ಬೆಂಗಳೂರು: ಮೊಬೈಲ್ ಚಟಕ್ಕೆ ಬಿದ್ದಿದ್ದ ಸ್ವಂತ ತಮ್ಮನನ್ನೇ ಕೊಲೆ ಮಾಡಿದ ಅಣ್ಣನ ಬಂಧನ!
ಮೊಬೈಲ್ ಚಟಕ್ಕೆ ಬಿದ್ದಿದ್ದ ಸ್ವಂತ ತಮ್ಮನನ್ನೇ ಕೊಲೆ ಮಾಡಿದ ಅಣ್ಣನನ್ನು ಶನಿವಾರ ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಮೊಬೈಲ್ ಚಟಕ್ಕೆ ಬಿದ್ದಿದ್ದ ಸ್ವಂತ ತಮ್ಮನನ್ನೇ ಕೊಲೆ ಮಾಡಿದ ಅಣ್ಣನನ್ನು ಶನಿವಾರ ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ನೆರಿಗಾ ಗ್ರಾಮದ ನಿವಾಸಿ ಶಿವಕುಮಾರ್ ಎಂದು ಗುರುತಿಸಲಾಗಿದೆ.
15 ವರ್ಷದ ತನ್ನ ತಮ್ಮ ಪ್ರಾಣೇಶ್ ಮೊಬೈಲ್ ತೆಗೆದುಕೊಂಡು ದಿನವಿಡೀ ಗೇಮ್ ಆಡಿದ್ದಕ್ಕೆ ಆಕ್ರೋಶಗೊಂಡು ಆತನನ್ನು ಕೊಂದಿರುವುದಾಗಿ ಶಿವಕುಮಾರ್ ಸರ್ಜಾಪುರ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಪೊಲೀಸರ ಪ್ರಕಾರ, ಬುಧವಾರ ಬಹಿರ್ದೆಸೆಗೆ ತೆರಳಿದ್ದ ಏಳನೇ ತರಗತಿಯ ವಿದ್ಯಾರ್ಥಿ ಪ್ರಾಣೇಶ್ ಶವವಾಗಿ ಪತ್ತೆಯಾಗಿದ್ದಾನೆ.
ಪಾಲಕರು ಮಗನಿಗಾಗಿ ಹುಡುಕಾಟ ಆರಂಭಿಸಿದ ಬಳಿಕ ಶಿವಕುಮಾರ್, ಪ್ರಾಣೇಶ್ ನನ್ನು ಯಾರೋ ಕೊಲೆ ಮಾಡಿರುವುದಾಗಿ ತಿಳಿಸಿದ್ದು, ಶವ ನೋಡಿರುವುದಾಗಿ ಹೇಳಿದ್ದಾನೆ.
ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಸರ್ಜಾಪುರ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ವಿಚಾರಣೆ ವೇಳೆ ಶಿವಕುಮಾರ್ ಹೇಳಿಕೆ ಬದಲಾಯಿಸಿದ್ದಾನೆ. ಘಟನೆಯಲ್ಲಿ ಆತನ ಕೈವಾಡವಿದೆ ಎಂದು ಶಂಕಿಸಿದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಶಿವಕುಮಾರ್ ತನ್ನ ಸಹೋದರ ಪ್ರಾಣೇಶ್‌ನ ತಲೆ ಮತ್ತು ಹೊಟ್ಟೆಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ. ಶಿವಕುಮಾರ್ ಸುತ್ತಿಗೆಯನ್ನು ತೆಗೆದುಕೊಂಡು ಹೋಗುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಆಂಧ್ರದ ಕರ್ನೂಲ್ನಲ್ಲಿ ಅಜ್ಜಿ ಮನೆಯಲ್ಲೇ ಇದ್ದುಕೊಂಡು ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ಪ್ರಾಣೇಶ್, ಶಾಲೆಗೆ ಬೇಸಿಗೆ ರಜೆ ಹಿನ್ನೆಲೆ ತಂದೆ ತಾಯಿ ಇದ್ದ ನೆರಿಗಾ ಗ್ರಾಮಕ್ಕೆ ಬಂದಿದ್ದ. ಸಮಯ ಸಿಕ್ಕಾಗಲೆಲ್ಲ ಅಣ್ಣ ಶಿವಕುಮಾರ್ನ ಮೊಬೈಲ್ ತೆಗೆದುಕೊಂಡು ಆಟ ಆಡ್ತಿದ್ದ. ಇದು ಶಿವಕುಮಾರ್ಗೆ ಕೋಪ ತರಿಸಿತ್ತು. ಹೀಗಾಗಿ ಮೇ 15ರಂದು ತಮ್ಮ ಬಹಿರ್ದೆಸೆಗೆ ಹೋದಾಗ ಅವನನ್ನು ಹಿಂಬಾಲಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಪ್ರಾಣೇಶ್‌ನ ತಲೆ, ಹೊಟ್ಟೆ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



