ರಾಜ್ಯ

ಮಾಜಿ ಪ್ರಧಾನಿ ದೇವೇಗೌಡರ ಸಾವು ಬಯಸುವ ಶಿವರಾಮೇಗೌಡರದ್ದು ಹೀನ ಸಂಸ್ಕೃತಿ: Nikhil

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಸಾವು ಬಯಸುವ ಎಲ್ ಆರ್ ಶಿವರಾಮೇಗೌಡ ಅವರದ್ದು ಹೀನ ಸಂಸ್ಕೃತಿ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರ ಸಾವು ಬಯಸುವ ಶಿವರಾಮೇಗೌಡರದ್ದು ಹೀನ ಸಂಸ್ಕೃತಿ: Nikhil
ನಿಖಿಲ್ ಕುಮಾರಸ್ವಾಮಿ
Published On :

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಸಾವು ಬಯಸುವ ಎಲ್ ಆರ್ ಶಿವರಾಮೇಗೌಡ ಅವರದ್ದು ಹೀನ ಸಂಸ್ಕೃತಿ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ನಿಖಿಲ್, ಎಲ್ ಆರ್ ಶಿವರಾಮೇಗೌಡ ಮಾತಾಡುವಾಗ ಸಭ್ಯತೆ ಮರೆಯೋದು ಹೊಸದೇನಲ್ಲ, ಕೇಡು ಬಯಸಿ ಆಡಿರುವ ಮಾತಿನ ಆಡಿಯೋ ವೈರಲ್ ಆಗಿದೆ. ಶಿವರಾಮೇಗೌಡರ ಮಾತುಗಳನ್ನು ಕೇಳಿರುವ ಜನಕ್ಕೆ ಎಂಥ ರಾಜಕಾರಣಿ ಅಂತ ಗೊತ್ತಾಗಿದೆ .ವಿಷಯಾಧಾರಿತ ರಾಜಕಾರಣ ಮಾಡಿ ಗೊತ್ತಿರದ ಮತ್ತು ಒಬ್ಬ ಮಾಜಿ ಪ್ರಧಾನಿಯ ಹಾಗೂ ರಾಜ್ಯದ ಹಿರಿಯ ಮುತ್ಸದ್ದಿಯ ಸಾವು ಬಯಸುವ ಅವರೊಬ್ಬ ಸಂಸ್ಕೃತಿಹೀನ ವ್ಯಕ್ತಿ ಎಂದು ನಿಖಿಲ್ ಹೇಳಿದರು.

ಹೆಚ್ ಡಿ ಕುಮಾರಸ್ವಾಮಿಯವರಿಗೆ ಕೇವಲ ತಮ್ಮ ಮಗನ ಭವಿಷ್ಯದ ಬಗ್ಗೆ ಮಾತ್ರ ಯೋಚನೆ ಇದೆ ಅಂತಲೂ ಅವರು ಹೇಳಿದ್ದಾರೆ, ಆದರೆ ತಮ್ಮ ತಂದೆ ಯಾವತ್ತೂ ಹಾಗೆ ಯೋಚಿಸಿಲ್ಲ. ಬೇರೆಯವರ ಹಾಗೆ ಕುಮಾರಸ್ವಾಮಿಯವರು ಹೊಂದಾಣಿಕೆ ರಾಜಕಾರಣ ಮಾಡಿದ್ದರೆ, ತಾನು ಯಾವುದೋ ಉನ್ನತ ಸ್ಥಾನದಲ್ಲಿರುತ್ತಿದ್ದೆ, ರಾಜಕಾರಣದಲ್ಲಿ ಪರಿಶ್ರಮ ವಹಿಸಿ ತನ್ನ ಐಡೆಂಟಿಟಿ ಸೃಷ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವೆನೆಂದು ಹೇಳಿದರು. ರಾಜಕಾರಣ ಮಾಡಲಿ, ಆದರೆ ಈ ರೀತಿಯ ನೀಚ ರಾಜಕಾರಣ ಮಾಡಬಾರದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.