗಳೂರು: ಪ್ರತಿ ವರ್ಷ ಡಾ. ಬಿ.ಆರ್‌. ಅಂಬೇಡ್ಕರ್‌ ಜನ್ಮದಿನ (ಏ.14) ಮತ್ತು ಬುದ್ಧ ಪೂರ್ಣಿಮೆಯಂದು (ಮೇ 12) ರಾಜ್ಯದ ಎಲ್ಲಾ ಕಾರಾಗೃಹಗಳಲ್ಲಿರುವ ಕೈದಿಗಳಿಗೆ ಸಿಹಿ ವಿತರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

2014ರಿಂದ ವಿಶೇಷ ದಿನಗಳಲ್ಲಿ ಬಂದಿಗಳಿಗೆ ಸಿಹಿ ವಿತರಿಸುವ ಪದ್ಧತಿ ಜಾರಿಯಲ್ಲಿದೆ. ಗಣರಾಜ್ಯೋತ್ಸವ, ಯುಗಾದಿ, ರಂಜಾನ್‌, ಕ್ರಿಸ್‌ಮಸ್‌ ಸೇರಿ ರಾಷ್ಟ್ರೀಯ ಹಬ್ಬಗಳು ಹಾಗೂ ಪ್ರಮುಖ ಹಬ್ಬಗಳಂದು ಕೈದಿಗಳಿಗೆ ಸಿಹಿ ವಿತರಿಸಲಾಗುತ್ತಿದೆ.

ಇದರಂತೆ ಅಂಬೇಡ್ಕರ್‌ ಜಯಂತಿ, ಬುದ್ಧ ಪೂರ್ಣಿಮೆಯಂದೂ ಕಾರಾಗೃಹಗಳಲ್ಲಿ ಸಿಹಿ ವಿತರಣೆಗೆ ಆದೇಶ ಹೊರಡಿಸಲು ಸಾಮಾಜಿಕ ಹೋರಾಟಗಾರ ಟಿ.ನರಸಿಂಹಮೂರ್ತಿ ಅವರು ಸಿ.ಎಂ ಅವರಿಗೆ ಮನವಿ ಸಲ್ಲಿಸಿದ್ದರು.

ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಸಿ.ಎಂ ಟಿಪ್ಪಣಿ ಹೊರಡಿಸಿದ್ದರು. ಇದೀಗ ಗೃಹ ಇಲಾಖೆ ಅಂಬೇಡ್ಕರ್‌ ಜಯಂತಿ, ಬುದ್ಧ ಪೂರ್ಣಿಮೆಯಂದೂ ಕೈದಿಗಳಿಗೆ ಸಿಹಿ ವಿತರಿಸುವಂತೆ ಆದೇಶ ಹೊರಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.