ವರ್ಗಾವಣೆ ವಿಚಾರದಲ್ಲಿ ನನ್ನ ನಿಲುವು ಅಚಲ: ಸಚಿವರಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ
ಅಧಿಕೃತ ವರ್ಗಾವಣೆ ನೀತಿಯನ್ನು ಸರ್ಕಾರ ಶೀಘ್ರವೇ ಅಂತಿಮಗೊಳಿಸಲಿದೆ, ಆದರೆ ಯಾವುದೇ ನಿರ್ಬಂಧಗಳಿಲ್ಲದ ಕಾರಣ ಈಗಲೇ ವರ್ಗಾವಣೆಗೆ ಒಪ್ಪಿಗೆ ನೀಡುವಂತೆ ಕೆಲವು ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ನಡೆಯಿತು. ಸುಮಾರು 150 ನಿಮಿಷಗಳ ಕಾಲ ಮುಖ್ಯ ಕಾರ್ಯಸೂಚಿಗಳ ಬಗ್ಗೆ ಚರ್ಚಿಸಲಾಯಿತು. ನಂತರ ಸಂಪುಟ ಸಭೆಯ ಅಂತ್ಯದ ವೇಳೆಗೆ ವರ್ಗಾವಣೆಯ ವಿಷಯದ ಬಗ್ಗೆ ಚರ್ಚೆ ನಡೆಯಿತು.
ಅಧಿಕೃತ ವರ್ಗಾವಣೆ ನೀತಿಯನ್ನು ಸರ್ಕಾರ ಶೀಘ್ರವೇ ಅಂತಿಮಗೊಳಿಸಲಿದೆ, ಆದರೆ ಯಾವುದೇ ನಿರ್ಬಂಧಗಳಿಲ್ಲದ ಕಾರಣ ಈಗಲೇ ವರ್ಗಾವಣೆಗೆ ಒಪ್ಪಿಗೆ ನೀಡುವಂತೆ ಕೆಲವು ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು. ಆದರೆ ವರ್ಗಾವಣೆ ಮನವಿಯನ್ನು ಪುರಸ್ಕರಿಸುವುದಿಲ್ಲ ಎಂದು ಸಿಎಂ ದೃಢವಾಗಿ ಹೇಳಿದ್ದು, ಕಳೆದ ವರ್ಷ ವರ್ಗಾವಣೆ ವಿಚಾರವಾಗಿ ಸರ್ಕಾರದ ವಿರುದ್ಧ ನಕಾರತ್ಮಾತ ಟೀಕೆಗಳು ಬಂದಿದ್ದು, ಈಗ ಆ ವಿಚಾರವನ್ನು ಕೈಗೆತ್ತಿಕೊಳ್ಳದಿರುವುದು ಜಾಣತನ ಎಂದು ಸಚಿವರಿಗೆ ಸಿಎಂ ಎಚ್ಚರಿಕೆ ನೀಡಿದರು. ನಂತರ ಯಾವುದೇ ರೀತಿ ಚರ್ಚೆ ನಡೆಸದೆ ಸಂಪುಟ ಸಭೆಯಿಂದ ಎದ್ದು ಹೊರ ನಡೆದರು.
ಕ್ಲಾಸ್ -1 ಮತ್ತು ಮೇಲಿನ ಅಧಿಕಾರಿಗಳ ವರ್ಗಾವಣೆಯನ್ನು ಸಿಎಂ ನಿರ್ವಹಿಸುತ್ತಾರೆ, ಆದರೆ ಕೆಳ ಹಂತವನ್ನು ಸಚಿವರು ಮತ್ತು ಶಾಸಕರಿಗೆ ಬಿಡಲಾಗುತ್ತದೆ. ಮೇ ಮತ್ತು ಜೂನ್‌ನಲ್ಲಿ ಅಧಿಕೃತ ವರ್ಗಾವಣೆ ಸರ್ವೇ ಸಾಮಾನ್ಯ. ಸುಮಾರು ಶೇ. 6-8 ರಷ್ಟು ಸರ್ಕಾರಿ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುತ್ತದೆ.
ಈ ವರ್ಷ, ಜೂನ್ 6 ರವರೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಸರ್ಕಾರವು ವರ್ಗಾವಣೆ ಅರ್ಜಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಚುನಾವಣಾ ಫಲಿತಾಂಶದ ನಂತರ ಅಧಿಕಾರಿಗಳ ವರ್ಗಾವಣೆಗೆ ಭಾರಿ ಒತ್ತಡ ಬಂದಿದೆ. ಕಳೆದ ವರ್ಷ ಕೆಲವು ಇಲಾಖೆಗಳಲ್ಲಿ ಶೇ.6-8ರಷ್ಟು ನಿಯಮ ಮೀರಿ ವರ್ಗಾವಣೆಗಳು ನಡೆದಿತ್ತು. ಅಂದರೆ ಶೇ.20-25ರಷ್ಟು ವರ್ಗಾವಣೆಯಾಗಿತ್ತು. ಹಣಕಾಸಿನ ಲಾಭಕ್ಕಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು, ಇದು ಸರ್ಕಾರದ ಇಮೇಜ್‌ಗೆ ಧಕ್ಕೆ ತಂದಿತ್ತು.
ಕೇಂದ್ರ ಉಕ್ಕು ಸಚಿವ ಎಚ್‌ಡಿ ಕುಮಾರಸ್ವಾಮಿ ಜುಲೈ 2023 ರಲ್ಲಿ ಪೆನ್ ಡ್ರೈವ್ ರಿಲೀಸ್ ಮಾಡುವುದಾಗಿ ಹೇಳಿದ್ದರು. ಅದರಲ್ಲಿ ವರ್ಗಾವಣೆ ಹಗರಣದ ವಿವರಗಳಿವೆ ಎಂದು ಆರೋಪಿಸಿದರು. ಇಂಧನ ಇಲಾಖೆಯಲ್ಲಿ ಕೆಲವು ಸಚಿವರು ಪ್ರತಿ ವರ್ಗಾವಣೆಗೆ 10 ಕೋಟಿ ರೂ.ವರೆಗೆ ಪಡೆದಿದ್ದಾರೆ ಎಂದು ಅವರು ಕಿಡಿಕಾರಿದ್ದರು. ಒಬ್ಬ ನಿರ್ದಿಷ್ಟ ಅಧಿಕಾರಿ ದಿನಕ್ಕೆ 50 ಲಕ್ಷ ರೂ.ಗಳನ್ನು ಪಡೆದಿದ್ದಾರೆ ಮತ್ತು ಅನೇಕ ಜನರು ವರ್ಗಾವಣೆಯಿಂದ ಪ್ರಯೋಜನ ಪಡೆದಿದ್ದಾರೆ ಎಂದು ಅವರು ಕುಮಾರಸ್ವಾಮಿ ಆರೋಪಿಸಿದ್ದರು.
ಕೆಲವು ಸಚಿವರು ಸೇರಿದಂತೆ ಹಾಗೂ ಪ್ರಭಾವಿ ವ್ಯಕ್ತಿಗಳು ನಂತರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪೆನ್ ಡ್ರೈವ್‌ನಲ್ಲಿರುವ ವಿಷಯಗಳನ್ನು ಬಹಿರಂಗಪಡಿಸದಂತೆ ಮನವಿ ಮಾಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತನಿಖೆಯಿಂದ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



